More

    ಟ್ರೆಕ್ಕಿಂಗ್‌ಗೆ ಹೋಗಿದ್ದ ಕ್ರಿಕೆಟಿಗ 250 ಅಡಿ ಪ್ರಪಾತಕ್ಕೆ ಬಿದ್ದು ಮೃತ್ಯು, ಮುಳುವಾಯಿತೇ ಸೆಲ್ಫಿ?

    ಮುಂಬೈ: ಮಹಾರಾಷ್ಟ್ರ ರಣಜಿ ತಂಡದ ಮಾಜಿ ಆಟಗಾರ ಶೇಖರ್ ಗಾವ್ಲಿ ನಾಸಿಕ್‌ನಲ್ಲಿ ಟ್ರೆಕ್ಕಿಂಗ್‌ಗೆ ಹೋಗಿದ್ದ ವೇಳೆ 250 ಅಡಿ ಎತ್ತರದ ಬೆಟ್ಟದಿಂದ ಪ್ರಪಾತಕ್ಕೆ ಬಿದ್ದು ಮೃತಪಟ್ಟಿರುವ ದುರ್ಘಟನೆ ಮಂಗಳವಾರ ಸಂಜೆ ನಡೆದಿದೆ. ಸೆಲ್ಫಿ ತೆಗೆದುಕೊಳ್ಳುವ ವೇಳೆ ಅವರು ಜಾರಿ ಬಿದ್ದಿದ್ದಾರೆ ಎಂದೂ ಹೇಳಲಾಗುತ್ತಿದ್ದು, ಘಟನೆಯ ಬಗ್ಗೆ ಪೊಲೀಸ್ ತನಿಖೆ ಮುಂದುವರಿದಿದೆ.

    ಪಶ್ಚಿಮ ಘಟ್ಟದ ಇಗಟ್‌ಪುರಿ ಬೆಟ್ಟಕ್ಕೆ ಗೆಳೆಯರೊಂದಿಗೆ ಟ್ರೆಕ್ಕಿಂಗ್‌ಗೆ ಹೋಗಿದ್ದ ವೇಳೆ ಸಮತೋಲನ ತಪ್ಪಿ ಅವರು ಬಿದ್ದಿದ್ದರು ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ. ‘ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಶೇಖರ್ ಗಾವ್ಲಿ ಮೃತದೇಹ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು ಎಂದು ಇಟಾಗ್‌ಪುರಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ. ಅವರು ಬೆಟ್ಟದಿಂದ ಸಮತೋಲನ ತಪ್ಪಿ ಪ್ರಪಾತಕ್ಕೆ ಬಿದ್ದ ಬಳಿಕ ಮೊದಲಿಗೆ, ಅವರು ಕಾಣೆಯಾಗಿದ್ದಾರೆ ಎಂದು ಸುದ್ದಿಯಾಗಿತ್ತು.

    ಇದನ್ನೂ ಓದಿ: ಕೆರಿಬಿಯನ್ ಟಿ20 ಲೀಗ್‌ನಲ್ಲಿ ನೈಟ್‌ರೈಡರ್ಸ್‌ಗೆ ಸತತ 7ನೇ ಗೆಲುವು

    45 ವರ್ಷದ ಶೇಖರ್ ಗಾವ್ಲಿ ಬಲಗೈ ಬ್ಯಾಟ್ಸ್‌ಮನ್ ಮತ್ತು ಲೆಗ್ ಸ್ಪಿನ್ನರ್ ಆಗಿದ್ದರು. ಮಹಾರಾಷ್ಟ್ರ ಪರ 2 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಮಹಾರಾಷ್ಟ್ರ ತಂಡದ ಸಹಾಯಕ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ. ಅವರು ಪ್ರಸಕ್ತ 23 ವಯೋಮಿತಿ ತಂಡದ ಫಿಟ್ನೆಸ್ ಟ್ರೇನರ್ ಆಗಿದ್ದಾರೆ.

    ಪಾಕಿಸ್ತಾನ ವಿರುದ್ಧ ಟಿ20 ಸರಣಿಯಲ್ಲಿ ಸಮಬಲಕ್ಕೆ ತೃಪ್ತಿಪಟ್ಟ ಇಂಗ್ಲೆಂಡ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts