More

    ಹಬ್ಬದ ಸಂಭ್ರಮ ಕಸಿದ ಕರೊನಾ

    ವಿಜಯಪುರ: ಕರೊನಾ ಮಹಾಮಾರಿ ಈ ವರ್ಷವೂ ಹಬ್ಬದ ಸಂಭ್ರಮ ಕಸಿದಿದೆ. ಶುಕ್ರವಾರ ಒಂದೇ ದಿನ ರಂಜಾನ್, ಬಸವ ಜಯಂತಿ ಹಾಗೂ ಅಕ್ಷಯ ತೃತೀಯಾ ಹಬ್ಬವನ್ನು ಹಿಂದು- ಮುಸ್ಲಿಮರು ಮನೆಯಲ್ಲೇ ಹಬ್ಬದ ಸಡಗರ ಹಂಚಿಕೊಂಡರು.

    ಪ್ರತಿ ವರ್ಷವೂ ಹಬ್ಬದ ಅಂಗವಾಗಿ ಮಾರುಕಟ್ಟೆ, ಚಿನ್ನಾಭರಣ ಮಳಿಗೆಗಳು, ಮಸೀದಿ, ಮಂದಿರಗಳಲ್ಲಿ ಜನರು ಇರುತ್ತಿದ್ದರು. ಆದರೆ, ಈ ವರ್ಷ ಕರೊನಾ ಎರಡನೇ ಅಲೆ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಘೋಷಿಸಿದ್ದರಿಂದಾಗಿ ಹಬ್ಬದ ವಾತಾವರಣ ಇರಲಿಲ್ಲ.

    ಮಸೀದಿ, ಮಂದಿರಗಳೆಲ್ಲ ಬಿಕೋ
    ಬಸವ ಜಯಂತಿ, ಅಕ್ಷಯ ತೃತೀಯಾ ಪ್ರಯುಕ್ತ ಬಹುತೇಕ ಭಕ್ತರು ದೇವಸ್ಥಾನಗಳಿಗೆ ತೆರಳುವುದು ಹೆಚ್ಚು. ಆದರೆ, ಈ ಬಾರಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಇರಲಿಲ್ಲ. ಬಹುತೇಕ ದೇವಸ್ಥಾನಗಳ ಬಾಗಿಲು ಮುಚ್ಚಿದ್ದವು. ಇದರಿಂದ ಭಕ್ತರಿಲ್ಲದೆ ಮಂದಿರಗಳೆಲ್ಲವೂ ಬಿಕೋ ಎನ್ನುದ್ದವು.

    ಇನ್ನೂ ರಂಜಾನ್ ಪ್ರಯುಕ್ತ ಐತಿಹಾಸಿಕ ಶಾಹಿ ಈದ್ಗಾ, ದಖನಿ ಈದ್ಗಾ, ಜಾಮೀಯಾ ಮಸೀದಿ ಸೇರಿ ಎಲ್ಲೆಡೆಯೂ ಅಂದಾಜು ಒಂದು ಲಕ್ಷ ಜನರು ಒಂದೆಡೆ ಸೇರಿ ಸಾಮೂಹಿಕವಾಗಿ ಪ್ರಾರ್ಥಿಸುತ್ತಿದ್ದರು. ಈ ಬಾರಿ ಅದಕ್ಕೆ ಅವಕಾಶ ಇರಲಿಲ್ಲ. ಕರೊನಾ ಹಿನ್ನೆಲೆ ಕೈಕುಲುಕುವ ಸಂಪ್ರದಾಯದಿಂದ ದೂರ ಉಳಿದರು. ಕೆಲವರು ಮಾತ್ರ ಮನೆಯಲ್ಲಿಯೇ ಮೊಬೈಲ್ ಮೂಲಕ ಸಂಪರ್ಕಿಸಿ ಶುಭಾಷಯ ಕೋರಿದರು. ಅಲ್ಲದೆ ‘ಶಿರಕುರಮಾ’ ಮಾಡಿ ವಿಶೇಷವಾಗಿ ಮನೆ ಸದಸ್ಯರು ಸೇವಿಸಿ ಸಂಭ್ರಮಪಟ್ಟರು.

    ಚಿನ್ನಾಭರಣ ಮಳಿಗೆಗಳು ಬಂದ್
    ಲಾಕ್‌ಡೌನ್ ಹಿನ್ನೆಲೆಯಲ್ಲಿ ಚಿನ್ನಾಭರಣ ಮಳಿಗೆಗಳು ಸಂಪೂರ್ಣ ಬಂದ್ ಮಾಡಲಾಗಿತ್ತು. ಪ್ರತಿ ವರ್ಷ ಅಕ್ಷಯ ತೃತೀಯಾಕ್ಕೆ ಚಿನ್ನಾಭರಣ ಮಳಿಗೆಗಳಲ್ಲಿ ಜನರು ಚಿನ್ನಾಭರಣಗಳನ್ನು ಖರೀದಿಸುವ ಮೂಲಕ ಸಂಭ್ರಮ ವ್ಯಕ್ತಪಡಿಸುತ್ತಿದ್ದರು. ಆದರೆ ಈ ಬಾರಿ ಮಳಿಗೆಗಳೆಲ್ಲವೂ ಬಂದ್ ಆಗಿದ್ದರಿಂದಾಗಿ ಗ್ರಾಹಕರು ಚಿನ್ನಾಭರಣಗಳ ಖರೀದಿಸುವ ಗೋಜಿಗೆ ಹೋಗಲಿಲ್ಲ. ಪ್ರತಿ ವರ್ಷ ಅಕ್ಷಯ ತೃತೀಯಾಕ್ಕೆ ಕೋಟ್ಯಂತರ ರೂ. ವಹಿವಾಟು ನಡೆಯುತ್ತಿತ್ತು. ಆದರೆ, ಅದಕ್ಕೆ ಕರೊನಾ ಕೊಕ್ಕೆ ಹಾಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts