More

    ಒಟಿಟಿಗೆ ಬಂದೇಬಿಡ್ತು ಲಿಯೋ..ನ.24ಕ್ಕೆ ಕನ್ನಡದಲ್ಲೂ ವೀಕ್ಷಣೆಗೆ ಲಭ್ಯ

    ಚೆನ್ನೈ: ವಿಜಯ್-ಲೋಕೇಶ್ ಕನಕರಾಜ್ ಕಾಂಬಿನೇಷನ್ ನಲ್ಲಿ ಅ.19 ರಂದು ಲಿಯೋ ಸಿನಿಮಾ ವಿಶ್ವದಾದ್ಯಂತ ತೆರೆಕಂಡಿತ್ತು. ಟಾಲಿವುಡ್ ನಲ್ಲಿ ಸರಾಸರಿ ಟಾಕ್ ಪಡೆದ ಈ ಸಿನಿಮಾ ಕಾಲಿವುಡ್ ನಲ್ಲಿ ಹಿಟ್ ಟಾಕ್ ಪಡೆದುಕೊಂಡಿದೆ. 600 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ವಿಜಯ್ ವೃತ್ತಿಜೀವನದಲ್ಲಿ ಮತ್ತೊಂದು ಹಿಟ್ ಚಿತ್ರವಾಗಿದೆ. ಚಿತ್ರ ಬಿಡುಗಡೆಗೂ ಮುನ್ನ ಹಲವು ವಿವಾದಗಳನ್ನು ಎದುರಿಸಿ ನಿರಂತರವಾಗಿ ಸುದ್ದಿಯಲ್ಲಿತ್ತು. ಅಲ್ಲದೆ, ಕಾಲಿವುಡ್‌ನಲ್ಲಿ ಬೆಳಗಿನ ಪ್ರದರ್ಶನಕ್ಕೆ ಸರ್ಕಾರ ಅವಕಾಶ ನೀಡಲಿಲ್ಲ. ಈ ಎಲ್ಲದರ ನಡುವೆ, ಚಿತ್ರವು ದಾಖಲೆಗಳನ್ನು ಸೃಷ್ಟಿಸಿತು. ಲಿಯೋ ತಯಾರಕರು, ಅಭಿಮಾನಿಗಳ ಸಂಭ್ರಮವನ್ನು ಆಚರಿಸಿದ್ದರು.

    ಇದನ್ನೂ ಓದಿ: 300 ಕೋಟಿ ರೂ.ಬಿಗ್​ಬಡ್ಜೆಟ್​ ಸಿನಿಮಾಗೆ ಪ್ರಭಾಸ್ ಗ್ರೀನ್ ಸಿಗ್ನಲ್…
    ಇತ್ತೀಚೆಗಷ್ಟೇ ಈ ಚಿತ್ರದ ಒಟಿಟಿ ಬಿಡುಗಡೆ ಕುರಿತು ಅಧಿಕೃತ ಪ್ರಕಟಣೆ ಹೊರಬಿದ್ದಿದೆ. ನ.24 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಲಿಯೋ ಸ್ಟ್ರೀಮ್ ಆಗಲಿದೆ ಎಂದು ಘೋಷಿಸಲಾಗಿದೆ. ಚಿತ್ರವು ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿರುತ್ತದೆ. ನೆಟ್‌ಫ್ಲಿಕ್ಸ್ ಈ ಚಿತ್ರದ ಡಿಜಿಟಲ್ ಹಕ್ಕುಗಳನ್ನು ಭಾರಿ ಬೆಲೆಗೆ ಪಡೆದುಕೊಂಡಿದೆಯಂತೆ. ಇದುವರೆಗೂ ಲಿಯೋ ಸಿನಿಮಾ ನೋಡದ ಪ್ರೇಕ್ಷಕರು ಇದೇ ತಿಂಗಳ 24ರಿಂದ ನೆಟ್ ಫ್ಲಿಕ್ಸ್ ನಲ್ಲಿ ನೋಡಬಹುದು.

    ಕಥೆ ಏನು?: ಪಾರ್ಥಿಬನ್ (ವಿಜಯ್) ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಹಿಮಾಚಲ ಪ್ರದೇಶದಲ್ಲಿ ವಾಸಿಸುತ್ತಿರುತ್ತಾನೆ. ಆತ ಅಲ್ಲಿ ಒಂದು ಕಾಫಿ ಶಾಪ್ ನಡೆಸುತ್ತಿರುತ್ತಾರೆ. ಕೆಲವು ಪುಂಡರು ಆ ಅಂಗಡಿಗೆ ಬಂದು ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಾರೆ. ಆಗ ಫೈಟಿಂಗ್​ನಲ್ಲಿ ಅವರನ್ನು ಹೀರೋ ಕೊಲ್ಲುತ್ತಾನೆ. ಮತ್ತೊಂದೆಡೆ ಆಂಟೋನಿ ದಾಸ್ (ಸಂಜಯ್ ದತ್) ಪಾರ್ತಿಬನ್ ಬಳಿ ಬಂದು ತಂದೆ ಎಂದು ಹೇಳುತ್ತಾನೆ. ನೀವು ಪಾರ್ಥಿಬನ್ ಅಲ್ಲ, ಲಿಯೋ ದಾಸ್ ಎನ್ನುತ್ತಾರೆ. ಪಾರ್ತಿಬನ್ ಯಾರು? ಲಿಯೋ ಯಾರು? ಇವೆರಡರ ನಡುವಿನ ಸಂಬಂಧ ಏನು ಎಂಬುದೇ ಸಿನಿಮಾದ ಕಥೆ…

    ಪ್ರಭಾಸ್ ಹೀರೋಯಿನ್ ಜತೆ ಕಟ್ಟಪ್ಪ ಪ್ರೇಮ… ಮತ್ತೊಬ್ಬ ನಾಯಕನ ಎಂಟ್ರಿಯೊಂದಿಗೆ ಸೀನ್ ರಿವರ್ಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts