More

    ಜನಸೇವಕ ಶರಣು ಪಪ್ಪಾಗೆ ವಿಜಯರತ್ನ ಗರಿ; ವಿಜಯವಾಣಿ – ದಿಗ್ವಿಜಯ ಸುದ್ದಿವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

    ಬೆಂಗಳೂರು: ಮಹಾತ್ಮ ಬಸವೇಶ್ವರರ ಕಾಯಕವೇ ಕೈಲಾಸ ಎಂಬ ತತ್ವ ಜೀವನದಲ್ಲಿ ಅಳವಡಿಸಿಕೊಂಡು ಕಲಬುರಗಿಯಲ್ಲಿ ಸಮಾಜೋಧಾರ್ಮಿಕ ಸೇವೆಗಳಲ್ಲಿ ತೊಡಗಿಸಿಕೊಂಡ ಯುವ ಉದ್ಯಮಿ, ಸಮಾಜ ಸೇವಕ ಶರಣಬಸಪ್ಪ ಪಪ್ಪಾ ಅವರು ಕನ್ನಡದ ನಂ.1 ದಿನಪತ್ರಿಕೆ ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿಯ ಪ್ರತಿಷ್ಠಿತ ‘ವಿಜಯರತ್ನ-2022’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

    ಶರಣಬಸಪ್ಪ ಪಪ್ಪಾ ಅವರ ಸಮಾಜಪರ ಕಾರ್ಯಗಳನ್ನು ಗುರುತಿಸಿ ವಿಜಯರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಪಪ್ಪಾ ಸೇರಿ 42 ಸಾಧಕರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಎಂಎಲ್​ಸಿ ಡಾ.ಬಿ.ಜಿ.ಪಾಟೀಲ್, ಚಿತ್ರನಟ ರಮೇಶ್ ಅರವಿಂದ್, ನಟಿ ಶರ್ಮಿಳಾ ಮಾಂಡ್ರೆ, ವಿಆರ್‌ಎಲ್ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ವಿಆರ್‌ಎಲ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷೆ ವಾಣಿ ಆನಂದ ಸಂಕೇಶ್ವರ ಇತರರಿದ್ದರು.

    ಸದ್ದಿಲ್ಲದೆ ಜನಸೇವೆ: ಶರಣಬಸಪ್ಪ ಅವರಿಗೆ ಎಲ್ಲರೂ ಪ್ರೀತಿಯಿಂದ ಶರಣು ಪಪ್ಪಾ ಎಂದೇ ಕರೆಯುತ್ತಾರೆ. ಕಲಬುರಗಿ ಮಕ್ತಂಪುರ ನಿವಾಸಿಯಾದ ಇವರು ಹೆಸರಿಗೆ ತಕ್ಕಂತೆ ಅಪ್ಪಟ ಶರಣಜೀವಿ. ಸದಾ ಬಾಗಿದ ಶಿರ, ಮುಗಿದ ಕೈ. ಎಲ್ಲರೊಂದಿಗೆ ಸೌಜನ್ಯ, ಗೌರವ ಮತ್ತು ಆತ್ಮೀಯ ಭಾವದಿಂದ ನಡೆದುಕೊಳ್ಳುವ ಸರಳಾತಿ ಸರಳ ವ್ಯಕ್ತಿತ್ವ. ಕಾಯಕದಲ್ಲೇ ಜೀವನದ ಸಾರ್ಥಕತೆ ಕಂಡುಕೊಳ್ಳುತ್ತಿದ್ದಾರೆ. ಉದ್ಯಮದ ಮೂಲಕ ಬರುವ ಆದಾಯದಲ್ಲಿ ಒಂದಿಷ್ಟನ್ನು ಅವಶ್ಯವಿದ್ದವರಿಗೆ, ಬಡವರಿಗಾಗಿ ಖರ್ಚು ಮಾಡುತ್ತ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಎನಿಸಿದ ಕಲಬುರಗಿ ಜಿಲ್ಲೆಯಲ್ಲಿ ಸದ್ದಿಲ್ಲದೆ ಸಮಾಜ ಸೇವೆ ಮಾಡುತ್ತ ಹೃದಯವೈಶಾಲ್ಯ ಮೆರೆಯುತ್ತಿದ್ದಾರೆ.

    ಶರಣು ಪಪ್ಪಾ ಕೆಳಮಟ್ಟದಿಂದ ಬೆಳೆದು ಮೇಲೆ ಬಂದವರು. ಔಷಧ ಉದ್ಯಮ ಕ್ಷೇತ್ರದಲ್ಲಿ ದಾಖಲೆ ನಿರ್ಮಿಸಿದ್ದಾರೆ. ವಿಭಿನ್ನ ಕಾರ್ಯಶೈಲಿ, ಕಾಯಕ ನಿಷ್ಠೆ ಎತ್ತರಕ್ಕೆ ತಂದಿದೆ. ಮೆಡಿಕಲ್ ಶಾಪ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರು ಇಂದು ಸ್ವಂತ ನಾಲ್ಕು ಮೆಡಿಕಲ್ ಸ್ಟೋರ್ ಆರಂಭಿಸಿ 30 ಯುವಕರಿಗೆ ಉದ್ಯೋಗ ಕಲ್ಪಿಸಿದ್ದಾರೆ. ಉದ್ದಿಮೆ, ವ್ಯಾಪಾರದ ಜತೆಗೆ ಸಂಕಷ್ಟದಲ್ಲಿದವರ ನೋವಿಗೆ ಮಿಡಿಯುವ ಪರೋಪಕಾರಿ ಗುಣ ಇವರಲ್ಲಿದೆ. ದಾನ-ಧರ್ಮ, ಸಹಾಯಹಸ್ತ ಚಾಚುವಿಕೆ ನಿರಂತರವಿದೆ. ಕಾಯಕ ಮತ್ತು ದಾಸೋಹ ಮುಖಾಂತರ ಜನಮನ ಗೆದ್ದಿದ್ದಾರೆ.

    ದೂರದೃಷ್ಟಿಯುಳ್ಳ ನಾಯಕ: ಹೈದರಾಬಾದ್ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೋದ್ಯಮ ಸಂಸ್ಥೆ ಆಡಳಿತ ಮಂಡಳಿಗೆ 2012ರಲ್ಲಿ ಸದಸ್ಯರಾದರು. ತಮ್ಮ ದೂರದೃಷ್ಟಿ, ಕರ್ತೃತ್ವ ಮತ್ತು ಸಂಘಟನಾ ಶಕ್ತಿಯಿಂದ ಕೈಗಾರಿಕೋದ್ಯಮಿಗಳು, ವ್ಯಾಪಾರಸ್ಥರ ನೆಚ್ಚಿನ ಯುವಕರಾಗಿ ಹೊರಹೊಮ್ಮಿದ್ದಾರೆ. ಎರಡು ಬಾರಿ ನಿರಂತರ ಆಡಳಿತ ಮಂಡಳಿ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಈ ಭಾಗದ ಸರ್ವತೋಮುಖ ಪ್ರಗತಿಗೆ ಮಹತ್ವದ ಕೊಡುಗೆ ನೀಡುತ್ತಿದ್ದಾರೆ. ಕಲಬುರಗಿ ಜಯದೇವ ಹೃದ್ರೋಗ ಆಸ್ಪತ್ರೆಯನ್ನು 100 ಬೆಡ್‌ನಿಂದ 300 ಬೆಡ್‌ಗೆ ಮೇಲ್ದರ್ಜೆಗೆ ಏರಿಸುವಲ್ಲಿ ಪಪ್ಪಾ ಟೀಮ್ ಕೊಡುಗೆ ಅಪಾರವಿದೆ. ಕಲಬುರಗಿಯಲ್ಲಿ ಜವಳಿ ಪಾರ್ಕ್ ಆರಂಭದ ಹೋರಾಟಕ್ಕೆ ಪಪ್ಪಾ ಶಕ್ತಿ ತುಂಬಿದ್ದಾರೆ. ಕೇಂದ್ರ ಕಾರಾಗ್ರಹ ಸಂದರ್ಶಕರ ಸಲಹಾ ಸಮಿತಿ ಸದಸ್ಯರಾಗಿ,ರೈಲ್ವೆ ವಿಭಾಗೀಯ ಸಲಹಾ ಸಮಿತಿ ಸದಸ್ಯರಾಗಿ ಕೆಲಸ ಮಾಡಿದ್ದಾರೆ.

    ಬಸವೇಶ್ವರರ ಅನುಯಾಯಿ: ಪಪ್ಪಾ ಅವರು ಮಹಾತ್ಮ ಬಸವಣ್ಣನವರ ಕಟ್ಟಾ ಅನುಯಾಯಿ. ಹಣೆ ಮೇಲಿನ ವಿಭೂತಿ ಯಾವತ್ತೂ ಮಾಸಿಲ್ಲ. ವೀರಶೈವ ಲಿಂಗಾಯತ ಸಮಾಜ ಸಂಸ್ಥೆಗಳೊಂದಿಗೆ ಕೈಜೋಡಿಸಿ ಸಂಘಟನೆಯಲ್ಲಿ ತೊಡಗಿದ್ದಾರೆ. ಕನ್ನಡಪರ ಸೇರಿದಂತೆ ವಿವಿಧ ಸಂಘಟನೆಗಳಿಗೆ ಸತತ ಪ್ರೋತ್ಸಾಹಿಸುತ್ತಿದ್ದಾರೆ. ವೈಯಕ್ತಿಕ ಶಕ್ತಿಗೂ ಮೀರಿ ಸೇವಾ ಕಾರ್ಯಗಳಲ್ಲಿ ತೊಡಗುವುದು, ನೆರವಿಗೆ ನಿಲ್ಲುವುದೇ ಪಪ್ಪಾ ಅವರ ಜನಪರ ಕಾಳಜಿಗೆ ಸಾಕ್ಷಿ.

    ಜನಸೇವಕ ಶರಣು ಪಪ್ಪಾಗೆ ವಿಜಯರತ್ನ ಗರಿ; ವಿಜಯವಾಣಿ - ದಿಗ್ವಿಜಯ ಸುದ್ದಿವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

    ಕಾಯಕವೇ ಕೈಲಾಸ, ಕೈ ಕೆಸರಾದರೆ ಬಾಯಿ ಮೊಸರು ಎಂಬ ವಚನೋಕ್ತಿಯಂತೆ ಕೈಲಾದಷ್ಟು ಜನಸೇವೆ ಮಾಡುತ್ತಿರುವೆ. ಇನ್ನೊಬ್ಬರ ಸಂಕಷ್ಟಕ್ಕೆ ಸ್ಪಂದನೆ ಮಾಡುವ ಕೈಗಳು ಹೆಚ್ಚಾಗಬೇಕು. ಪ್ರಾರ್ಥಿಸುವ ಸಾವಿರ ತುಟಿಗಿಂತಲೂ ನೆರವಿಗೆ ಬರುವ ಒಂದು ಕೈ ಶ್ರೇಷ್ಠ. ಅದೆಷ್ಟೇ ಅಡೆತಡೆ ಬಂದರೂ ಜನಸೇವೆ ಹೀಗೆಯೇ ಮುಂದುವರಿಯಲಿದೆ. ಜನರ ಒತ್ತಾಸೆಯಂತೆ ಕಲಬುರಗಿ ದಕ್ಷಿಣ ಕ್ಷೇತ್ರದಿಂದ ಚುನಾವಣೆಗೆ ನಿಲ್ಲಲು ಬಯಸಿದ್ದೇನೆ.

    | ಶರಣು ಪಪ್ಪಾ

    ಜಿ-99, ಜಿ-55 ಸಮಾನ ಮನಸ್ಕರ ತಂಡ ಕಟ್ಟಿ ಬಡವರು, ವಿದ್ಯಾರ್ಥಿಗಳು, ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯಹಸ್ತ ಚಾಚುವ ಮಾನವೀಯ ಕೆಲಸ ಮಾಡುತ್ತಿದ್ದಾರೆ. ಈ ತಂಡ ನೊಂದವರ ಧ್ವನಿಯಾಗಿದೆ. ತಂಡದವರೆಲ್ಲರೂ ಹಣ ಸಂಗ್ರಹಿಸಿ ಆಸ್ಪತ್ರೆ, ತುರ್ತು ಇರುವವರಿಗೆ ಸಹಾಯ ಮಾಡುತ್ತಾರೆ. ಬಡ ವಿದ್ಯಾರ್ಥಿಗಳಿಗೆ ಶಾಲಾ ಶುಲ್ಕ ನೀಡುತ್ತಿದ್ದಾರೆ. ಕೋವಿಡ್ ವೇಳೆ ಹಸಿದವರ ಹೊಟ್ಟೆ ತುಂಬಲಾಗಿದೆ. ಟಿಬಿ ರೋಗಿಗಳಿಗೆ ಪೌಷ್ಠಿಕಾಂಶವುಳ್ಳ ವಿಟಮಿನ್ ಪೌಡರ್ ಉಚಿತವಾಗಿ ವಿತರಿಸಿ ಅನೇಕರ ಜೀವ ರಕ್ಷಣೆ ಮಾಡಿದ್ದು ಪಪ್ಪಾ ಸೇವಾನಿಷ್ಠೆಗೆ ಸಾಕ್ಷಿ. ಕಲಬುರಗಿಯ ಯಾವ ಆಸ್ಪತ್ರೆಯಲ್ಲಿ ರೋಗಿ ದಾಖಲಾದರೂ ರಕ್ತ, ಚಿಕಿತ್ಸೆಗೆ ಹಣ, ಐಸಿಯು, ಬೆಡ್, ಸ್ಕ್ಯಾನಿಂಗ್​, ಆ್ಯಂಬುಲೆನ್ಸ್ ಸೇರಿ ನಾನಾ ವೈದ್ಯಕೀಯ ನೆರವು ನೀಡುವ ಕಾಯಕದಲ್ಲಿ ಪಪ್ಪಾ ತೊಡಗಿದ್ದಾರೆ.

    ಕಿಡ್ನಿ ರೋಗಿಗಳಿಗೆ ಫ್ರೀ ಡಯಾಲಿಸಿಸ್: ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉತ್ತಮ ಚಿಕಿತ್ಸೆ ಕೊಡಲು ಶರಣು ಪಪ್ಪಾ ಅವರು ಮಿತ್ರಮಂಡಳಿ ನೆರವಿನಿಂದ ಕಲಬುರಗಿ ಏಷಿಯನ್ ಮಾಲ್ ಏಷಿಯನ್ ಬಿಜಿನೆಸ್ ಸೆಂಟರ್‌ನಲ್ಲಿ ಆರಂಭಿಸಿದ ಶ್ರೀಮತಿ ಪೂರ್ಣಿಮಾ ಪಿ.ಎಂ.ಬಿರಾದಾರ ಚಾರಿಟೇಬಲ್ ಡಯಾಲಿಸಿಸ್ ಕೇಂದ್ರ ಈ ಭಾಗದ ಕಿಡ್ನಿ ರೋಗಿಗಳ ಪಾಲಿಗೆ ವರದಾನವಾಗಿದೆ. ಒಂದೂವರೆ ವರ್ಷದಿಂದ ಈ ಕೇಂದ್ರ ನೂರಾರು ಬಡ ಕಿಡ್ನಿ ರೋಗಿಗಳ ಬಾಳಲ್ಲಿ ಹೊಸ ಭರವಸೆ ಮೂಡಿಸಿದೆ. ಸುಸಜ್ಜಿತ ಕಟ್ಟಡದಲ್ಲಿ ಹೈಜೆನಿಕ್ ಆಗಿ ಈ ಕೇಂದ್ರ ನಡೆದಿದ್ದು, ಫ್ರೀ ಡಯಾಲಿಸಿಸ್ ಮಾಡಲಾಗುತ್ತಿದೆ. ವೈದ್ಯ ಸೇರಿ 11 ಸಿಬ್ಬಂದಿ ಇಲ್ಲಿದ್ದಾರೆ. ಏಕಕಾಲಕ್ಕೆ ಐವರಿಗೆ ಡಯಾಲಿಸಿಸ್ ಮಾಡಲಾಗುತ್ತದೆ. ನಿತ್ಯವೂ 12-14 ರೋಗಿಗಳಿಗೆ ಡಯಾಲಿಸಿಸ್ ನಡೆಯುತ್ತದೆ. ಟ್ರಸ್ಟ್ ಅಧ್ಯಕ್ಷರಾದ ಶರಣು ಪಪ್ಪಾ ನಿತ್ಯವೂ ಕೇಂದ್ರಕ್ಕೆ ತೆರಳಿ ವ್ಯವಸ್ಥೆ ಪರಿಶೀಲಿಸಿ ರೋಗಿಗಳ ಆರೋಗ್ಯ ವಿಚಾರಿಸುತ್ತಾರೆ. ಒಮ್ಮೆ ಹೊರಗಡೆ ಡಯಾಲಿಸಿಸ್‌ಗೆ 1500-2000 ರೂ. ಬೇಕು. ಇಲ್ಲಿ ಈ ಸೇವೆ ಉಚಿತ ನೀಡುತ್ತಿದ್ದು, ಪಪ್ಪಾ ಟೀಮ್‌ಗೆ ರೋಗಿಗಳು ಹ್ಯಾಟ್ಸಾಫ್​ ಹೇಳುತ್ತಿದ್ದಾರೆ. ಬಡವರು ಡಯಾಲಿಸಿಸ್ ಮಾಡಿಕೊಂಡು ಆನಂದಬಾಷ್ಪ ಸುರಿಸುತ್ತಿದ್ದಾರೆ. ಮಾಸಿಕ 3 ಲಕ್ಷ ರೂ. ಖರ್ಚು ಇದೆ. ಅತ್ತಿತ್ತ ಅವಿರತ ಸುತ್ತಾಡಿ ಮಿತ್ರರು, ದಾನಿಗಳ ನೆರವಿನಿಂದ ಕೇಂದ್ರ ನಡೆಸುತ್ತಿರುವುದು ವಿಶೇಷ.

    ಜನಸೇವಕ ಚಂದು ಪಾಟೀಲ್‌ಗೆ ವಿಜಯರತ್ನ ಗರಿ; ವಿಜಯವಾಣಿ-ದಿಗ್ವಿಜಯ ವಾಹಿನಿಯ ಪ್ರತಿಷ್ಠಿತ ಗೌರವ

    ದಾಸೋಹ ಜೀವಿ ಕೊಳ್ಳುರ್‌ಗೆ ವಿಜಯರತ್ನ ಗರಿ; ವಿಜಯವಾಣಿ, ದಿಗ್ವಿಜಯ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts