More

    ವಿಜಯವಾಣಿ ಎಜುಕೇಷನ್​ ಎಕ್ಸ್​ಪೋ-2023 ನಾಳೆ ಆರಂಭ

    ಜಯನಗರ 5ನೇ ಬ್ಲಾಕ್​​​ನ ಶಾಲಿನಿ ಮೈದಾನದಲ್ಲಿ ನಾಳೆ ಆರಂಭ

    ಸ್ಟಾರ್ಟಪ್​ಗೆ ವೇದಿಕೆ ಸೃಷ್ಟಿ, ಉತ್ತಮ ಚಿಂತನೆಗೆ ಬಹುಮಾನ

    ಬೆಂಗಳೂರು: ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಆಯೋಜಿಸಿರುವ ‘ಎಜುಕೇಷನ್‌ ಎಕ್ಸ್‌ಪೋ’ ಶನಿವಾರ ಮತ್ತು ಭಾನುವಾರ (ಮೇ 27, 28) ನಡೆಯಲಿದೆ. ಈ ಬಾರಿಯ ಎಕ್ಸ್‌ಪೋದಲ್ಲಿ ನವೋದ್ಯಮಕ್ಕೆ ವೇದಿಕೆ ಕಲ್ಪಿಸುತ್ತಿರುವುದು ವಿಶೇಷ. ವಿನೂತನವಾದ ಐಡಿಯಾಗಳನ್ನು ಪ್ರದರ್ಶಿಸಿದವರಿಗೆ ನಗದು ಬಹುಮಾನವೂ ಸಿಗಲಿದೆ.

    ಜಯನಗರ 5ನೇ ಬ್ಲಾಕ್​​​ನಲ್ಲಿರುವ ಶಾಲಿನಿ ಮೈದಾನದಲ್ಲಿ ಎಕ್ಸ್​ಪೋ ನಡೆಯಲಿದ್ದು, ಸಚಿವ ರಾಮಲಿಂಗಾರೆಡ್ಡಿ ಹಾಗೂ ಚಿತ್ರ ನಟಿ ಮೇಘಾ ಶೆಟ್ಟಿ ಉದ್ಘಾಟಿಸಲಿದ್ದಾರೆ. ಶಾಸಕ ಸಿ.ಕೆ ರಾಮಮೂರ್ತಿ ಉಪಸ್ಥಿತರಿರುವರು. ಉತ್ತಮ ಐಡಿಯಾ ಗಳು ಹೊರಬಂದರೆ ‘ರಾಮಯ್ಯ ಎವೊಲ್ಯೂಟ್ ಫೌಂಡೇಷನ್‌’ ವತಿಯಿಂದ ಸ್ಟಾರ್ಟಪ್ ಆರಂಭಿಸಲು ಅವಕಾಶ ಕಲ್ಪಿಸಲಾಗುತ್ತದೆ.

    ಸ್ಟಾರ್ಟಪ್ ಆರಂಭಿಸಬೇಕೆಂಬ ಉತ್ಸಾಹದಲ್ಲಿರುವ ಯುವಕರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಯುವಕರಿಗಾಗಿಯೇ ನವೋದ್ಯಮ ವಿಭಾಗ ತೆರೆಯಲಾಗಿದೆ. ವಿದ್ಯಾರ್ಥಿಯು ಯಾವುದೇ ಬಿಜಿನೆಸ್ ಐಡಿಯಾವನ್ನು ಎಕ್ಸ್‌ ಪೋದಲ್ಲಿ ಪ್ರಸ್ತುತಪಡಿಸಬಹುದು. ವಿದ್ಯಾರ್ಥಿಗಳ ಹೊಸ ಚಿಂತನೆಗಳನ್ನು ‘ರಾಮಯ್ಯ ಫೌಂಡೇಷನ್’ನ ತೀರ್ಪುಗಾರರ ತಂಡ ಆಯ್ಕೆ ಮಾಡಲಿದೆ. ವಿಜೇತರಿಗೆ ನಗದು ಬಹುಮಾನ ಮತ್ತು ನವೋದ್ಯಮ ಆರಂಭಿಸಲು ಬೆಂಬಲ ನೀಡಲಾಗುತ್ತದೆ. ಎಕ್ಸ್‌ಪೋ ಎರಡೂ ದಿನಗಳು ಬೆಳಗ್ಗೆ 9ರಿಂದ ಸಂಜೆ 5 ಗಂಟೆ ಯವರೆಗೂ ನಡೆಯಲಿದೆ. ನವೋದ್ಯಮಕ್ಕೆ ಸಂಬಂಧಿಸಿದ ಚರ್ಚೆ ಗಳು ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ.

    ವಿದ್ಯಾರ್ಥಿಗಳಿಗೆ ಸಂಗ್ರ ಮಾಹಿತಿ:
    ವೃತ್ತಿ ಶಿಕ್ಷಣ, ಉನ್ನತ ಶಿಕ್ಷಣ ಕುರಿತು ವಿದ್ಯಾರ್ಥಿಗಳಿಗಿರುವ ಸಚಿವ ಗೊಂದಲವನ್ನು ನಿವಾರಣೆ ಮಾಡುವುದಕ್ಕೆ ಎಕ್ಸ್‌ಪೋ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಮತ್ತು ಪಾಲಕರು ಶೆಟ್ಟಿ ಎಕ್ಸ್‌ಪೋಗೆ ಆಗಮಿಸಿ ತಮ್ಮಲ್ಲಿರುವ ಗೊಂದಲಗಳನ್ನು  ಪರಿಹರಿಸಿಕೊಳ್ಳುವಂತೆ ಮತ್ತು ಈ ವೇದಿಕೆಯನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ.

    ಎಕ್ಸ್‌ಪೋದಲ್ಲಿ ಹಲವು ವಿಶ್ವವಿದ್ಯಾಲಗಳು, ಇಂಜಿನಿಯರಿಂಗ್​ ಕಾಲೇಜುಗಳು ಹಾಗೂ ಚಾರ್ಟರ್ಡ್​​ ಅಕೌಂಟ್​​​ಟೆಂಟ್​​​ ಸಂಸ್ಥೆಗಳು ಭಾಗವಹಿಸಲಿವೆ. ಇಂಜಿನಿಯರಿಂಗ್​​, ವೈದ್ಯಕೀಯ ಮತ್ತು ದಂತ ವೈದ್ಯಕೀಯ, ಎಂಬಿಎ, ಕಂಪ್ಯೂಟರ್​​ ಸೈನ್ಸ್​​, ಅನಿಮೇಷನ್​, ಹೋಟೆಲ್​​ ಮ್ಯಾನೇಜ್​ಮೆಂಟ್​​​, ಬಾಹ್ಯಾಕಾಶ ತಂತ್ರಜ್ಞಾನ, ಸಮೂಹ ಸಂವಹನ, ಫ್ಯಾಷನ್ ಡಿಸೈನ್ ಸೇರಿ ಇತರ ಕೋರ್ಸ್‌ಗಳ ಬಗ್ಗೆ ಸಂಪೂರ್ಣ ಮಾಹಿತಿ ನ ಪಡೆದುಕೊಳ್ಳಬಹುದು.

    ಪಾಲಕರು, ವಿದ್ಯಾರ್ಥಿಗಳು ಹಾಗೂ  ಶಿಕ್ಷಣ ಸಂಸ್ಥೆಗಳು ಮುಖಾಮುಖಿಯಾಗಿ ಚರ್ಚಿಸಲು ಅವಕಾಶ 3 ನೀಡಲಾಗುತ್ತದೆ. ಒಂದೇ ವೇದಿಕೆಯಲ್ಲಿ ಹಲವು ಕಾಲೇಜುಗಳ ಆಡಳಿತ ಮಂಡಳಿಗಳ ಮಾಹಿತಿ ದೊರೆಯುವುದರಿಂದ ಹಲವೆಡೆ ಮಾಹಿತಿ ಕಲೆಹಾಕುವ ತೊಂದರೆ ಕೂಡ ತಪ್ಪಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts