More

    ಮನೆಬಾಗಿಲಿಗೆ ಎಲ್‌ಪಿಜಿ ಸಿಲಿಂಡರ್ ವಿತರಣೆ

    ವಿಜಯಪುರ: ಸಾರ್ವಜನಿಕರಿಗೆ ಎಲ್‌ಪಿಜೆಯು ಅಗತ್ಯ ವಸ್ತುವಾಗಿದ್ದು ಇದನ್ನು ಲಾಕ್‌ಡೌನ್ ಪರಿಸ್ಥಿತಿಯಿಂದ ವಿನಾಯತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ತಿಳಿಸಿದ್ದಾರೆ.
    ಲಾಕ್‌ಡೌನ್ ಅವಧಿ ಅಂಗವಾಗಿ ಎಲ್‌ಪಿಜಿ ವಿತರಕರಲ್ಲಿ ಇರುವ ಒಟ್ಟು ಸಿಬ್ಬಂದಿಯ ಪ್ರತಿಶತ 50 ರಷ್ಟು ಮಾತ್ರ ಸಿಬ್ಬಂದಿ ಕಾರ್ಯ ನಿರ್ವಹಿಸುವಂತೆ ಸೂಚಿಸಿದೆ. ಅದರಂತೆ ಸಿಲಿಂಡರ್‌ನ್ನು ಗ್ರಾಹಕರ ಮನೆಬಾಗಿಲಿಗೆ ತಲುಪಿಸಲು ಡಿಲೆವರಿ ಹುಡುಗರನ್ನು ರೋಟೇಟ್ ಮಾದರಿಯಲ್ಲಿ ಸೇವೆ ಬಳಸಿಕೊಳ್ಳಲಾಗುತ್ತಿದೆ. ಗ್ರಾಹಕರಿಗೆ ಸಿಲಿಂಡರನ್ನು ಮನೆ ಬಾಗಿಲಿಗೆ ತಲುಪಿಸಲು ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಎಲ್‌ಪಿಜಿ ಸರಬರಾಜು ಕೊರತೆಯಾಗದಂತೆ ಎಲ್ಲಾ ಕಂಪನಿಗಳ ಮಾರುಕಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿ ಕೊರತೆಯಾಗದಂತೆ ನೋಡಿಕೊಳ್ಳುವ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ. ಈ ಕುರಿತು ಜಿಲ್ಲೆಯ ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಮೇಲ್ವಿಚಾರಣೆ ಮಾಡುತ್ತಿದ್ದು, ಈವರೆಗೆ ಸಿಲಿಂಡರ್ ಕೊರತೆ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ ಎಂದು ತಿಳಿಸಿದ್ದಾರೆ.
    ಗ್ರಾಹಕರ ಸುರಕ್ಷತೆಯು ಜಿಲ್ಲಾಡಳಿತದ ಜವಾಬ್ದಾರಿಯಾಗಿದ್ದು, ಹೆಚ್ಚಿನ ರೀತಿಯಲ್ಲಿ ಕಾಳಜಿ ವಹಿಸಲಾಗುತ್ತಿದೆ. ಗ್ರಾಹಕರು ಸಹ ಲಾಕ್‌ಡೌನ್ ಆದೇಶದನ್ವಯ ವಿತರಕರೊಂದಿಗೆ ಸಹಕರಿಸುತ್ತಿರುವುದು ಹೆಮ್ಮೆಯ ವಿಷಯ. ಅದಾಗ್ಯೂ ಎಲ್‌ಪಿಜಿ ವಿತರಣೆಯಲ್ಲಿ ಗ್ರಾಹಕರಿಗೆ ಯಾವುದೇ ರೀತಿಯ ತೊಂದರೆಯಾದಲ್ಲಿ ಆಯಾ ತಹಸೀಲ್ದಾರ್ ಕಾರ್ಯಾಲಯದಲ್ಲಿ ಕಾರ್ಯನಿರ್ವಹಿಸುವ ಆಹಾರ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ಸಲ್ಲಿಸಿ ಪರಿಹರಿಸಿಕೊಳ್ಳಬಹುದಾಗಿದೆ. ಅದೇ ರೀತಿ ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆಹಾರ ಶಾಖೆ ದೂ.ಸಂ. 08352-250419 ಗೆ ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದೆಂದು ಅವರು ತಿಳಿಸಿದ್ದಾರೆ.

    ಕರೊನಾ ಹಿನ್ನೆಲೆ ಭಾರತ ಸರ್ಕಾರ 2020ರ ಏಪ್ರಿಲ್‌ದಿಂದ ಜೂನ್‌ವರೆಗೆ ಮೂರು ತಿಂಗಳು ಕಾಲ ಎಲ್ಲ ಉಜ್ವಲಾ ಗ್ರಾಹಕರಿಗೆ ಉಚಿತ ಎಲ್‌ಪಿಜಿ ಘೋಷಿಸಿದೆ. ಸಿಲಿಂಡರ್ (ಮರುಪೂರಣಗಳ-ರಿಫಿಲ್ ಕಾಸ್ಟ್) ವೆಚ್ಚವನ್ನು ಮುಂಚಿತವಾಗಿ ಉಜ್ವಲಾ ಲಾನುಭವಿಗಳ ಬ್ಯಾಂಕ್ ಖಾತೆಗೆ ತಿಂಗಳುವಾರು ವರ್ಗಾಯಿಸಲಾಗುತ್ತದೆ. ಈ ಹಣದಿಂದ ಉಜ್ವಲಾ ಗ್ರಾಹಕರು ಬ್ಯಾಂಕ್ ಖಾತೆಗೆ ಸರ್ಕಾರ ಜಮೆ ಮಾಡಿದ ಹಣದಿಂದ ಸಿಲಿಂಡರ್ ಖರೀದಿಸಬಹುದಾಗಿದೆ. ಒಂದು ವೇಳೆ ಸರ್ಕಾರವು ಉಜ್ವಲಾ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆ ಮಾಡಿದ ಹಣದಿಂದ ಅವರು ಸಿಲಿಂಡರ್ ಖರೀದಿಸದೆ ಇದ್ದಲ್ಲಿ ಅವರಿಗೆ ಮುಂದಿನ 2020ರ ಮೇ ತಿಂಗಳಿಗೆ ಸಂಬಂಧಪಟ್ಟ ಹಣವನ್ನು ಸರ್ಕಾರ ಅವರ ಖಾತೆಗೆ ಹಣ ಭರಿಸುವುದಿಲ್ಲವೆಂದು ಅವರು ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಐಒಸಿ, ಎಚ್‌ಪಿಸಿ, ಬಿಪಿಸಿ ಈ ಎಲ್ಲ ಕಂಪನಿಗೆ ಸಂಬಂಧಿಸಿದಂತೆ ಒಟ್ಟು 40 ಎಲ್‌ಪಿಜಿ ವಿತರಕರು ಇದ್ದು, 4.74 ಲಕ್ಷ ಎಲ್‌ಪಿಜಿ ಗ್ರಾಹಕರು ಇರುತ್ತಾರೆ. ಇವುಗಳ ಪೈಕಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ 1.48 ಲಕ್ಷ ಹಾಗೂ ರಾಜ್ಯ ಸರ್ಕಾರ ಪುರಸ್ಕೃತ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯಡಿ ವಿತರಣೆ ಮಾಡಲಾಗಿರುವ 6404 ಲಾನುಭವಿಗಳೂ ಸೇರಿದ್ದಾರೆ ಎಂದು ಅವರು ತಿಳಿದ್ದಾರೆ.

    ಪ್ರಸ್ತುತ ನಮ್ಮ ದೇಶವು ಕರೊನಾ ಬಿಕ್ಕಟ್ಟಿನೊಂದಿಗೆ ಹೋರಾಡುತ್ತಿದೆ. ಇದು ಜಾಗತಿಕವಾಗಿ ಹಲವಾರು ರಾಷ್ಟ್ರಗಳ ಮೇಲೆ ಪರಿಣಾಮ ಬೀರಿದ್ದು ಈ ವೈರಸ್‌ನಿಂದ ಉಂಟಾಗಬಹುದಾದ ರೋಗದ ಹರಡುವಿಕೆಯನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಕ್ರಮಗಳನ್ನು ಜಾರಿಗೆ ತಂದಿದೆ. ಅದರ ಪ್ರಮುಖ ಭಾಗವಾಗಿ ಭಾರತ ದೇಶಾದ್ಯಂತ ಏ.14ರ ವರೆಗೆ ಸಂಪೂರ್ಣ ಲಾಕ್‌ಡೌನ್ ಮಾಡಲು ಆದೇಶಿಸಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ವೈರಸ್ ಕೆನ್ನಾಲಿಗೆ ಚಾಚದಂತೆ ತಡೆಗಟ್ಟಲು ಅನೇಕ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

    ಮನೆಬಾಗಿಲಿಗೆ ಎಲ್‌ಪಿಜಿ ಸಿಲಿಂಡರ್ ವಿತರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts