More

    12575 ವಲಸೆ ಕಾರ್ಮಿಕರ ಆಗಮನ

    ವಿಜಯಪುರ: ವಿವಿಧ ರಾಜ್ಯಗಳಿಂದ ಈವರೆಗೆ 12575 ಜನ ವಲಸೆ ಕಾರ್ಮಿಕರು ಆಗಮಿಸಿದ್ದು, ಬೇರೆ ಬೇರೆ ಜಿಲ್ಲೆಗಳಿಂದ 2923 ವಲಸೆ ಕಾರ್ಮಿಕರು ಜಿಲ್ಲೆಯಿಂದ ಬೇರೆ ರಾಜ್ಯಗಳಿಗೆ ತೆರಳಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದರು.

    ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಗೋವಾದಿಂದ 1694 ಜನರು, ಗೋವಾ, ಮಹಾರಾಷ್ಟ್ರದಿಂದ 9517, ಗುಜರಾತ, ರಾಜಸ್ಥಾನ, ಗೋವಾದಿಂದ 1364 ಜನರು ಸೇರಿದಂತೆ ಒಟ್ಟು 12,575 ವಲಸೆ ಕಾರ್ಮಿಕರು ಜಿಲ್ಲೆಗೆ ಆಗಮಿಸಿದ್ದಾರೆ. ಅದರಂತೆ ಜಿಲ್ಲೆಯಿಂದ ರಾಜಸ್ಥಾನಕ್ಕೆ 1085 ಜನರು, ಮಧ್ಯಪ್ರದೇಶಕ್ಕೆ 270, ಆಂಧ್ರಪ್ರದೇಶಕ್ಕೆ 149, ಗುಜರಾತಗೆ 23, ಪಶ್ಚಿಮ ಬಂಗಾಳಕ್ಕೆ 135, ಉತ್ತರ ಪ್ರದೇಶಕ್ಕೆ 635, ಜಾರ್ಖಂಡಕ್ಕೆ 159, ಬಿಹಾರ 291, ಹರಿಯಾಣ 11, ಒಡಿಸ್ಸಾ 106, ಉತ್ತರಾಖಂಡ 59 ಸೇರಿದಂತೆ ಒಟ್ಟು 2923 ವಲಸೆ ಕಾರ್ಮಿಕರು 101 ಬಸ್‌ಗಳ ಮೂಲಕ ತೆರಳಿದ್ದಾರೆ. 11142 ಜನರು ಆರೋಗ್ಯ ಸೇತು ಆ್ಯಪ್ ಬಳಸುತ್ತಿದ್ದಾರೆ.

    ರಾಜ್ಯದ ವಿವಿಧ ಜಿಲ್ಲೆಗಳಿಂದ, ವಿಜಯಪುರ ಸೇರಿದಂತೆ ವಿವಿಧ ತಾಲೂಕು ಕೇಂದ್ರಗಳಿಗೆ ಒಟು ್ಟ 28831 ವಲಸೆ ಕಾರ್ಮಿಕರು ಆಗಮಿಸಿದ್ದಾರೆ. ವಿಜಯಪುರಕ್ಕೆ 5712, ಬಸವನಬಾಗೇವಾಡಿಗೆ 2198, ಮುದ್ದೇಬಿಹಾಳಕ್ಕೆ 2854, ಇಂಡಿಗೆ 2274, ಸಿಂದಗಿಗೆ 2189, ಬಬಲೇಶ್ವರಕ್ಕೆ 2754, ತಿಕೋಟಾಗೆ 2185, ನಿಡಗುಂದಿಗೆ 1653, ಕೋಲ್ಹಾರಗೆ 1902, ತಾಳಿಕೋಟಿಗೆ 1712, ಚಡಚಣಗೆ 1875, ಹಾಗೂ ದೇವರಹಿಪ್ಪರಗಿಗೆ 1523 ವಲಸೆ ಕಾರ್ಮಿಕರು ಸೇರಿದಂತೆ ಒಟು ್ಟ 28831 ಜನರು ಆಗಮಿಸಿದ್ದಾರೆ. ಜಿಲ್ಲೆಗೆ ಆಗಮಿಸಿದ ಎಲ್ಲ ವಲಸೆ ಕಾರ್ಮಿಕರನ್ನು ಸಾಂಸ್ಥಿಕ (ಇನ್ಸ್‌ಟಿಟ್ಯೂಷನಲ್) ಹಾಗೂ ಹೋಮ್ ಕ್ವಾರಂಟೈನ್‌ಗೆ ಅವಶ್ಯಕ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts