More

    ಬದುಕಿಗೆ ಶಿಕ್ಷಣ ಅವಶ್ಯ

    ವಿಜಯಪುರ: ಶಿಕ್ಷಣ ನೀಡುವುದು ಕೇವಲ ಇಲಾಖೆ ಜವಾಬ್ದಾರಿಯಲ್ಲ. ಅದರಲ್ಲಿ ಸಂಘ-ಸಂಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಜನರಿಗೆ ದೈನಂದಿನ ಜೀವನಕ್ಕೆ ವ್ಯವಸ್ಥಿತವಾಗಿ ಬದುಕಲು ಶಿಕ್ಷಣ ಅವಶ್ಯಕ ಎಂದು ಡಿಡಿಪಿಐ ಎನ್.ವಿ. ಹೊಸೂರ ಹೇಳಿದರು.

    ನಗರದ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ, ಜಿಲ್ಲಾ ಲೋಕ ಶಿಕ್ಷಣ ಸಮಿತಿ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ 55ನೇ ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಶಿಕ್ಷಣ ಪಡೆದವರು ಪ್ರತಿಯೊಬ್ಬರೂ ತಲಾ ಐವರು ಜನರನ್ನು ಸುಶಿಕ್ಷಿತರನ್ನಾಗಿ ಮಾಡುವ ಗುರಿ ಹೊಂದಿದರೆ ಮಾತ್ರ ಸಂಪೂರ್ಣ ಸಾಕ್ಷರತಾ ಗುರಿ ತಲುಪಬಹುದು ಎಂದರು.

    ಜಿಲ್ಲಾ ಸಾಕ್ಷರತಾ ಅಧಿಕಾರಿ ಆನಂದ ದೇವರನಾವದಗಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತ ಶೇ. 70 ರಷ್ಟು ಸಾಕ್ಷರತೆ ಹೊಂದಿದೆ. ಈ ವರ್ಷ ಶೇ.100 ರಷ್ಟು ಗುರಿ ಹೊಂದಿದ್ದು, ಮುಂದಿನ ದಿನಗಳಲ್ಲಿ ಡಿಜಿಟಲ್ ಜಗತ್ತು ನಿರ್ಮಿಸುವ ಉದ್ದೇಶ ಹೊಂದಬೇಕಾಗಿದೆ ಎಂದರು.

    ಸಂಘಟಕ ಜಗದೀಶ ಬೋಳಸೂರ ಮಾತನಾಡಿ, ಪ್ರತಿ ಕಾರ್ಯಕ್ಕೆ ತಂತ್ರಜ್ಞಾನದ ಬಳಕೆ ಮಾಡುತ್ತಿರುವ ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಕಂಪ್ಯೂಟರ್ ಬಳಸುವ ಜ್ಞಾನ, ಪ್ರತಿಯೊಬ್ಬರೂ ಅರಿತುಕೊಳ್ಳಬೇಕೆಂದು ತಿಳಿಸಿದರು.

    ತಾಲೂಕಿನ ಸಾಕ್ಷರತಾ ಸಂಯೋಜಕ ಉಮೇಶ ಕವಲಗಿ, ಎಂ.ಐ. ಬಿರಾದಾರ, ಎಸ್.ಎಸ್. ತಾಳಿಕೋಟಿ, ಎಸ್.ಆರ್. ಪಾಟೀಲ, ಜಿಲ್ಲಾ ಸಂಯೋಜಕಿ ಕವಿತಾ ಭೈರವಾಡಗಿ, ಬಸವರಾಜ ನವಲಿ, ರಾಜು ಗುಬ್ಬೇವಾಡ, ಶಿಕ್ಷಕ ಆರ್.ಎಂ. ಪಾಟೀಲ, ರವಿ ಬಿರಾದಾರ, ಎಂ.ಐ. ಬಿರಾದಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts