More

    ಸ್ವದೇಶಿ ಉತ್ಪನ್ನಕ್ಕೆ ಯುವಪಡೆ ಫಿದಾ

    ವಿಜಯಪುರ: ಐತಿಹಾಸಿಕ ನಗರಿಯಲ್ಲೀಗ ಮೇಳಗಳ ಭರಾಟೆ ಆರಂಭಗೊಂಡಿದ್ದು, ಕಳೆದೊಂದು ತಿಂಗಳಿನಿಂದ ಕೃಷಿ ಮೇಳ, ಜಾನುವಾರು ಮೇಳ, ಮತ್ಸೃ ಮೇಳ, ಫಲ-ಪುಷ್ಪ ಮೇಳ ಹೀಗೆ ಸಾಲು ಸಾಲು ಮೇಳ ಕಂಡಿದ್ದು ಇದೀಗ ಖಾದಿ ಮೇಳ ಭರ್ಜರಿಯಾಗಿ ನಡೆಯುತ್ತಿದೆ.
    ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ ಹಾಗೂ ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಖಾದಿ ಉತ್ಸವ ಯುವಜನರನ್ನು ಆಕರ್ಷಿಸುತ್ತಿದೆ. ಕೇವಲ 4 ದಿನದಲ್ಲಿ 50 ಲಕ್ಷ ರೂ. ಗಳಿಗೂ ಅಧಿಕ ವಹಿವಾಟು ನಡೆದಿದೆ.
    ಉಷ್ಣ ಕಾಲೇ ಶೀತಂ, ಶೀತ ಕಾಲೇ ಉಷ್ಣಂ ಅದುವೇ ಖಾದಿ ವಸಂ ಎಂಬಂತೆ ಎಲ್ಲ ಕಾಲಕ್ಕೂ ಹಿತವೆನಿಸುವ ಖಾದಿ ವಸ್ತ್ರಗಳನ್ನು ಕೊಳ್ಳಲು ಜನ ಮುಗಿಬೀಳುತ್ತಿದ್ದಾರೆ. ವಿಶೇಷವಾಗಿ ಹೆಣ್ಣುಮಕ್ಕಳು ಖಾದಿ ವಸ್ತ್ರಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

    ಮಹಿಳೆಯರ ಖಾದಿ ಕ್ರೇಜ್

    ಖಾದಿ ಪುರುಷರಿಗೆ ಮಾತ್ರ ಮೀಸಲು ಎಂಬ ಕಾಲವಿತ್ತು. ಆದರೆ, ಇದೀಗ ಮಹಿಳೆಯರಲ್ಲೂ ಖಾದಿ ಕ್ರೇಜ್ ಹೆಚ್ಚಿದೆ ಎಂಬುದಕ್ಕೆ ಉತ್ಸವವೇ ಸಾಕ್ಷಿ. ಗೃಹ ಉತ್ಪನ್ನಗಳು ಸೇರಿದಂತೆ ಅನೇಕ ಖಾದಿ ಬಟ್ಟೆಗಳನ್ನು ಖರೀದಿಸಲು ಮಹಿಳೆಯರು ಮುಗಿಬೀಳುತ್ತಿದ್ದಾರೆ. ಖಾದಿ ಬಟ್ಟೆ ಬಳಸಿ ತಯಾರಿಸಿ ಅತ್ಯಾಧುನಿಕ ವಿನ್ಯಾಸಗಳು ಮಹಿಳೆಯರ ಗಮನ ಸೆಳೆಯುತ್ತಿವೆ. ಟಾಪ್, ಚೂಡಿದಾರ, ಸಿಲ್ಕ, ರೇಷ್ಮೆ ಸೀರೆಗಳು ಮಹಿಳೆಯರನ್ನು ಅತ್ಯಾಕರ್ಷಿಸುತ್ತಿವೆ. ಮಕ್ಕಳಾದಿಯಾಗಿ ವಯೋವೃದ್ಧರವರೆಗೆ ಹಾಗೂ ಆಯಾ ವೃತ್ತಿಪರತೆಗೆ ಮೆರುಗು ನೀಡುವ ಬಟ್ಟೆಗಳು ರಾರಾಜಿಸುತ್ತಿವೆ.
    ವಿಶೇಷವಾಗಿ ಹುಬ್ಬಳ್ಳಿಯ ಅನನ್ವಿತಾ ಕಸೂತಿ ಸಿಲ್ಕ್ ಸಾರಿ ಮಳಿಗೆಯಂತೂ ಮಹಿಳೆಯರನ್ನು ಅತ್ಯಾಕರ್ಷಿಸುತ್ತಿದೆ. 1200 ರೂ. ದಿಂದ 3500 ರೂ.ವರೆಗೆ ವಿಶಿಷ್ಠ ವಿನ್ಯಾಸದಡಿಯ ಸಾರಿಗಳ ಖರೀದಿ ಜೋರಾಗಿದೆ.

    84 ಮಳಿಗೆ ಸ್ಥಾಪನೆ

    ಒಟ್ಟು 84 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಶಿವಮೊಗ್ಗ, ಗದಗ, ಕೋಲಾರ, ಚಿಂತಾಮಣಿ, ಧಾರವಾಡ, ಗರಗ, ಬೆಳಗಾವಿಯ ಹುದಲಿ, ಬಾಗಲಕೋಟ, ಚಿತ್ರದುರ್ಗ, ಬೆಂಗಳೂರು ಮುಂತಾದ ಭಾಗಗಳಿಂದ ಖಾದಿ ವ್ಯಾಪಾರಿಗಳು ಆಗಮಿಸಿದ್ದಾರೆ.
    ಖಾದಿ ವಸಗಳಿಗೆ ಶೇ. 35, ಕಾಟನ್ ಮತ್ತು ಪಾಲಿವಸಗಳಿಗೆ ಶೇ. 35 ಹಾಗೂ ಸಿಲ್ಕ ಮತ್ತು ರೇಷ್ಮೆಗೆ ಶೇ. 20ರಷ್ಟು ರಿಯಾಯಿತಿ ನೀಡುತ್ತಿರುವುದು ವಿಶೇಷ.
    ಮಂಗಲಕರ ಪೂಜೆ ಕಾರ್ಯಗಳಿಗೆ ಶ್ರೇಷ್ಠವಾದ ವಿಜಯಪುರದ ಕಂಬಳಿಗಳು, ಊಟದ ರುಚಿ ಹೆಚ್ಚಿಸಲು ದಕ್ಷಿಣ ಕನ್ನಡದ ಕಾಂಡಿಮೆಂಟ್ಸ್‌ಗಳಿವೆ. ಪಿಕ್ನಿಕ್, ಟೂರ್‌ನಲ್ಲಿ ಬಾಯಾಡಿಸಲು ರುಚಿಕಟ್ಟಾದ ಸ್ನ್ಯಾಕ್ಸ್‌ಗಳು ಬಾಯಲ್ಲಿ ನೀರೂರಿಸುತ್ತಿವೆ. ಎಲ್ಲವೂ ಖರೀದಿಸಿ ಹೊರಗೆ ಬಂದರೆ ಹುಬ್ಬಳ್ಳಿಯ ಗಿರ್ಮಿಟ್, ಬೋಂಡಾ ಭಜ್ಜಿ ಚಪ್ಪರಿಸಿ ಮನೆಗೆ ತೆರಳಬಹುದಾಗಿದೆ.

    ಖಾದಿ ಮೇಳ ಯಶಸ್ವಿಯಾಗಿ ಮುನ್ನಡೆದಿದೆ. ಕಳೆದ ವರ್ಷ 2 ಕೋಟಿ ರೂ. ವಹಿವಾಟು ನಡೆದಿತ್ತು. ೆ. 10ರವರೆಗೆ ಉತ್ಸವ ನಡೆಯುವುದರಿಂದ ಈ ವರ್ಷವೂ ವಹಿವಾಟು ಮೊತ್ತ 2 ಕೋಟಿ ರೂ.ದಾಟುವ ನಿರೀಕ್ಷೆ ಇದೆ. ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ವಿಜಯಪುರದಲ್ಲಿ ಖಾದಿ ಕ್ರೇಜ್ ಹೆಚ್ಚಿದೆ.
    ಬಾಪುಗೌಡ ಬಿ. ಪಾಟೀಲ ಶೇಗುಣಶಿ, ಅಧ್ಯಕ್ಷ, ಕೆಕೆಜಿಎಸ್, ವಿಜಯಪುರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts