More

    ವಿಜಯವಾಣಿ ಸಂಪಾದಕೀಯ: ಚೀನಾ ದುರಾಲೋಚನೆ

    ಭಾರತದ ಜಿ-20 ರಾಷ್ಟ್ರಗಳ ಒಕ್ಕೂಟದ ಅಧ್ಯಕ್ಷತೆ ಇಂದು ಆರಂಭವಾಗಲಿದ್ದು, ಅಂತಾರಾಷ್ಟ್ರೀಯ ಸಂಬಂಧಗಳಿಗೆ ಹೊಸ ಭಾಷ್ಯ ಬರೆಯಲು ನರೇಂದ್ರ ಮೋದಿ ನೇತೃತ್ವದಲ್ಲಿ ನವಭಾರತ ಸಜ್ಜಾಗುತ್ತಿರುವ ಹೊತ್ತಿನಲ್ಲೇ ಚೀನಾ ಮತ್ತು ಅಮೆರಿಕ ನಡುವೆ ಕಿಡಿ ಹೊತ್ತಿಕೊಂಡಿದೆ. ಭಾರತದೊಂದಿಗಿನ ತನ್ನ ಸಂಬಂಧದ ವಿಚಾರದಲ್ಲಿ ಹಸ್ತೇಪ ಮಾಡದಂತೆ ಅಮೆರಿಕದ ಅಧಿಕಾರಿಗಳಿಗೆ ಚೀನಾ ತಾಕೀತು ಮಾಡಿದೆ. ಹೀಗಂತ ಅಮೆರಿಕದ ಸಂಸತ್​ಗೆ ಸಲ್ಲಿಸಿರುವ ವರದಿಯಲ್ಲಿ ಅಮೆರಿಕದ ರಕ್ಷಣಾ ಸಚಿವಾಲಯದ ಕೇಂದ್ರ ಕಚೇರಿಯಾಗಿರುವ ಪೆಂಟಗನ್​ ಹೇಳಿದೆ. ಗಡಿ ವಿಚಾರದಲ್ಲಿ ಭಾರತದ ಜತೆ ಸಂರ್ಷ ನಡೆಸುತ್ತಿದ್ದರೂ ಈ ವಿಷಯದಲ್ಲಿ ಬಿಕ್ಕಟ್ಟು ತೀವ್ರವಾಗಿಲ್ಲ ಎಂದು ಬಿಂಬಿಸಲು ಚೀನಾ ಬಯಸುತ್ತಿದೆ. ಭಾರತದ ಜತೆಗಿನ ತನ್ನ ದ್ವಿಪಯ ಸಂಬಂಧದಲ್ಲಿನ ಇತರೆ ವಲಯಗಳಿಗೆ ಹಾನಿಯಾಗದಂತೆ ಎಚ್ಚರ ವಹಿಸಲು ಅದು ಉದ್ದೇಶಿಸಿದೆ. ಆದರೆ, ಗಡಿ ಪ್ರದೇಶದಲ್ಲಿ ಉಭಯ ದೇಶಗಳ ನಡುವೆ ಉದ್ವಿಗ್ನತೆ ಇದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಿರುವುದು ವಾಸ್ತವದ ಪ್ರತಿಕವಾಗಿದೆ. ಭಾರತದೊಂದಿಗೆ ಗಡಿ ತಂಟೆ ತಕರಾರು ತೆಗೆಯುತ್ತಿರುವುದು ಜಗಜ್ಜಾಹಿರು ಸಂಗತಿಯೇ ಆಗಿದೆ.

    2020ರ ಜೂನ್​ 15ರಂದು ಗಲ್ವಾನ್​ ಕಣಿವೆಯಲ್ಲಿ ಉಭಯ ದೇಶಗಳ ನಡುವಿನ ರ್ಷಣೆಯಲ್ಲಿ 20 ಭಾರತೀಯ ಸೈನಿಕರು ಮತ್ತು ಚೀನಾದ 4 ಸೈನಿಕರು ಮೃತಪಟ್ಟಿರುವುದನ್ನು ಕೂಡ ವರದಿಯಲ್ಲಿ ಪೆಂಟಗನ್​ ಪ್ರಸ್ತಾಪಿಸಿದೆ. ಹೀಗಾಗಿ, ಭಾರತದೊಂದಿಗಿನ ಗಡಿ ವಿಷಯದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಚೀನಾ ಹೇಳಿದರೂ ಅಮೆರಿಕವು ಅದಕ್ಕೆ ಕಿವಿಗೊಡುತ್ತಿಲ್ಲ ಎಂಬುದನ್ನು ಪೆಂಟಗನ್​ ವರದಿಯನ್ನು ಬಹಿರಂಗವಾಗಿ ಮಂಡಿಸಿರುವುದೇ ಸೂಚಿಸುತ್ತದೆ.

    ಚೀನಾ ದೇಶವು 1950ರಲ್ಲಿ ಟಿಬೆಟನ್ನು ಆಕ್ರಮಿಸಿಕೊಂಡ ನಂತರ ಭಾರತದೊಂದಿಗಿನ ಗಡಿ ತಕರಾರು ಹೆಚ್ಚಾಗಿದೆ. 1914ರಲ್ಲಿ ಟಿಬೆಟ್​ ಹಾಗೂ ಬ್ರಿಟಿಷ್​ ಭಾರತ ಸರ್ಕಾರದ ನಡುವೆ ಗಡಿ ಒಪ್ಪಂದ ಏರ್ಪಟ್ಟಿದ್ದು, ಮೆಕ್​ ಮೆಹೂನ್​ ರೇಖೆಯನ್ನೇ ವಾಸ್ತವ ನಿಯಂತ್ರಣ ರೇಖೆ (ಎಲ್​ಎಸಿ) ಎಂದು ಒಮ್ಮತಕ್ಕೆ ಬರಲಾಗಿದೆ. ಆದರೆ, ಎಲ್​ಎಸಿಯನ್ನು ಚೀನಾ ಒಪ್ಪಿಕೊಳ್ಳುವುದಿಲ್ಲ. ಅರುಣಾಚಲ ಪ್ರದೇಶದ ತವಾಂಗ್​ ಭಾಗವು ದಣ ಟಿಬೆಟ್​ ಆಗಿದ್ದು, ಅದು ತನಗೆ ಸೇರಬೇಕು ಎಂದೇ ಪ್ರತಿಪಾದಿಸುತ್ತದೆ. ಭಾರತ& ಚೀನಾ ಗಡಿ ವಿವಾದವನ್ನು ಬಳಸಿಕೊಂಡು ಭಾರತವು ಅಮೆರಿಕದೊಂದಿಗೆ ಸ್ನೇಹ& ಬಾಂಧವ್ಯ ವೃದ್ಧಿಸಿಕೊಳ್ಳುವುದನ್ನು ತಡೆಯುವ ದುರುದ್ದೇಶವನ್ನು ಚೀನಾ ಹೊಂದಿರುವುದು ಸ್ಪಷ್ಟವಾಗಿದೆ. ಪೆಂಟಗಾನ್​ ವರದಿಯ ಕೂಡ ಇಂತಹ ಉದ್ದೇಶವನ್ನೇ ಚೀನಾ ಹೊಂದಿರುವುದನ್ನು ಸೂಚಿಸುತ್ತದೆ.
    ಪ್ರಸ್ತುತ 400 ಅಣ್ವಸ್ತ್ರಗಳನ್ನು ಚೀನಾ ಹೊಂದಿದ್ದು, ಇದರ ಉತ್ಪಾದನೆಯನ್ನು ತ್ವರಿತಗೊಳಿಸಿದೆ. ಇದೇ ವೇಗದಲ್ಲಿ ತಯಾರಿಕೆ ಮುಂದುವರಿದರೆ 2035ರ ಹೊತ್ತಿಗೆ ಅಣ್ವಸ್ತ್ರಗಳ ಈ ಸಂಖ್ಯೆಯು 1500ಕ್ಕೆ ತಲುಪಲಿದೆ ಎಂದು ವರದಿ ಹೇಳಿರುವುದು ಚೀನಾದ ದುರಾಲೋಚನೆಯನ್ನು ಬಿಂಬಿಸುವ ಆತಂಕಕಾರಿ ಸಂಗತಿಯಾಗಿದೆ. 2021ರಲ್ಲಿ ಚೀನಾವು ಎಲ್​ಎಸಿಗುಂಟ ನಿರಂತರವಾಗಿ ಪಡೆಗಳನ್ನು ನಿಯೋಜಿಸಿತ್ತು ಮತ್ತು ಇಲ್ಲಿ ಮೂಲಸೌಕರ್ಯಗಳ ನಿರ್ಮಾಣವನ್ನು ಸತತವಾಗಿ ಮುಂದುವರಿಸಿದೆ ಎಂದೂ ವರದಿಯಲ್ಲಿ ಹೇಳಿರುವುದು ಭಾರತಕ್ಕೆ ಎಚ್ಚರಿಕೆಯ ಗಂಟೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts