More

    ಪ್ಲಾಸ್ಟಿಕ್​ ಬಲೂನ್​ಗಳಲ್ಲಿ ಅಡುಗೆ ಅನಿಲ ಸಂಗ್ರಹ! ಪಾಕ್​ ಜನರಿಗೆ ಇಂಥಾ ದುಸ್ಥಿತಿ ಬರಬಾರದಿತ್ತು ಎಂದ ನೆಟ್ಟಿಗರು

    ಇಸ್ಲಮಾಬಾದ್​: ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದ್ದು, ಅಲ್ಲಿನ ಜನರು ಉತ್ತಮ ಜೀವನ ನಿರ್ವಹಣೆ ಮಾಡಲಾಗದೇ ಹತಾಶರಾಗಿದ್ದಾರೆ. ಪಾಕ್​ನಲ್ಲಿ ಪರಿಸ್ಥಿತಿ ಯಾವ ಮಟ್ಟಿಗೆ ಇದೆ ಅಂದರೆ, ಅಡುಗೆ ಅನಿಲವನ್ನು ಪ್ಲಾಸ್ಟಿಕ್​ ಬಲೂನ್​ಗಳಲ್ಲಿ ತುಂಬಿಟ್ಟುಕೊಳ್ಳುತ್ತಿದ್ದಾರೆ. ಇಂಥದ್ದೊಂದು ಸನ್ನಿವೇಶ ಪಾಕ್​ನ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಕಂಡು ಬಂದಿದೆ.

    ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಜನರು ದೊಡ್ಡ ದೊಡ್ಡ ಪ್ಲಾಸ್ಟಿಕ್​​ ಬ್ಯಾಗ್​ಗಳಲ್ಲಿ ಎಲ್​ಪಿಜಿಯನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿದ್ದಾರೆ. ದೇಶದಲ್ಲಿ ಅಡುಗೆ ಅನಿಲ ಸಂಗ್ರಹಣೆಯಲ್ಲಿ ಭಾರಿ ಕೊರತೆ ಹಿನ್ನೆಲೆಯಲ್ಲಿ ಜನರು ಈ ದಾರಿ ಆಯ್ದುಕೊಂಡಿದ್ದಾರೆ.

    ಸ್ಥಳೀಯ ಮಾಧ್ಯಮಗಳ ಪ್ರಕಾರ ಈ ಪ್ಲಾಸ್ಟಿಕ್ ಚೀಲಗಳನ್ನು ದೇಶದ ಅನಿಲ ಪೈಪ್‌ಲೈನ್ ಜಾಲಕ್ಕೆ ಸಂಪರ್ಕ ಹೊಂದಿದ ಅಂಗಡಿಗಳಲ್ಲಿ ಅಡುಗೆ ಅನಿಲ ತುಂಬಿಸಲಾಗುತ್ತಿದೆ. ಅನಿಲ ಸೋರಿಕೆಯನ್ನು ತಪ್ಪಿಸಲು ಮಾರಾಟಗಾರರು ನಳಿಕೆ ಮತ್ತು ಕವಾಟದಿಂದ ಚೀಲದ ತೆರೆಯುವಿಕೆಯನ್ನು ಬಿಗಿಯಾಗಿ ಮುಚ್ಚುತ್ತಾರೆ. ನಂತರ ಚೀಲಗಳನ್ನು ಜನರಿಗೆ ಮಾರಾಟ ಮಾಡಲಾಗುತ್ತಿದೆ. ಅಡುಗೆ ಅನಿಲ ಪಡೆದ ಜನರು ಸಣ್ಣ ವಿದ್ಯುತ್ ಹೀರಿಕೊಳ್ಳುವ ಪಂಪ್‌ನ ಸಹಾಯದಿಂದ ಅದನ್ನು ಬಳಸುತ್ತಾರೆ. ಪ್ಲಾಸ್ಟಿಕ್ ಚೀಲಗಳಲ್ಲಿ ಮೂರರಿಂದ ನಾಲ್ಕು ಕೆಜಿ ಗ್ಯಾಸ್ ತುಂಬಲು ಅಂದಾಜು ಒಂದು ಗಂಟೆ ಬೇಕಾಗುತ್ತದೆ ಎಂದು ವರದಿಯಾಗಿದೆ.

    ಪಾಕಿಸ್ತಾನದಲ್ಲಿ ಅಡುಗೆಗೆ ಸಿಲಿಂಡರ್‌ಗಳ ಬದಲಿಗೆ ಪ್ಲಾಸ್ಟಿಕ್ ಚೀಲಗಳಲ್ಲಿ ಪ್ಯಾಕ್ ಮಾಡಿದ ಗ್ಯಾಸ್ ಬಳಸುವ ಅಭ್ಯಾಸ ಹೆಚ್ಚಾಗಿದೆ. ಗ್ಯಾಸ್ ಪೈಪ್‌ಲೈನ್ ನೆಟ್‌ವರ್ಕ್‌ಗೆ ಸಂಪರ್ಕ ಹೊಂದಿದ ಅಂಗಡಿಗಳ ಒಳಗೆ ಚೀಲಗಳನ್ನು ತುಂಬಿಸಿ ಅನಿಲವನ್ನು ಮಾರಾಟ ಮಾಡಲಾಗುತ್ತದೆ. ಜನರು ಇದನ್ನು ಅಡುಗೆಮನೆಯಲ್ಲಿ ಸಣ್ಣ ವಿದ್ಯುತ್ ಹೀರಿಕೊಳ್ಳುವ ಪಂಪ್ ಸಹಾಯದಿಂದ ಬಳಸುತ್ತಿದ್ದಾರೆ ಎಂದು ಟ್ವಿಟರ್​ ಬಳಕೆದಾರರೊಬ್ಬರು ತಿಳಿಸಿದ್ದಾರೆ.

    ಮಕ್ಕಳಿಬ್ಬರು ಎಲ್‌ಪಿಜಿ ತುಂಬಿದ ಎರಡು ದೈತ್ಯ ಬಿಳಿ ಪ್ಲಾಸ್ಟಿಕ್ ಚೀಲಗಳನ್ನು ಹೊತ್ತೊಯ್ಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಈ ಪ್ಲಾಸ್ಟಿಕ್ ಚೀಲಗಳು ಗ್ಯಾಸ್ ಸ್ಫೋಟಕ್ಕೆ ಕಾರಣವಾಗುವ ಬಗ್ಗೆ ಎಚ್ಚರಿಕೆಗಳನ್ನು ನೀಡಲಾಗಿದೆ. ಆದರೆ, ಈವರೆಗೆ ಅಂತಹ ಯಾವುದೇ ಅವಘಡದ ಬಗ್ಗೆ ವರದಿಯಾಗಿಲ್ಲ. ಸ್ಫೋಟದ ಭಯ ನಿಜವಾಗಿದ್ದರೂ ಸಹ, ನಮಗೆ ದುಬಾರಿ ಸಿಲಿಂಡರ್​​ ಕೊಳ್ಳಲು ಆಗುವುದಿಲ್ಲ. ಹೀಗಾಗಿ ನಮಗೆ ಬೇರೆ ಆಯ್ಕೆಗಳಿಲ್ಲ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.

    ವೈರಲ್​ ವಿಡಿಯೋ ನೋಡಿದ ನೆಟ್ಟಿಗರು ಕಳವಳ ವ್ಯಕ್ತಪಡಿಸಿದ್ದಾರೆ. ಸಣ್ಣ ಸೋರಿಕೆಯೂ ಕೂಡ ಭಾರಿ ಸ್ಫೋಟಕ್ಕೆ ಕಾರಣವಾಗಬಹುದು ಎಂದು ಆತಂಕ ಹೊರಹಾಕಿದ್ದಾರೆ. (ಏಜೆನ್ಸೀಸ್​)

    ಶಿರಾಡಿ ಘಾಟ್ ಚತುಷ್ಪಥಕ್ಕೆ ಬಿಡ್ ಆಹ್ವಾನ

    ಮಾನವನ ಮೃತದೇಹದಿಂದ ಗೊಬ್ಬರ!

    ಚೀನಾ ಕೂಡ ದಾಳಿ ನಡೆಸಬಹುದು! ರಾಹುಲ್ ಗಾಂಧಿ ಆರೋಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts