More

    ಬಹುನಿರೀಕ್ಷೆಯ ‘ವಿಜಯಾನಂದ’ ಟ್ರೇಲರ್​ ಬಿಡುಗಡೆಗೆ 2 ದಿನಗಳಷ್ಟೇ ಬಾಕಿ

    ಬೆಂಗಳೂರು: ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಬಯೋಪಿಕ್​ ಆದ ‘ವಿಜಯಾನಂದ’ ಚಿತ್ರದ ಡ್ಯುಯೆಟ್​ ಹಾಡು ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸೂಪರ್​ ಹಿಟ್​ ಆಗಿದೆ. ಎರಡು ಕೋಟಿಗೂ ಹೆಚ್ಚು ವೀಕ್ಷಣೆಯಾಗಿರುವ ಈ ಹಾಡಿನ ನಂತರ ಇದೀಗ ಚಿತ್ರದ ಟ್ರೇಲರ್​ ಬಿಡುಗಡೆಗೆ ಸಜ್ಜಾಗಿದೆ.

    ‘ವಿಜಯಾನಂದ’ ಚಿತ್ರದ ಟ್ರೇಲರ್​​ ಬಿಡುಗಡೆಗೆ ಇನ್ನು ಕೇವಲ ಎರಡು ದಿನಗಳಷ್ಟೇ ಇದ್ದು, ನ. 19ರಂದು ಸಂಜೆ ಒರಾಯನ್​ ಮಾಲ್​ನ ಪಿವಿಆರ್​ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಈ ಟ್ರೇಲರ್​ ಐದು ಭಾಷೆಗಳಲ್ಲಿ ಸಿಗಲಿದೆ.

    ಇದನ್ನೂ ಓದಿ: ‘ಭಾಗ್ಯವಂತ’ರೊಂದಿಗೆ ‘ಸಾಂಗ್ಲಿಯಾನ’; ಈ ವಾರ 7 ಚಿತ್ರಗಳ ಬಿಡುಗಡೆ

    ‘ವಿಜಯಾನಂದ’ ಚಿತ್ರವು 1976ರಲ್ಲಿ ಒಂದು ಟ್ರಕ್​ನಿಂದ ಪ್ರಾರಂಭವಾಗಿ ಇಂದು ಭಾರತದ ಅತಿ ದೊಡ್ಡ ಲಾಜಿಸ್ಟಿಕ್ಸ್​ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ವಿಆರ್​​ಎ​ಲ್​ ಸಂಸ್ಥೆಯ ಮಾಲೀಕರಾಗಿರುವ ವಿಜಯ ಸಂಕೇಶ್ವರ ಅವರ ಅದ್ಭುತ ಮತ್ತು ರೋಮಾಂಚನಕಾರಿ ಕಥೆಯಾಗಿದೆ. ಈ ಕಥೆಯು ವಿಜಯ ಸಂಕೇಶ್ವರ ಮತ್ತು ಅವರ ಮಗ ಡಾ. ಆನಂದ ಸಂಕೇಶ್ವರ ಅವರ ಯಶಸ್ಸಿನ ಪ್ರಯಾಣವನ್ನು ಒಳಗೊಂಡಿದೆ.

    ‘ವಿಜಯಾನಂದ’ ಚಿತ್ರವು ಕನ್ನಡ ಚಿತ್ರರಂಗದ ಅಫಿಷಿಯಲ್​ ಮತ್ತು ಕಮರ್ಷಿಯಲ್​ ಜೀವನಚರಿತ್ರೆಯಾಗಿದ್ದು, ಡಿ.9ರಂದು ಪ್ಯಾನ್​ ಇಂಡಿಯಾ ಚಿತ್ರವಾಗಿ ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

    ಇದನ್ನೂ ಓದಿ: ಅನಂತ್​ ನಾಗ್​ ತಾತ, ದಿಗಂತ್​ ಮೊಮ್ಮಗ; 30 ವರ್ಷಗಳ ನಂತರ ಭೇಟಿ

    ವಿಆರ್​ಎಲ್​ ಪ್ರೊಡಕ್ಷನ್ಸ್​ನಡಿ ಡಾ. ಆನಂದ ಸಂಕೇಶ್ವರ ನಿರ್ಮಿಸುತ್ತಿರುವ ‘ವಿಜಯಾನಂದ’ ಚಿತ್ರದಲ್ಲಿ ನಿಹಾಲ್ ರಜಪೂತ್​​, ಡಾ. ವಿಜಯ ಸಂಕೇಶ್ವರ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಅನಂತ್​ ನಾಗ್​, ರವಿಚಂದ್ರನ್​, ವಿನಯಾ ಪ್ರಸಾದ್​, ಸಿರಿ ಪ್ರಹ್ಲಾದ್​, ಪ್ರಕಾಶ್​ ಬೆಳವಾಡಿ, ಭರತ್​ ಬೋಪಣ್ಣ ಮುಂತಾದವರು ನಟಿಸಿದ್ದಾರೆ. ರಿಷಿಕಾ ಶರ್ಮ ಚಿತ್ರಕಥೆ ರಚಿಸುವುದರ ಜತೆಗೆ ನಿರ್ದೇಶನ ಮಾಡಿದ್ದಾರೆ.

    ದಕ್ಷಿಣ ಭಾರತದ ಜನಪ್ರಿಯ ಸಂಗೀತ ನಿರ್ದೇಶಕರಾದ ಗೋಪಿ ಸುಂದರ್​ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

    ಥಾಯ್​ ಭಾಷೆಗೆ ಡಬ್​ ಆದ ‘777 ಚಾರ್ಲಿ; ಡಿ.1ಕ್ಕೆ ಥಾಯ್ಲೆಂಡ್​ನಲ್ಲಿ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts