More

    ಗೋವುಗಳ ರಕ್ಷಣೆ ಅಗತ್ಯ

    ವಿಜಯಪುರ: ಹಿಂದುಗಳು ಪೂಜಿಸುವ ಗೋವುಗಳ ರಕ್ಷಣೆ ಅಗತ್ಯ ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹೇಳಿದರು.

    ನಗರದ ಶಿವಾಜಿ ವೃತ್ತದಲ್ಲಿ ವಿಜಯಪುರ ನಗರ ಬಿಜೆಪಿ ಮಂಡಲದ ವತಿಯಿಂದ ಗುರುವಾರ ಗೋಮಾತೆಗೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

    ರಾಜ್ಯ ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆ ಮಸೂದೆ ಮಂಡಿಸಿದ್ದು ಸ್ವಾಗತಾರ್ಹ. ಹಿಂದುಗಳ ಭಾವನೆಗಳಿಗೆ ಸ್ಪಂದಿಸುವ ಕೆಲಸವನ್ನು ಸರ್ಕಾರ ಮಾಡಿದ್ದು, ಗೋವಿನ ಸಂತತಿ ರಕ್ಷಣೆ ಮಾಡಬೇಕಿದೆ. ಕೃಷಿ ಚಟುವಟಿಕೆ ಅಲ್ಲದೆ ಹೈನೋದ್ಯಮದಲ್ಲಿ ಗೋವುಗಳ ಪ್ರಾಮುಖ್ಯತೆ ಹೆಚ್ಚಿದೆ. ಗೋವುಗಳಿದ್ದರೆ ಮಾತ್ರ ನಾವೂ ಇರಲು ಸಾಧ್ಯ ಎಂದರು.

    ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವರುದ್ರ ಬಾಗಲಕೋಟ ಮಾತನಾಡಿ, ಕೊಟ್ಟ ಮಾತಿನಂತೆ ನಡೆದುಕೊಂಡಿರುವ ಬಿಜೆಪಿ ಸರ್ಕಾರ ಐತಿಹಾಸಿಕ ನಿರ್ಣಯ ಕೈಗೊಂಡಿದ್ದು ಅಭಿನಂದನಾರ್ಹ. ಗೋ ಮಾತೆಯನ್ನು ಪೂಜಿಸುವ ರೈತರು, ಹೈನುಗಾರಿಕೆ ಮಾತ್ರವಲ್ಲದೆ ಕೃಷಿ ಸಂಬಂಧಿತ ಚಟುವಟಿಕೆಗೆ ಗೋವುಗಳನ್ನು ಅವಲಂಬಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಗೋವುಗಳ ಕಳ್ಳ ಸಾಗಾಟ ನಡೆಯುತ್ತಿವೆ. ಅದರಿಂದ ರೈತರು, ಗೋಪ್ರೇಮಿಗಳ ಆತಂಕಕ್ಕೆ ಕಾರಣವಾಗಿತ್ತು. ಅಲ್ಲದೆ, ಹಿಂದುಗಳ ಸಾಮರಸ್ಯಕ್ಕೆ ಧಕ್ಕೆ ಉಂಟಾಗುತ್ತಿತ್ತು. ಈ ಕಾಯ್ದೆಯಿಂದ ಗೋವುಗಳ ರಕ್ಷಣೆ ಮಾಡಲು ಸಾಧ್ಯವಾಗಲಿದೆ ಎಂದು ಹೇಳಿದರು.

    ನಗರ ಮಂಡಲ ಅಧ್ಯಕ್ಷ ಮಳುಗೌಡ ಪಾಟೀಲ, ಬೆಳಗಾವಿ ವಿಭಾಗದ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಕ್ಕಲಕೋಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗೂರ, ಮುಖಂಡರಾದ ಭೀಮಾಶಂಕರ ಹದನೂರ, ವಿಜಯ ಜೋಶಿ, ರಾಜು ಮಗಿಮಠ, ಪಾಪುಸಿಂಗ್ ರಜಪೂತ, ಬಸವರಾಜ ಬೈಚಬಾಳ, ಅಲ್ತಾಫ್ ಇಟಗಿ, ರಾಹುಲ್ ಜಾಧವ, ರಾಜು ಬಿರಾದಾರ, ಮಲ್ಲಮ್ಮ ಜೋಗೂರ, ಭಾರತಿ ಭುಯ್ಯರ, ಸಂಜಯ ಪಾಟೀಲ ಕನಮಡಿ, ಕೃಷ್ಣಾ ಗುನ್ಹಾಳಕರ, ರಾಕೇಶ ಕುಲಕರ್ಣಿ, ರಾಜೇಶ ತಾವಸೆ, ರಾಜು ವಾಲಿ, ವಿಠಲ ನಡುವಿನಕೇರಿ, ಲಕ್ಷ್ಮಿ ಕನ್ನೊಳ್ಳಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts