More

    ಮಹಾಮಾರಿಗೆ ಮೂಲ ಮಹಾರಾಷ್ಟ್ರ

    ವಿಜಯಪುರ: ಮಹಾಮಾರಿ ಕರೊನಾಕ್ಕೆ ಮಹಾರಾಷ್ಟ್ರವೇ ಮೂಲವಾಗಿದ್ದು ಎರಡೇ ಕುಟುಂಬದಿಂದ ಹಬ್ಬಿದ ಸೋಂಕು ಇದೀಗ 6 ಕುಟುಂಬಗಳಿಗೆ ವಿಸ್ತರಿಸಿದೆ.
    ನಗರದ ಚಪ್ಪರಬಂದ್ ಕಾಲನಿಯ 60 ವರ್ಷದ ಮಹಿಳೆ ಪಿ. 221 ಹಾಗೂ ಪಿ. 228 ನಿಂದ ಆರಂಭಗೊಂಡ ಮಹಾಮಾರಿ ಇದೀಗ ಬರೋಬ್ಬರಿ 35 ಜನರಿಗೆ ತಗುಲಿ ಅದರಲ್ಲಿಬ್ಬರು ಈಗಾಗಲೇ ಅಸುನೀಗಿದ್ದಾರೆ. 33 ಜನ ಸಕ್ರಿಯವಾಗಿದ್ದು ಇನ್ನೂ ಪರೀಕ್ಷಾ ವರದಿ ಬರಬೇಕಿದೆೆ. ಬಹುತೇಕ ಪ್ರಕರಣಗಳು ಪಿ 221 ಅಂದರೆ 60 ವರ್ಷದ ವೃದ್ಧೆಯಿಂದಲೇ ಆರಂಭಗೊಂಡಿದ್ದಾಗಿವೆ. ಆಕೆ ಪತಿ ಈಗಾಗಲೇ ಸಾವಿಗೀಡಾಗಿದ್ದು ಕುಟುಂಬ ಸದಸ್ಯರು ಸೇರಿ ಸಂಬಂಧಿಕರಿಗೂ ಹರಡಿದೆ. ಏತನ್ಮಧ್ಯೆ ಸೋಂಕಿತನ ಸ್ನೇಹಿತ ಸಹ ಅಸುನೀಗಿದ್ದು ಆತನಿಗೂ ಸೋಂಕು ದೃಢಪಟ್ಟಿದೆ.

    ಮಹಾಮಾರಿಯ ಮೂಲ

    ಸದರಿ ಮಹಾಮಾರಿ ಮಹಾರಾಷ್ಟ್ರದಿಂದಲೇ ಜಿಲ್ಲೆ ಪ್ರವೇಶಿಸಿರುವುದು ದೃಢಪಟ್ಟಿದೆ. ಪ್ರಕರಣ ಪಿ 221 ಗೆ ಸಂಬಂಧಿಸಿದಂತೆ ಸೋಂಕಿತರೆಲ್ಲರೂ ಮಹಾರಾಷ್ಟ್ರದ ಇಚ್ಚಲಕರಂಜಿಗೆ ಹೋಗಿದ್ದು ಗೊತ್ತಾಗಿದೆ. ಅಲ್ಲಿ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡ ಸಂದರ್ಭ ಈ ಸೋಂಕು ಹರಡಿದೆ. ಪಿ 221 ಸೋಂಕಿತೆಯ ಮನೆಯಲ್ಲಿ ಒಟ್ಟು 25 ಜನರಿದ್ದು ನೇರವಾಗಿ 12 ಜನರಿಗೆ ಸೋಂಕು ತಗುಲಿದೆ. ಉಳಿದಂತೆ ಒಬ್ಬರಿಂದ ಒಬ್ಬರಿಗೆ ಹರಡಿದ್ದು ಇದೀಗ 28ಕ್ಕೆ ತಲುಪಿದೆ. ಪಿ 228 ಪ್ರಕರಣ ಪೂನಾದಿಂದ ಜಿಲ್ಲೆ ಪ್ರವೇಶ ಪಡೆದಿರುವುದು ತನಿಖೆಯಿಂದ ಗೊತ್ತಾಗಿದ್ದು ಅದರಲ್ಲಿ 7 ಜನರಿಗೆ ಸೋಂಕು ದೃಢಪಟ್ಟಿದೆ. ಸದರಿ ಮನೆಯ ಮುಂದಿನ ಮಹಿಳೆಯೊಬ್ಬಳಿಗೂ ಸೋಂಕು ದೃಢಪಟ್ಟಿದೆ.

    ಸವಾಲಾದ ತಪಾಸಣೆ

    ಆರಂಭದಲ್ಲಿ ಎರಡೇ ಕುಟುಂಬಗಳಿಗೆ ಸೋಂಕು ಸೀಮಿತಗೊಂಡಿದ್ದಾಗ ಜಿಲ್ಲಾಡಳಿತ ಆ ಇಡೀ ಬಡಾವಣೆಯನ್ನು ಸೀಲ್‌ಡೌನ್ ಮಾಡಿ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ತಲ್ಲೀನವಾಗಿತ್ತು. ಬಳಿಕ ಪಿ 221 ಪ್ರಕರಣದ ವೃದ್ಧೆಯ ಸಂಬಂಧಿ ಪಿ 306 ಸಹ ಮಹಾರಾಷ್ಟ್ರದ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದು ಆತನಿಂದ ಆತನ ಮಗ ಪೇದೆಗೂ ತಗುಲಿದೆ. ಈ ಪೇದೆ ಬೇರೊಂದು ಕಾಯಿಲೆಯ ಚಿಕಿತ್ಸೆಗಾಗಿ ಸ್ನೇಹಿತನನ್ನು ಬೆಳಗಾವಿ, ಬೆಂಗಳೂರಿಗೆ ಕರೆದುಕೊಂಡು ಸಂಚರಿಸಿದ್ದಾನೆ. ಇದೀಗ ಆ ಸ್ನೇಹಿತ ಅಸುನೀಗಿದ್ದು ಆತನ ಕುಟುಂಬಸ್ಥರನ್ನೂ ಗೃಹ ಬಂಧನದಲ್ಲಿರಿಸಲಾಗಿದೆ. ಜತೆಗೆ ಆತನ ಗ್ರಾಮವನ್ನೇ ಸೀಲ್‌ಡೌನ್ ಮಾಡಲಾಗಿದೆ. ಇದೀಗ ಪೇದೆ ತಂದೆಗೆ ಸಂಬಂಧಿಸಿದಂತೆ ಮತ್ತೆ 3 ಪ್ರಕರಣಗಳು ದೃಢಪಟ್ಟಿವೆ. ಹೀಗಾಗಿ ಜಿಲ್ಲಾಡಳಿತಕ್ಕೆ ಯಾರನ್ನು ತಪಾಸಣೆಗೊಳಪಡಿಸಬೇಕು ಎಂಬುದೇ ಸವಾಲಾಗಿದೆ.

    ಈಗಾಗಲೇ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರ ಮಾಹಿತಿ ಕಲೆ ಹಾಕಲಾಗಿದೆ. ಸದ್ಯ ಬರುತ್ತಿರುವ ಎಲ್ಲ ಪಾಸಿಟಿವ್ ಪ್ರಕರಣಗಳಲ್ಲಿ ಎಲ್ಲರೂ ಗೃಹ ಬಂಧನದಲ್ಲಿ ಇರುವವರೇ. ಬಹುತೇಕ ಪ್ರಕರಣಗಳು ಸೀಲ್‌ಡೌನ್ ಮಾಡಲಾದ ಚಪ್ಪರ್‌ಬಂದ್ ಕಾಲನಿಯದ್ದೇ ಆಗಿವೆ. ಹೀಗಾಗಿ ಆತಂಕ ಬೇಡ.
    ವೈ.ಎಸ್. ಪಾಟೀಲ, ಜಿಲ್ಲಾಧಿಕಾರಿ

    ಮಹಾಮಾರಿಗೆ ಮೂಲ ಮಹಾರಾಷ್ಟ್ರ
    ಮಹಾಮಾರಿಗೆ ಮೂಲ ಮಹಾರಾಷ್ಟ್ರ
    ಮಹಾಮಾರಿಗೆ ಮೂಲ ಮಹಾರಾಷ್ಟ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts