More

    ವಿಕ್ರಾಂತ್ ರೋಣ: ಯಾವ ಭಾಷೆ ಇದ್ದರೂ ಕನ್ನಡದಲ್ಲೇ ಕೇಳಿ!

    ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರತಂಡ ಹಲವು ಹೊಸತನಗಳಿಗೆ ನಾಂದಿ ಹಾಡಿದೆ. ಎನ್​ಎಫ್​ಟಿ, ಕಿಚ್ಚ ವರ್ಸ್​ಗಳವರೆಗೂ ಸಾಮ್ರಾಜ್ಯ ವಿಸ್ತರಿಸಿ, ಬುರ್ಜ್ ಖಲೀಫಾದ ಮೇಲೆ ಮಿಂಚಿ, ಇದೇ ಗುರುವಾರದಿಂದ ಥಿಯೇಟರ್​ಗಳಲ್ಲಿ ಥ್ರೀಡಿಯಲ್ಲಿ ಗುಡುಗಲು ಸಿದ್ಧವಾಗಿದೆ. ಅದರ ಜತೆಜತೆಗೇ ಈಗ ಆ್ಯಪ್​ ಒಂದರ ಸಹಾಯದೊಂದಿಗೆ ಮತ್ತೊಂದು ತಾಂತ್ರಿಕ ಮೈಲಿಗಲ್ಲು ಸ್ಥಾಪಿಸಲು ಮುಂದಾಗಿದೆ. ಈ ಆ್ಯಪ್​ನ ಹೆಸರು ಸಿನಿಡಬ್ಸ್. ಈ ಆಪ್​ನ ಮೂಲಕ ಬೇರೆ ಭಾಷೆಯ ಜನ ‘ವಿಕ್ರಾಂತ್ ರೋಣ’ ಚಿತ್ರವನ್ನು ತಮ್ಮ ಭಾಷೆಯಲ್ಲೇ ಕೇಳಬಹುದು. ಉದಾಹರಣೆಗೆ, ಹೊರ ದೇಶ ಮತ್ತು ರಾಜ್ಯಗಳಲ್ಲಿರುವ ಕನ್ನಡಿಗರಿಗೆ ‘ವಿಕ್ರಾಂತ್ ರೋಣ’ ಚಿತ್ರವನ್ನು ಕನ್ನಡದಲ್ಲೇ ನೋಡಬೇಕು ಎಂಬ ಆಸೆಯಿರುತ್ತದೆ. ಆದರೆ, ಕನ್ನಡ ಅವತರಣಿಕೆ ಅಲ್ಲಿ ರಿಲೀಸ್ ಆಗಿರುವುದಿಲ್ಲ. ಈ ಆಪ್ ಮೂಲಕ ಕನ್ನಡಿಗರು ಬೇರೆ ಭಾಷೆಗಳ ಥಿಯೇಟರ್​ನಲ್ಲಿ ಕುಳಿತು ಕನ್ನಡದಲ್ಲೇ ಚಿತ್ರ ನೋಡಬಹುದು. ಅದೇ ರೀತಿ ಕರ್ನಾಟಕದಲ್ಲಿರುವ ಅನ್ಯಭಾಷಿಕರು ಅರ್ಥಾತ್ ತಮಿಳು, ತೆಲುಗು ಹಾಗೂ ಮಲಯಾಳಿಗಳಿಗೆ ತಮ್ಮದೇ ಭಾಷೆಯಲ್ಲಿ ಸಿನಿಮಾ ನೋಡಬೇಕು ಎಂಬ ಆಸೆಯಿರುತ್ತದೆ. ಆದರೆ, ಇಲ್ಲಿ ಆ ಭಾಷೆಗಳಲ್ಲಿ ಸಿನಿಮಾ ಇರುವುದಿಲ್ಲ. ಹಾಗೆಯೇ ಅನ್ಯಭಾಷಿಕರು ಕನ್ನಡ ಚಿತ್ರದ ಥಿಯೇಟರ್​ನಲ್ಲಿ ತಮ್ಮ ಭಾಷೆಯಲ್ಲೇ ಸಿನಿಮಾ ನೋಡಬಹುದು!

    ಪ್ರೇಕ್ಷಕರು ಏನು ಮಾಡಬೇಕು?

    ತಮ್ಮ ಆಂಡ್ರಾಯ್್ಡ ಅಥವಾ ಆಪಲ್ ಮೊಬೈಲ್​ನಲ್ಲಿ ಸಿನಿಡಬ್ಸ್ ಎಂಬ ಆಪ್​ಅನ್ನು ಡೌನ್​ಲೋಡ್ ಮಾಡಿಕೊಳ್ಳಬೇಕು. ಬಳಿಕ ‘ವಿಕ್ರಾಂತ್ ರೋಣ’ ಚಿತ್ರವನ್ನು ಆಯ್ಕೆ ಮಾಡಿಕೊಂಡು, ಅದರಲ್ಲಿ ಇರುವ ಆರು ಭಾಷೆಗಳಲ್ಲಿ ತಮ್ಮಿಷ್ಟದ ಭಾಷೆಯನ್ನು ಡೌನ್​ಲೋಡ್ ಮಾಡಿಕೊಳ್ಳಬೇಕು. ನಂತರ ಥಿಯೇಟರ್ ಒಳಗೆ ಕುಳಿತು ಹೆಡ್​ಫೋನ್ ಮೂಲಕ ತಮ್ಮಿಷ್ಟದ ಭಾಷೆಯಲ್ಲಿ ಸಿನಿಮಾ ನೋಡಬಹುದು. ಸಿನಿಮಾ ನೋಡುವ ವೇಳೆ ಮೊಬೈಲ್​ಗೆ ಕರೆ ಬಂದರೂ ಸಮಸ್ಯೆಯಿಲ್ಲ. ಏಕೆಂದರೆ, ಕರೆ ಕಟ್ ಆದ ಬಳಿಕ ಮತ್ತೆ ಆಪ್​ಗೆ ಹೋದರೆ ಸಿನಿಮಾ ಎಲ್ಲಿಂದ ಮುಂದುವರಿದಿದೆಯೋ ಅಲ್ಲಿಂದಲೇ ಅದು ಸಿಂಕ್ ಆಗಿರುತ್ತದೆ. ಥಿಯೇಟರ್​ನಿಂದ ಹೊರಬಂದ ಬಳಿಕ ಡೌನ್​ಲೋಡ್ ಆಗಿರುವ ಆಡಿಯೋ ತಾನಾಗಿಯೇ ಕಣ್ಮರೆಯಾಗಿರುತ್ತದೆ. ಹೆಡ್​ಫೋನ್ ಇಲ್ಲದಿದ್ದರೆ ಈ ಆಪ್ ಕೆಲಸ ಮಾಡುವುದಿಲ್ಲ. ಹೀಗಾಗಿ ಸಿನಿಮಾ ಪೈರಸಿಯಾಗುವ ಪ್ರಶ್ನೆಯೇ ಇಲ್ಲ! ಇದೇ ಆಪ್ ಮೂಲಕ ಓಟಿಟಿಯಲ್ಲೂ ಸಿನಿಮಾ ಅಥವಾ ವೆಬ್ ಸರಣಿಗಳನ್ನು ನೋಡಬಹುದು. ಇದಕ್ಕೆ ಹೆಚ್ಚುವರಿ ಹಣ ಕೊಡುವ ಅಗತ್ಯವೂ ಇಲ್ಲ. ಸದ್ಯಕ್ಕೆ ಈ ಆಪ್ ಸಂಪೂರ್ಣ ಉಚಿತ!

    ಮಲಗಿದ್ದವರ ಮೇಲೇ ಸಾಗಿದ ಟೆಂಪೋ; ಒಬ್ಬನ ಸಾವು, ಮೂವರಿಗೆ ಗಂಭೀರ ಗಾಯ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts