More

    ರಶ್ಮಿಕಾ ನಟನೆಯ ಈ ಹಿಂದಿ ಸಿನಿಮಾ ಬರೋಬ್ಬರಿ 100 ಮಿಲಿಯನ್​ ವೀಕ್ಷಣೆ ಕಂಡಿದೆ ಅಂದರೆ ಅಚ್ಚರಿಯೇ ಸರಿ!!

    ರಶ್ಮಿಕಾ ಮಂದಣ್ಣ ಸದ್ಯ ಸೌತ್​ ಇಂಡಸ್ಟ್ರಿಯ ಸೆನ್ಸೆಷನ್. ಕಿರು ಅವಧಿಯಲ್ಲಿ ಅವರ ಅಂದ, ಚೆಂದ, ನಟನೆ ಕಂಡು ಫಿದಾ ಆದವರು ಅಷ್ಟಿಷ್ಟಲ್ಲ. ಅದೇ ರೀತಿ ಅವರಿಗೆ ಉತ್ತರ ಭಾರತದಲ್ಲೂ ಅಭಿಮಾನಿಗಳಿದ್ದಾರೆ. ಸಿನಿಮಾ ತೆರೆಕಂಡರೆ ಮುಗಿಬಿದ್ದು ನೋಡುವವರಿದ್ದಾರೆ. ಈಗ ಅವರ ಸಿನಿಮಾವನ್ನು ಬರೋಬ್ಬರಿ 100 ಮಿಲಿಯನ್​ (10ಕೋಟಿ) ಜನರಿಂದ ವೀಕ್ಷಣೆ ಕಂಡಿದೆ. ಹೌದು, ಕಳೆದ ವರ್ಷ ವಿಜಯ್​ ದೇವರಕೊಂಡ ಮತ್ತು ರಶ್ಮಿಕಾ ಮುಖ್ಯಭೂಮಿಕೆ ನಿಭಾಯಿಸಿದ್ದ ಡಿಯರ್​ ಕಾಮ್ರೇಡ್​ ಸಿನಿಮಾ ಕನ್ನಡ, ತೆಲುಗು, ತಮಿಳಿನಲ್ಲಿ ತೆರೆಕಂಡಿತ್ತು. ಬಳಿಕ ಜನವರಿಯಲ್ಲಿ ಯೂಟ್ಯೂಬ್​ನಲ್ಲಿ ಹಿಂದಿ ಅವತರಣಿಕೆಯಲ್ಲಿ ಬಿಡುಗಡೆ ಆಗಿತ್ತು. ಇದೀಗ ಇದೇ ಸಿನಿಮಾ ಹೊಸ ದಾಖಲೆ ಮಾಡಿದೆ. ಕೇವಲ ಎರಡೂವರೆ ತಿಂಗಳಲ್ಲಿ 10 ಕೋಟಿ ಜನರಿಂದ ನೋಡಲ್ಪಟ್ಟಿದೆ. 13ಲಕ್ಷ ಲೈಕ್ಸ್​ ಸಹ ಗಿಟ್ಟಿಸಿಕೊಂಡಿದೆ. ದಕ್ಷಿಣ ಭಾರತದವರಿಗಷ್ಟೇ ಇಷ್ಟವಾಗಿದ್ದ ಈ ಜೋಡಿ ಇದೀಗ ಉತ್ತರ ಭಾರತೀಯರಿಂದಲೂ ಮೆಚ್ಚುಗೆ ಗಿಟ್ಟಿಸಿಕೊಂಡಿದೆ. ಅಂದಹಾಗೆ, ಬಾಕ್ಸ್​ ಆಫೀಸ್​ನಲ್ಲಿ ಹೇಳಿಕೊಳ್ಳುವಂಥ ಸಾಧನೆ ಮಾಡದ ಈ ಸಿನಿಮಾ, ಯೂಟ್ಯೂಬ್​ನಲ್ಲಿ ಮಾತ್ರ ಕೋಟಿಗಟ್ಟಲೆ ವೀಕ್ಷಣೆ ಕಂಡಿದೆ. ಭರತ್​ ಕಮ್ಮಾ ಚೊಚ್ಚಲ ನಿರ್ದೇಶನದ ಈ ಸಿನಿಮಾಕ್ಕೆ ಮೈತ್ರಿ ಮೂವಿ ಮೇಕರ್ಸ್​​ ಬಂಡವಾಳ ಹೂಡಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts