More

    ಈ ದೇಶದಲ್ಲಿ ಕರೊನಾ ಭಯವಿಲ್ಲದೆ ಕ್ರಿಕೆಟ್ ಶುರುವಾಗಿದೆ!

    ಕಿಂಗ್ಸ್‌ಟೌನ್: ಕರೊನಾ ವೈರಸ್ ಹಾವಳಿ ಶುರುವಾದ ಬಳಿಕ 2 ತಿಂಗಳ ಕಾಲ ಕ್ರೀಡಾ ಚಟುವಟಿಕೆಗಳು ಸಂಪೂರ್ಣ ಸ್ಥಬ್ತಗೊಂಡಿದ್ದವು. ಇದೀಗ ನಿಧಾನವಾಗಿ ಕೆಲ ದೇಶಗಳಲ್ಲಿ ುಟ್‌ಬಾಲ್, ಬೇಸ್‌ಬಾಲ್ ಕ್ರೀಡೆಗಳು ಶುರುವಾಗಿವೆ. ಇನ್ನು ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ದೇಶಗಳು ಕ್ರಿಕೆಟ್ ಚಟುವಟಿಕೆಯನ್ನೂ ಆರಂಭಿಸುವ ಸಿದ್ಧತೆಯಲ್ಲಿವೆ. ಆದರೆ ವಿಶ್ವದ ಒಂದು ಮೂಲೆಯಲ್ಲಿ ಮಾತ್ರ ಈಗಾಗಲೆ ಸ್ಪರ್ಧಾತ್ಮಕ ಕ್ರಿಕೆಟ್ ಚಟುವಟಿಕೆ ಎಗ್ಗಿಲ್ಲದೆ ಶುರುವಾಗಿದೆ! ಕರೊನಾ ವೈರಸ್ ಭಯವಿಲ್ಲದೆ ಪ್ರೇಕ್ಷಕರೂ ಕ್ರೀಡಾಂಗಣಕ್ಕೆ ಬಂದು ಪಂದ್ಯಗಳನ್ನು ನೋಡುತ್ತಿದ್ದಾರೆ! ಕೆರಿಬಿಯನ್ ದ್ವೀಪ ಸಮೂಹದ ಸೇಂಟ್ ವಿನ್ಸೆಂಟ್ ದೇಶದಲ್ಲಿ ನಿಗದಿಯಂತೆಯೇ ಕ್ರಿಕೆಟ್ ಟೂರ್ನಿಯೊಂದು ನಡೆಯುತ್ತಿದೆ. ಅದುವೇ ವಿನ್ಸಿ ಪ್ರೀಮಿಯರ್ ಲೀಗ್ ಟಿ10 ಟೂರ್ನಿ.

    ಇದನ್ನೂ ಓದಿ: ಶೂಟರ್ ಅಪೂರ್ವಿ ಈಗ ಫೋಟೋಗ್ರಾಫರ್!

    ಶುಕ್ರವಾರ ಆರಂಭಗೊಂಡಿರುವ ವಿನ್ಸಿ ಪ್ರೀಮಿಯರ್ ಲೀಗ್‌ನಲ್ಲಿ ವೆಸ್ಟ್ ಇಂಡೀಸ್‌ನ ಕೆಲ ಪ್ರಮುಖ ಕ್ರಿಕೆಟಿಗರೂ ಕಣಕ್ಕಿಳಿದಿದ್ದಾರೆ. ಅವರೆಂದರೆ ಸುನೀಲ್ ಆಂಬ್ರಿಸ್, ಕೇಸ್ರಿಕ್ ವಿಲಿಯಮ್ಸ್ ಮತ್ತು ಒಬೆಡ್ ಮೆಕ್‌ಕಾಯ್. ಆರು ತಂಡಗಳು ಕಣದಲ್ಲಿರುವ 10 ದಿನಗಳ ಟಿ10 ಟೂರ್ನಿಯಲ್ಲಿ ಚೆಂಡಿನ ಮೇಲೆ ಎಂಜಲು ಹಚ್ಚಲು ಮಾತ್ರ ಅವಕಾಶ ನೀಡಲಾಗಿಲ್ಲ. ಐಸಿಸಿ ಕ್ರಿಕೆಟ್ ಸಮಿತಿಯ ಶಿಾರಸು ಇದಕ್ಕೆ ಕಾರಣ.

    ಇದನ್ನೂ ಓದಿ: ಪದವಿಗಾಗಿ ಕ್ರಿಕೆಟ್‌ನಿಂದಲೇ ದೂರ ಹೋಗಿದ್ದ ಸ್ಪಿನ್ ಮಾಂತ್ರಿಕ

    32 ದ್ವೀಪಗಳ ಸಮೂಹವಾಗಿರುವ ಕೆರಿಬಿಯನ್‌ನಲ್ಲಿ ಸೇಂಟ್ ವಿನ್ಸೆಂಟ್ ಒಟ್ಟು 369 ಚದರ ಕಿಲೋಮೀಟರ್ ವಿಸ್ತೀರ್ಣದ ಸಣ್ಣ ದೇಶವಾಗಿದ್ದು, 1.10 ಲಕ್ಷ ಜನಸಂಖ್ಯೆ ಹೊಂದಿದೆ. ಇಲ್ಲಿ ಕರೊನಾ ಹಾವಳಿ ಬಹಳ ಕಡಿಮೆ ಇದ್ದು, ಇದುವರೆಗೆ 18 ಪ್ರಕರಣಗಳಷ್ಟೇ ಪತ್ತೆಯಾಗಿವೆ. ಈ ಪೈಕಿ 14 ಮಂದಿ ಈಗಾಗಲೆ ಗುಣಮುಖರಾಗಿದ್ದಾರೆ. ಸೇಂಟ್ ವಿನ್ಸೆಂಟ್‌ನಿಂದ ಇದುವರೆಗೆ 8 ಕ್ರಿಕೆಟಿಗರು ವೆಸ್ಟ್ ಇಂಡೀಸ್ ತಂಡದ ಪರ ಟೆಸ್ಟ್ ಕ್ರಿಕೆಟ್ ಆಡಿದ್ದಾರೆ. ಆದರೆ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸೇಂಟ್ ವಿನ್ಸೆಂಟ್‌ನಿಂದ ಯಾವುದೇ ತಂಡ ಕಣಕ್ಕಿಳಿಯುವುದಿಲ್ಲ.

    ವನುಅತುನಲ್ಲೂ ಕ್ರಿಕೆಟ್ ನಡೆದಿತ್ತು

    ಈ ದೇಶದಲ್ಲಿ ಕರೊನಾ ಭಯವಿಲ್ಲದೆ ಕ್ರಿಕೆಟ್ ಶುರುವಾಗಿದೆ!

    ಕಳೆದ ತಿಂಗಳು ದಕ್ಷಿಣ ಫೆಸಿಫಿಕ್ ದ್ವೀಪರಾಷ್ಟ್ರ ವನುಅತುನಲ್ಲೂ ಕ್ರಿಕೆಟ್ ಟೂರ್ನಿಯೊಂದು ಕರೊನಾ ಭಯವಿಲ್ಲದೆ ನಡೆದಿತ್ತು. ಐಸಿಸಿ ಸದಸ್ಯ ರಾಷ್ಟ್ರವಾಗಿರುವ ವನುಅತು ಒಟ್ಟು ಜನಸಂಖ್ಯೆ 3 ಲಕ್ಷ. ಆದರೆ ತಿಂಗಳು ಇಲ್ಲಿನ ಮಹಿಳೆಯರ ದೇಶೀಯ ಟಿ20 ಕ್ರಿಕೆಟ್ ಟೂರ್ನಿಯ ೈನಲ್ ಪಂದ್ಯವನ್ನು ನಾಲ್ಕೂವರೆ ಲಕ್ಷಕ್ಕೂ ಅಧಿಕ ಜನರು ಟಿವಿಯಲ್ಲಿ ವೀಕ್ಷಿಸಿದ್ದರು. ವಿಶ್ವದೆಲ್ಲೆಡೆ ಪಂದ್ಯವನ್ನು ನೇರಪ್ರಸಾರ ಮಾಡಿದ್ದು ಇದಕ್ಕೆ ಕಾರಣವಾಗಿತ್ತು. ಲೈವ್ ಕ್ರಿಕೆಟ್ ಕಾಣದೆ ಬೇಸತ್ತಿದ್ದ ಕ್ರಿಕೆಟ್ ಪ್ರೇಮಿಗಳು ವನುಅತು ಟೂರ್ನಿಯನ್ನೂ ಕುತೂಹಲದಿಂದ ವೀಕ್ಷಿಸಿದ್ದರು. ವನುಅತುನಲ್ಲಿ ಇದುವರೆಗೆ ಒಂದೂ ಕರೊನಾ ಸೋಂಕಿನ ಪ್ರಕರಣ ವರದಿಯಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts