More

    ಚೀನಾ ಕೂಡ ದಾಳಿ ನಡೆಸಬಹುದು! ರಾಹುಲ್ ಗಾಂಧಿ ಆರೋಪ

    ನವದೆಹಲಿ: ಯೂಕ್ರೇನ್ ಕುರಿತು ರಷ್ಯಾ ಅನುಸರಿಸುತ್ತಿರುವ ತತ್ವವನ್ನೇ ಚೀನಾವು ಭಾರತದೊಂದಿಗೆ ಅನುಸರಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಚೀನಾ-ಭಾರತದ ಗಡಿ ಸಂಘರ್ಷವು ದುರ್ಬಲ ಆರ್ಥಿಕತೆ, ದೂರದೃಷ್ಟಿಯಿಲ್ಲದ ಗೊಂದಲಮಯ ವಾತಾವರಣ, ದ್ವೇಷದೊಂದಿಗೆ ಸಂಪರ್ಕ ಹೊಂದಿದೆ. ಇದು ಚೀನಿಯರು ಭಾರತದ ಭೂಪ್ರದೇಶದಲ್ಲಿ ಬಂದು ಕುಳಿತುಕೊಳ್ಳಲು ಅನುವು ಮಾಡಿಕೊಟ್ಟಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

    ರಷ್ಯನ್ನರು ಮೂಲಭೂತವಾಗಿ ಪಶ್ಚಿಮದೊಂದಿಗೆ ಯೂಕ್ರೇನ್ ಬಲವಾದ ಸಂಬಂಧ ಹೊಂದುವುದನ್ನು ವಿರೋಧಿಸುತ್ತಿದ್ದಾರೆ. ಇದೇ ಕಾರಣಕ್ಕೆ ಮಿಲಿಟರಿ ಕಾರ್ಯಾಚರಣೆ ಮೂಲಕ ಯೂಕ್ರೇನ್ ನೀತಿ ಬದಲಾಯಿಸಲು ರಷ್ಯಾ ಯತ್ನಿಸುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಭಾರತಕ್ಕೆ ಅನ್ವಯಿಸಬಹುದಾದ ತತ್ವವಾಗಿದೆ ಎಂದು ರಾಹುಲ್ ಹೇಳಿದ್ದಾರೆ.

    ಚೀನಿಯರು ಕೂಡ ನಾವು ನಿಮ್ಮ ಭೌಗೋಳಿಕತೆ ಬದಲಾಯಿಸಬಲ್ಲೆವು ಎಂದು ಭಾರತಕ್ಕೆ ಸವಾಲೊಡ್ಡುತ್ತಿದ್ದಾರೆ. ನಾವು ಲಡಾಖ್​ಗೆ ಪ್ರವೇಶಿಸುತ್ತೇವೆ. ಅರುಣಾಚಲ ಪ್ರವೇಶಿಸುತ್ತೇವೆ ಎಂದು ಚೀನಿಯರು ನೇರವಾಗಿ ಹೇಳುತ್ತಿದ್ದಾರೆ ಎಂದು ರಾಹುಲ್ ಗಾಂಧಿ, ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ಜತೆಗಿನ ಯೂ ಟ್ಯೂಬ್ ವಿಡಿಯೋ ಸಂಭಾಷಣೆಯಲ್ಲಿ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts