

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕಿರುವ ಕ್ರೇಜ್ ಬೇರೆ ಯಾವ ತಂಡಕ್ಕೂ ಇಲ್ಲ. 16 ವರ್ಷಗಳ ಇತಿಹಾಸದಲ್ಲಿ ಒಮ್ಮೆಯೂ ಟ್ರೋಫಿ ಜಯಿಸದಿದ್ದರೂ ಆರ್ಸಿಬಿಗೆ ಇರುವ ಕ್ರೇಜ್ ಮತ್ತು ಖ್ಯಾತಿ ಗುಲಗಂಜಿಯಷ್ಟು ಕಡಿಮೆಯಾಗಿಲ್ಲ. ಕೆಲವು ದಿನಗಳ ಹಿಂದಷ್ಟೇ ಕಾಲಿವುಡ್ ನಟಿ ವರ್ಷಾ ಬೊಲ್ಲಮ್ಮಾ ತಾನು ಆರ್ಸಿಬಿ ಫ್ಯಾನ್ ಎಂದು ಹೇಳಿಕೊಂಡಿದ್ದರು. ಅಲ್ಲದೆ, ಒಂದು ಬಾರಿಯಾದರೂ ಆರ್ಸಿಬಿ ಕಪ್ ಗೆಲ್ಲಬೇಕು ಎಂದರು. ಇದೀಗ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಕೂಡ ತಾನು ಆರ್ಸಿಬಿ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ.
ದಕ್ಷಿಣ ಭಾರತದ ಬಹು ಬೇಡಿಕೆ ನಟಿಯಾಗಿರುವ ರಶ್ಮಿಕಾ ಮಂದಣ್ಣಗೆ ಕ್ರಿಕೆಟ್ ಮೇಲೆಯೂ ಬಹಳ ಆಸಕ್ತಿ ಇದೆ. ಸದ್ಯ ರಶ್ಮಿಕಾ ಅವರು ದಿ ಗರ್ಲ್ಫ್ರೆಂಡ್ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಖ್ಯಾತ ಗಾಯಕಿ ಚಿನ್ಮಯಿ ಅವರ ಪತಿ ರಾಹುಲ್ ರವಿಂದ್ರನ್ ಅವರು ನಿರ್ದೇಶಿಸುತ್ತಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ಆಡುವಾಗ ನಿಮಗೆ ಶೂಟಿಂಗ್ ಇದೆಯೇ ಎಂಬುದನ್ನು ಖಚಿತಪಡಿಸಿ ಎಂದು ನೆಟ್ಟಿಗರೊಬ್ಬರು ರಾಹುಲ್ ರವಿಂದ್ರನ್ರನ್ನು ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರ ನೀಡಿದ ರವೀಂದ್ರನ್, ದಿ ಗರ್ಲ್ಫ್ರೆಂಡ್ ಶೆಡ್ಯೂಲ್ ನಿನ್ನೆಯೇ ಮುಕ್ತಾಯವಾಗಿದೆ. ಇಂದಿಗೆ ರಶ್ಮಿಕಾ ಡೇಟ್ಸ್ ನಮಗೆ ಇಲ್ಲ ಕ್ಷಮಿಸಿ ಎಂದು ಹಾಸ್ಯ ಚಟಾಕಿ ಹಾರಿಸಿದರು.
ರಾಹುಲ್ ಅವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ರಶ್ಮಿಕಾ, ನಾನು ಆರ್‌ಸಿಬಿಯ ನಿಷ್ಠಾವಂತ ಅಭಿಮಾನಿ. ಆದರೆ, ಇಂದಿನ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಗೆಲ್ಲಲಿ ಎಂದು ಆಶಿಸುತ್ತೇನೆ. ಇಂದು ಪಂದ್ಯ ಗೆದ್ದರೆ ಅದು ಅದ್ಭುತ, ಗೆಲ್ಲದೇ ಹೋದರೆ ಮುಂದಿನ ಪಂದ್ಯವನ್ನು ಪಕ್ಕಾ ಗೆಲ್ಲಲಿದ್ದಾರೆ. ಸ್ಕೈಪ್ ಮೂಲಕ ಕನಿಷ್ಟ ಪಕ್ಷ ಒಂದು ಶಾಟ್ ಆದ್ರೂ ಶೂಟ್ ಮಾಡೋಣ. ಆದರೆ, ಆರ್ಸಿಬಿ ಮತ್ತು ಎಸ್ಆರ್ಎಚ್ ಪಂದ್ಯ ಇರುವಾಗ ನಾವು ಏನು ಮಾಡಬೇಕೆಂದು ಆಶ್ಚರ್ಯ ಪಡುತ್ತಿದ್ದೇನೆ ಎನ್ನುವ ಮೂಲಕ ರಶ್ಮಿಕಾ ಇಕ್ಕಟ್ಟಿಗೆ ಸಿಲುಕಿದ್ದಾರೆ. ಆರ್ಸಿಬಿ vs ಎಸ್ಆರ್ಎಚ್ ಪಂದ್ಯದ ವೇಳೆ ಯಾರನ್ನು ಬೆಂಬಲಿಸಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ. ಆದರೆ, ರಶ್ಮಿಕಾ ಯಾರನ್ನೂ ಬೆಂಬಲಿಸುವುದು ಅಂತಾ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಇನ್ನೂ ಪಂದ್ಯದ ವಿಚಾರಕ್ಕೆ ಬಂದರೆ, ಇಂದು ಗುಜರಾತಿನ ಅಹಮದಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಸೋಲನ್ನು ಅನುಭವಿಸಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಎಸ್ಆರ್ಎಚ್ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ 19.1 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 168 ರನ್ ಗಳಿಸುವ ಮೂಲಕ 7 ವಿಕೆಟ್ಗಳ ಜಯ ಸಾಧಿಸಿತು. (ಏಜೆನ್ಸೀಸ್)