More

    ಬಾಳು ಬೆಳಗದ ಬಾಳೆ ಕರೊನಾ ಸಂತ್ರಸ್ತರ ಪಾಲು

    ವಿಜಯಪುರ: ಪರಿಸ್ಥಿತಿ ಎಲ್ಲವೂ ಸರಿಯಿದ್ದರೆ ಮೂರು ಎಕರೆ ಜಮೀನಿನಲ್ಲಿ ಬೆಳೆದ 120 ಟನ್ ಬಾಳೆಹಣ್ಣಿನಿಂದ ಕನಿಷ್ಠ 18 ಲಕ್ಷ ರೂ. ಲಾಭ ಮಾಡಕೊಳ್ಳಬಹುದಾಗಿತ್ತು. ಆದರೆ, ಕರೊನಾ ಲಾಕ್‌ಡೌನ್‌ನಿಂದಾಗಿ ಫಸಲು ಮಾರಾಟಗೊಳ್ಳದೆ ಇರುವುದರಿಂದ ಅದನ್ನು ಬಡವರು ಮತ್ತು ನಿರಾಶ್ರಿತರಿಗೆ ರೈತರೊಬ್ಬರು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

    ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್‌ಎಚ್ ಗ್ರಾಮದ ರೈತ ಬಸವರಾಜ ಕಾತ್ರಾಳ ಇಂಥದ್ದೊಂದು ಸೇವೆ ಮಾಡುತ್ತಿದ್ದು ಕಳೆದ 12 ದಿನಗಳಿಂದ ಬಾಳೆಹಣ್ಣನ್ನು ಕರೊನಾ ಸಂತ್ರಸ್ತರಿಗೆ ಉಚಿತವಾಗಿ ಹಂಚುತ್ತಿದ್ದಾರೆ.

    ಒಟ್ಟು 3 ಎಕರೆ ಜಮೀನಿನಲ್ಲಿ ಬಾಳೆ ಹಣ್ಣು ಬೆಳೆದಿರುವ ಬಸವರಾಜ ಅದಕ್ಕಾಗಿ ಲಕ್ಷಾಂತರ ರೂ. ಖರ್ಚು ಮಾಡಿದ್ದಾರೆ. ಚೊಚ್ಚಲ ಫಸಲು ಭರ್ಜರಿಯಾಗಿ ಬಂದಿದ್ದು, 120 ಟನ್ ಬಾಳೆ ಬೆಳೆದಿದೆ. ಅಂದಾಜು 18 ಲಕ್ಷ ರೂ. ಆದಾಯ ನಿರೀಕ್ಷೆಯಲ್ಲಿದ್ದರು. ಈಗಾಗಲೇ 40 ಟನ್ ಮಾರಾಟ ಮಾಡಲಾಗಿದೆ. ಅಷ್ಟರಲ್ಲಾಗಲೇ ಲಾಕ್‌ಡೌನ್ ಹೇರಿಕೆಯಿಂದಾಗಿ ಇನ್ನುಳಿದ ಫಸಲು ಮಾರಾಟಗೊಳ್ಳಲೇ ಇಲ್ಲ. ಹೀಗಾಗಿ ಎಲ್ಲ ಹಣ್ಣುಗಳನ್ನು ಬಡವರು ಮತ್ತು ನಿರಾಶ್ರಿತರಿಗೆ ನೀಡಲು ಮುಂದಾಗಿದ್ದಾರೆ.

    ಪ್ರತಿ ದಿನ ಒಂದು ಟನ್‌ನಷ್ಟು ಬಾಳೆ ಹಣ್ಣು ಕರೊನಾ ಕಾಳಜಿ ಕೇಂದ್ರಕ್ಕೆ ಕಳುಹಿಸಿಕೊಡಲಾಗುತ್ತಿದೆ. ಅದಕ್ಕಾಗಿ ಜಿಲ್ಲಾಡಳಿತದ ಪರವಾನಗಿಯನ್ನೂ ಪಡೆಯಲಾಗಿದೆ. ಈಗಾಗಲೇ ಬಬಲೇಶ್ವರ ತಾಲೂಕಿನ ಬಬಲೇಶ್ವರ, ಕಾಖಂಡಕಿ, ಕಾರಜೋಳದ ಕಿತ್ತೂರು ಚನ್ನಮ್ಮ ವಸತಿ ಶಾಲೆಯ ಕಾಳಜಿ ಕೇಂದ್ರಕ್ಕೆ 5-6 ಕ್ವಿಂಟಾಲ್ ಬಾಳೆ ಹಣ್ಣು ಕೊಡಲಾಗಿದೆ. ಯಕ್ಕುಂಡಿ, ಹೊಕ್ಕುಂಡಿ, ಕಾತ್ರಾಳ, ಬಬಲಾದಿ, ಕೆಂಗಲಗುತ್ತಿ, ಗುಣದಾಳ ಮುಂತಾದ ಗ್ರಾಮಗಳಲ್ಲಿ ಬಾಳೆ ಹಣ್ಣು ಹಂಚಲಾಗಿದೆ. ಸೋಮವಾರ ವಿಜಯಪುರ ನಗರದ ವಿವಿಧ ಕರೊನಾ ಕಾಳಜಿ ಕೇಂದ್ರಕ್ಕೂ ಬಾಳೆ ಹಣ್ಣು ಪೂರೈಸಲಾಯಿತು.

    ಕರೊನಾದಿಂದಾಗಿ ಚೊಚ್ಚಲ ಫಸಲು ಸಾಕಷ್ಟು ಹಾನಿಯುಂಟು ಮಾಡಿತಾದರೂ ಸದರಿ ಫಸಲು ನಿರಾಶ್ರಿತರಿಗೆ ಹಾಗೂ ಬಡವರಿಗೆ ಹಂಚುತ್ತಿರುವುದು ಸಂತೃಪ್ತಿ ತಂದಿದೆ.
    ಬಸವರಾಜ ಕಾತ್ರಾಳ ಬಾಳೆಹಣ್ಣು ಹಂಚುತ್ತಿರುವ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts