More

    ಜ್ಞಾನಯೋಗಿಯ ಅಂತಿಮ ದರ್ಶನಕ್ಕೆ ಹರಿದುಬಂದ ಭಕ್ತಸಾಗರ; ಶತಮಾನದ ಸಂತನಿಗೆ ಅಂತಿಮ ನಮನ

    ವಿಜಯಪುರ: ಈ ಶತಮಾನದ ನಡೆದಾಡುವ ದೇವರು, ಮಹಾನ್​ ಸಂತ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಶ್ರೀ(82)ಗಳು ಸೋಮವಾರ ಸಂಜೆ 6.05 ನಿಮಿಷದ ವೇಳೆಗೆ ಇಹಲೋಕ ಪಯಣ ಮುಗಿಸಿ, ಶಿವೈಕ್ಯರಾಗಿದ್ದಾರೆ.

    ಜ್ಞಾನಾಯೋಗಾಶ್ರಮದಲ್ಲಿ ಕಳೆದೊಂದು ತಿಂಗಳಿನಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತಾದರೂ ವಯೋಸಹಜವಾಗಿ ಉಸಿರಾಟದ ತೊಂದರೆಯಿಂದ ನಿಧನರಾಗಿದ್ದಾರೆ. ಇಂದು ಶ್ರೀಗಳ ಅಂತಿಮ ವಿಧಿ-ವಿಧಾನಗಳು ನೆರವೇರಲಿದೆ. ಸದ್ಯ ವಿಜಯಪುರ ನಗರದ ಸೈನಿಕ ಶಾಲಾ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

    ಜ್ಞಾನಯೋಗಿಯ ಅಂತಿಮ ದರ್ಶನಕ್ಕೆ ನಾಡಿನ ಮೂಲೆ ಮೂಲೆಗಳಿಂದ ಭಕ್ತ ಸಾಗರ ಹರಿದು ಬರುತ್ತಿದೆ. ರಾಜ್ಯ ಸೇರಿದಂತೆ ನೆರೆಯ ಮಹಾರಾಷ್ಟ್ರದಿಂದಲೂ ಭಕ್ತರ ದಂಡು ಆಗಮಿಸಿದೆ.

    ಸಿದ್ದೇಶ್ವರ ಶ್ರೀಗಳು ಅಂತಿಮ ವಿಧಿ ವಿಧಾನಗಳನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಗಳವಾರ (ಜ.03) ನೆರವೇರಿಸಲು ತೀರ್ಮಾನಿಸಲಾಗಿದೆ. ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ 4 ಗಂಟೆ ವರೆಗೆ ಜ್ಞಾನ ಯೋಗಾಶ್ರಮದಲ್ಲಿ ಅಂತಿಮ ದರ್ಶನ ಕಲ್ಪಿಸಲಾಗಿತ್ತು. ಇದೀಗ, ಸೈನಿಕ ಶಾಲೆಯಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಬೆಳಗ್ಗೆ 6 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಇರಲಿದೆ.

    ಸಂಜೆ 4 ಗಂಟೆ ವೇಳೆಗೆ ಸಕಲ‌ ಸರ್ಕಾರಿ ಗೌರವ ನೆರವೇರಲಿದೆ. ಸಂಜೆ 5 ಗಂಟೆಗೆ ಜ್ಞಾನಯೋಗಾಶ್ರಮದಲ್ಲಿ ಅಗ್ನಿಸ್ಪರ್ಶ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾಹಿತಿ ನೀಡಿದ್ದಾರೆ.

    ಪ್ಲಾಸ್ಟಿಕ್​ ಬಲೂನ್​ಗಳಲ್ಲಿ ಅಡುಗೆ ಅನಿಲ ಸಂಗ್ರಹ! ಪಾಕ್​ ಜನರಿಗೆ ಇಂಥಾ ದುಸ್ಥಿತಿ ಬರಬಾರದಿತ್ತು ಎಂದ ನೆಟ್ಟಿಗರು

    ಶಿರಾಡಿ ಘಾಟ್ ಚತುಷ್ಪಥಕ್ಕೆ ಬಿಡ್ ಆಹ್ವಾನ

    ಮಾನವನ ಮೃತದೇಹದಿಂದ ಗೊಬ್ಬರ!

    ಹೊಸ ವರ್ಷಕ್ಕೆ ಹೊಸ ರೆಸಲ್ಯೂಷನ್​; ಇದನ್ನು ಪಾಲಿಸಿದ್ರೆ ಯಶಸ್ಸು ಖಚಿತ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts