More

    ಕಲುಷಿತ ನೀರು ಕುಡಿದು ಪ್ರಾಣ ಕಳೆದುಕೊಂಡ ಮಹಿಳೆ; 50ಕ್ಕೂ ಹೆಚ್ಚು ಜನ ಅಸ್ವಸ್ಥ…

    ವಿಜಯನಗರ: ವಿಜಯನಗರದ ಹೊಸಪೇಟೆಯಲ್ಲಿ ಕಲುಷಿತ ನೀರು ಸೇವಿಸಿ ಮಹಿಳೆಯೊಬ್ಬರು ಸಾವಿಗೀಡಾಗಿದ್ದು, 50ಕ್ಕೂ ಅಧಿಕ ಜನರು ಅಸ್ವಸ್ಥರಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಾರಣ ಕೇಳಿರುವ ಜಿಲ್ಲಾಡಳಿತ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದೆ.

    ಮೇಲ್ನೋಟಕ್ಕೆ ಕಲುಷಿತ ನೀರು ಸಪ್ಲೈ ಸಾಬೀತು ಆಗಿದ್ದು ನಗರಸಭೆ ಅಧಿಕಾರಿಗಳು, ಶುದ್ಧ ನೀರು ಸರಬರಾಜು ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಹೊಸಪೇಟೆ ಆರೋಗ್ಯ ಅಧಿಕಾರಿ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ, ನಗರಸಭೆ ಕಿರಿಯ ಅಭಿಯಂತರರು (ನೀರು ಸರಬಾರಜು ಶಾಖೆ), ಸಹಾಯಕ ಕಾರ್ಯಪಾಲ ಅಭಿಯಂತರರು ಸೇರಿದಂತೆ ಆರು ಅಧಿಕಾರಿಗಳಿಗೆ ಜಿಲ್ಲಾಡಳಿತ ನೋಟಿಸ್ ಜಾರಿ ಮಾಡಿದೆ.

    ಕಲುಷಿತ ನೀರು ಸರಬರಾಜು ಆಗುತ್ತಾ ಇರುವುದರ ಬಗ್ಗೆ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿಲ್ಲ. ಅದಲ್ಲದೇ ಈ ಅಧಿಕಾರಿಗಳು ಕಲುಷಿತ ನೀರಿನಿಂದಾಗಿ ಜನ ಸಾವಿಗೀಡಾಗಿರುವುದರ ಬಗ್ಗೆಯೂ ಮೇಲಾಧಿಕಾರಿಗಳ ಗಮನಕ್ಕೆ ತಂದಿಲ್ಲ. ಕೆಳ ಹಂತದ ಅಧಿಕಾರಿಗಳು ಜಿಲ್ಲಾಡಳಿತಕ್ಕೆ ಮುಜುಗರ ತರುವ ಕೆಲಸ ಮಾಡಿರುವ ಕಾರಣ ಜಿಲ್ಲಾಡಳಿತ ನೋಟಿಸ್​ ನೀಡಿದೆ. ಜಿಲ್ಲಾಡಳಿತ ನೀಡಿದ ನೋಟಿಸ್ ಗೆ ಕೂಡಲೇ ಉತ್ತರ ಕೊಡಬೇಕು ಎಂದು ಉಲ್ಲೇಖಿಸಲಾಗಿದೆ. ಒಂದು ನಿಖರ ಕಾರಣ ಕೊಡದೇ ಹೋದಲ್ಲಿ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದು ನೋಟಿಸಿನಲ್ಲಿ ಉಲ್ಲೇಖಿಸಲಾಗಿದೆ. ಈ 6 ಅಧಿಕಾರಿಗಳಿಗೆ ವಿಜಯನಗರ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ನೋಟಿಸ್ ಜಾರಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts