More

    ಕಡಿಮೆ ದರದಲ್ಲಿ ವಿಕ್ರಾಂತ್ ರೋಣ: ಪ್ರೇಕ್ಷಕರನ್ನು ಸೆಳೆಯಲು ಚಿತ್ರತಂಡದಿಂದ ಹೊಸ ಪ್ರಯತ್ನ..

    ಬೆಂಗಳೂರು: ಜನರನ್ನು ಚಿತ್ರಮಂದಿರಕ್ಕೆ ಕರೆತರುವ ನಿಟ್ಟಿನಲ್ಲಿ ‘ವಿಕ್ರಾಂತ್ ರೋಣ’ ಚಿತ್ರತಂಡ ಹೊಸ ಯೋಜನೆ ಹಾಕಿಕೊಂಡಿದೆ. ಮಲ್ಟಿಪ್ಲೆಕ್ಸ್ ಮತ್ತು ಏಕಪರದೆಯ ಚಿತ್ರಮಂದಿರಗಳಲ್ಲಿ ಚಿತ್ರದ 3ಡಿ ಅವತರಣಿಕೆಯ ಪ್ರವೇಶ ದರವನ್ನು ಕಡಿಮೆ ಮಾಡಲಾಗಿದೆ. ಈಗಾಗಲೇ ಈ ಯೋಜನೆ ಸೋಮವಾರದಿಂದ ಜಾರಿಗೆ ಬಂದಿದ್ದು, ಮಲ್ಟಿಪ್ಲೆಕ್ಸ್ ಗಳಲ್ಲಿ 150 ರೂ. ಹಾಗೂ ಏಕಪರದೆಯ ಚಿತ್ರಮಂದಿರಗಳಲ್ಲಿ ಚಿತ್ರವನ್ನು 100 ರೂ. ಕೊಟ್ಟು ನೋಡಬಹುದಾಗಿದೆ.

    ‘ವಿಕ್ರಾಂತ್ ರೋಣ’, ಜುಲೈ 28ಕ್ಕೆ ಜಗತ್ತಿನಾದ್ಯಂತ ಬಿಡುಗಡೆಯಾಗಿತ್ತು. ಕಳೆದ ಸೋಮವಾರದ ನಂತರ ರಾಜ್ಯಾದ್ಯಂತ ಮಳೆ ಹೆಚ್ಚಾದ್ದರಿಂದ ಸಹಜವಾಗಿಯೇ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿತ್ತು. ಪ್ರೇಕ್ಷಕರನ್ನು ಪುನಃ ಚಿತ್ರಮಂದಿರದತ್ತ ಕರೆತರಬೇಕು ಮತ್ತು 3ಡಿ ಅನುಭವ ಎಲ್ಲರಿಗೂ ಸಿಗಬೇಕು ಎಂಬ ನಿಟ್ಟಿನಲ್ಲಿ ನಿರ್ವಪಕ ಜಾಕ್ ಮಂಜು ಪ್ರವೇಶ ದರ ಕಡಿಮೆ ಮಾಡಿಸಿದ್ದಾರೆ. ಈ ಕುರಿತು ‘ವಿಜಯವಾಣಿ’ ಜತೆ ಮಾತನಾಡಿದ ಅವರು, ‘ಮೊದಲ ನಾಲ್ಕು ದಿನ ಒಳ್ಳೆಯ ಕಲೆಕ್ಷನ್ ಆಯಿತು. ಆ ನಂತರ ಕಲೆಕ್ಷನ್ ಕಡಿಮೆಯಾಯಿತು. ಜತೆಗೆ ಮಳೆ ಬೇರೆ. ಜನರಿಗೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಪ್ರವೇಶ ದರ ಕಡಿಮೆ ಮಾಡಿದ್ದೇವೆ’ ಎನ್ನುತ್ತಾರೆ.

    ವಾರಾಂತ್ಯದಲ್ಲಿ ಕಲೆಕ್ಷನ್ ಚೆನ್ನಾಗಿತ್ತು ಎನ್ನುವ ಮಂಜು, ಮಳೆ ಮಧ್ಯೆಯೂ ಭಾನುವಾರ ಮಲ್ಟಿಪ್ಲೆಕ್ಸ್​ಗಳಲ್ಲಿ 70 ಲಕ್ಷ ರೂ. ಕಲೆಕ್ಷನ್ ಆಗಿದೆ. ಹಬ್ಬದ ದಿನ 35 ಲಕ್ಷ ರೂ. ಬಂದಿದೆ. ಬಿ ಮತ್ತು ಸಿ ಸೆಂಟರ್​ನಲ್ಲಿ ಕಲೆಕ್ಷನ್ ಕಡಿಮೆ ಇದ್ದರೂ, ಶಿವಮೊಗ್ಗ, ದಾವಣಗೆರೆ ಮುಂತಾದ ಕಡೆ ಪ್ರತಿಕ್ರಿಯೆ ಚೆನ್ನಾಗಿದೆ. ಬರೀ ಕರ್ನಾಟಕವಷ್ಟೇ ಅಲ್ಲ, ಆಂಧ್ರ ಮತ್ತು ಹಿಂದಿ ಬೆಲ್ಟ್​ನಲ್ಲೂ ಕಲೆಕ್ಷನ್ ಚೆನ್ನಾಗಿದೆ. ಅಲ್ಲಿ ಜನ ನಿರೀಕ್ಷೆ ಇಲ್ಲದೆ ಹೋಗಿ ಸಿನಿಮಾ ನೋಡುತ್ತಿದ್ದಾರೆ. ಇಲ್ಲಿ, ನಾವು ಚಿತ್ರದ ಬಗ್ಗೆ ಇನ್ನಷ್ಟು ಸ್ಪಷ್ಟತೆ ನೀಡಬೇಕಿತ್ತು. ಪ್ರೇಕ್ಷಕರು ಚಿತ್ರದ ಬಗ್ಗೆ ಬೇರೆ ನಿರೀಕ್ಷೆ ಇಟ್ಟುಕೊಂಡಿದ್ದರೇನೋ? ಚಿತ್ರ ಇಂಥ ಜಾನರ್​ನಲ್ಲಿರುತ್ತದೆ ಎಂದು ಮೊದಲೇ ಹೇಳಬೇಕಿತ್ತು. ಅದರ ಹೊರತಾಗಿ, ಯಾವುದೇ ನಿರೀಕ್ಷೆ ಇಲ್ಲದೆ ಬರುತ್ತಿರುವ ಜನ ಇಷ್ಟಪಡುತ್ತಿದ್ದಾರೆ’ ಎನ್ನುತ್ತಾರೆ ಮಂಜು.

    ಯಾರದು..? ಚರ್ಚೆ ಆಗುತ್ತಿದೆ ಬೆಡ್​ರೂಮ್ ವಿಷಯ: ಇಂದು ರಾತ್ರಿ ಕಳೆಗಟ್ಟಲಿದ್ಯಾ ಬಿಗ್​ಬಾಸ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts