More

    ಚಿಹ್ನೆ ಕೊಡುವ ನೆಪದಲ್ಲಿ ಅಭ್ಯರ್ಥಿಯಿಂದ ಹೆಬ್ಬೆಟ್ಟು ಒತ್ತಿಸಿಕೊಂಡು ನಾಮಪತ್ರ ಹಿಂತೆಗೆಸಿದ ಚುನಾವಣಾ ಅಧಿಕಾರಿಗಳು?

    ವಿಜಯಪುರ: ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ನಾಮಪತ್ರ ಹಿಂಪಡೆಯುವ ದಿನ ನಿನ್ನೆಗೆ ಮುಕ್ತಾಯವಾಗಿದ್ದು, ಅಭ್ಯರ್ಥಿಗಳು ಭರ್ಜರಿಯಾಗಿ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಇದರ ನಡುವೆಯೇ ಚುನಾವಣಾ ಅಕ್ರಮವೊಂದು ಬೆಳಕಿಗೆ ಬಂದಿದೆ.

    ನಾಮಪತ್ರ ವಾಪಸ್ ಪಡೆಯಲು ನಿನ್ನೆಯೇ ಕೊನೆ ದಿನ. ಹೀಗಾಗಿ ಕೊನೇ ಕ್ಷಣದಲ್ಲಿ ಚುನಾವಣೆ ಚಿಹ್ನೆ ಕೊಡುವ ನೆಪದಲ್ಲಿ ಅನಕ್ಷರಸ್ಥ ಅಭ್ಯರ್ಥಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಚಿಹ್ನೆ ಕೊಡಬೇಕು ಸಹಿ ಮಾಡಿ ಎಂದು ಅಭ್ಯರ್ಥಿಯಿಂದ ಹೆಬ್ಬೆಟ್ಟು ಒತ್ತಿಸಿಕೊಂಡು ಚುನಾವಣಾ ಅಧಿಕಾರಿಗಳು ನಾಮಪತ್ರ ಹಿಂತೆಗೆಸಿಕೊಂಡಿದ್ದಾರೆಂದು ಆರೋಪಿಸಲಾಗಿದೆ.

    ಇದನ್ನೂ ಓದಿ: ಮದುವೆಯಾಗಿ ಎರಡೇ ತಿಂಗಳಲ್ಲಿ ಗರ್ಭಿಣಿಯಾಗಿದ್ದು ಹೇಗೆ? ಹೊಟ್ಟೆ ಹಿಂದಿನ ಸತ್ಯ ಬಿಚ್ಚಿಟ್ಟ ಗಾಯಕಿ!

    ದೇವರಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮ ಪಂಚಾಯತಿಯಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಕಡ್ಲೇವಾಡ ಸಿ.ಹೆಚ್. ಗ್ರಾಮದ 5ನೇ ವಾರ್ಡ್​ಗೆ ಸ್ಪರ್ಧಿಸಿದ್ದ ನಾಗಮ್ಮ ಬಿರಾದಾರ ಎಂಬ ಮಹಿಳೆಗೆ ವಂಚನೆ ಮಾಡಿದ್ದಾರೆನ್ನಲಾಗಿದೆ. ಅನಕ್ಷರಸ್ಥಳಾದ ನನಗೆ ಚಿಹ್ನೆ ಕೊಡುತ್ತೇವೆ ಎಂದು ನಾಮಪತ್ರ ವಾಪಸ್ ಪಡೆಯುವ ಪತ್ರಕ್ಕೆ ಹೆಬ್ಬೆಟ್ಟು ಒತ್ತಿಸಿಕೊಂಡಿದ್ದಾರೆ ಎಂದು ಅಭ್ಯರ್ಥಿ ನಾಗಮ್ಮ ಬಿರಾದಾರ ಆರೋಪಿಸಿದ್ದಾರೆ.

    ನಿನ್ನೆ ತಡರಾತ್ರಿವರೆಗೂ ಪಂಚಾಯತಿ ಎದುರು ಅಭ್ಯರ್ಥಿ ಹಾಗೂ ಸಂಬಂಧಿಕರು ಪ್ರತಿಭಟನೆ ನಡೆಸಿದ್ದಾರೆ. ಚುನಾವಣಾ ಅಧಿಕಾರಿಗಳು ಎದುರಾಳಿ ಅಭ್ಯರ್ಥಿಗಳೊಂದಿಗೆ ಶಾಮೀಲಾಗಿ ನಮಗೆ ವಂಚಿಸಿದ್ದಾರೆ ಎಂದು ದೂರಿದ್ದಾರೆ. ತಡರಾತ್ರಿವರೆಗೂ ಪ್ರತಿಭಟನೆ ನಡೆಸಿದವರನ್ನು ಪೊಲೀಸರು ಮನವೊಲಿಸಿದ್ದು, ಇಂದು ಮತ್ತೆ ತಮಗಾದ ಅನ್ಯಾಯದ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಲಿದ್ದಾರೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಲಗ್ನ ಪತ್ರಿಕೆ ಜತೆ ವೈನ್​ ಬಾಟಲ್​, ಸ್ನಾಕ್ಸ್​ ಫ್ರೀ! ಮದುವೆ ಬೇಡ ಲಗ್ನ ಪತ್ರಿಕೆ ಬೇಕೆಂದ ಜನರು!

    ವಿವಾಹಿತ ಕಾನ್ಸ್​ಟೇಬಲ್​ ಜತೆ ಮಹಿಳಾ ಎಸ್​ಐ ಲವ್ವಿಡವ್ವಿ: ಏನೇ ಮಾಡಿದ್ರೂ ಸಂಬಂಧ ಮಾತ್ರ ಬಿಡ್ತಿಲ್ಲ!

    ಮೊಬೈಲ್​ ರಿಪೇರಿ ಮಾಡಿಸಿಕೊಳ್ಳುವ ನೆಪದಲ್ಲಿ ಬಂದವಳು ಬಟ್ಟೆ ಬಿಚ್ಚಿಸಿ ಬೆತ್ತಲೆ ವಿಡಿಯೋ ಮಾಡಿದ್ಳು!

    ಅಪಘಾತದಲ್ಲಿ ಮೃತಪಟ್ಟ ಹೆಬ್ಬಾವಿಗೆ ಅಂತ್ಯಸಂಸ್ಕಾರ: ಗ್ರಾಮಸ್ಥರ ಮಾತು ಕೇಳಿದ್ರೆ ಫಿದಾ ಗ್ಯಾರೆಂಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts