ತೆಲುಗು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗಿದ್ದ ರಶ್ಮಿಕಾ ಮಂದಣ್ಣ, ಲಾಕ್‌ಡೌನ್‌ಗಿಂಥ ಮುನ್ನ ಕರ್ನಾಟಕಕ್ಕೆ ವಾಪಸ್ಸಾಗಿ, ಮಡಿಕೇರಿಯ ತಮ್ಮ ಮನೆ ಸೇರಿಕೊಂಡರು. ಕಳೆದ 45 ದಿನಗಳಿಂದ ಕೊಡಗಲ್ಲೇ ಇರುವ ರಶ್ಮಿಕಾಗೆ ಹೈದರಾಬಾದ್‌ಗೆ ವಾಪಸ್ಸು ಬಾ ಅಂತ ಒಬ್ಬರು ಕರೆದಿದ್ದಾರೆ. ಅವರು ಯಾರು ಗೊತ್ತಾ? ವಿಜಯ್ ದೇವರಕೊಂಡ.
ಇದನ್ನೂ ಓದಿ: ಸ್ವದೇಶದಲ್ಲೇ ಯುವರತ್ನ ಗಾನಬಜಾನಾ, ಆಗಸ್ಟ್- ಸೆಪ್ಟೆಂಬರ್ನಲ್ಲಿ ಬಿಡುಗಡೆ ಸಾಧ್ಯತೆ
ಹೌದು, ರಶ್ಮಿಕಾಗೆ ಹೈದರಾಬಾದ್‌ಗೆ ವಾಪಸ್ಸು ಬಾ ಅಂತ ವಿಜಯ್ ದೇವರಕೊಂಡ ಹೇಳಿದ್ದಾರೆ. ಇತ್ತೀಚೆಗೆ ವಿಜಯ್ ದೇವರಕೊಂಡ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಂದರ್ಭದಲ್ಲಿ ರಶ್ಮಿಕಾ, ವಿಜಯ್‌ಗೆ ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದರು. ‘ಹ್ಯಾಪಿ ಬರ್ಥ್‌ಡೇ ಮೈ ಕಾಮ್ರೇಡ್’ ಎಂದು ರಶ್ಮಿಕಾ ಶುಭಾಶಯ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ವಿಜಯ್, ‘ಮಂದಣ್ಣ ಹೈದರಾಬಾದ್‌ಗೆ ವಾಪಸ್ಸು ಬಾ. ನಮ್ಮ ಗ್ಯಾಂಗ್ ನಿನ್ನನ್ನ ತುಂಬಾ ಮಿಸ್ ಮಾಡಿಕೊಳ್ಳುತ್ತಿದೆ’ ಎಂದು ಉತ್ತರ ಕೊಟ್ಟಿದ್ದಾರೆ.
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ 2018ರಲ್ಲಿ ಬಿಡುಗಡೆಯಾದ ‘ಗೀತ ಗೋವಿಂದಂ’ ಚಿತ್ರದಲ್ಲಿ ಜತೆಯಾಗಿ ನಟಿಸಿದ್ದರು. ಆ ನಂತರ ಕಳೆದ ವರ್ಷ ಬಿಡುಗಡೆಯಾದ ‘ಡಿಯರ್ ಕಾಮ್ರೇಡ್’ನಲ್ಲೂ ನಾಯಕ-ನಾಯಕಿಯಾಗಿದ್ದರು. ಇಬ್ಬರೂ ನಟಿಸಿರುವುದು ಎರಡೇ ಚಿತ್ರಗಳಲ್ಲಿ ಆದರೂ, ಇಬ್ಬರ ಸ್ನೇಹದ ಬಗ್ಗೆ ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಚರ್ಚೆಯಾಗಿದೆ. ಇಬ್ಬರೂ ಪ್ರೀತಿಸುತ್ತಾರೆ, ಮದುವೆಯಾಗುತ್ತಾರೆ ಎಂಬಂತಹ ಮಾತುಗಳೆಲ್ಲಾ ಕೇಳಿಬಂದಿತ್ತು. ಅದೇ ಕಾರಣಕ್ಕೆ ರಶ್ಮಿಕಾ ಜತೆಗೆ ಇನ್ನೆರೆಡು ವರ್ಷಗಳ ಕಾಲ ಯಾವುದೇ ಸಿನಿಮಾದಲ್ಲೂ ನಟಿಸುವುದಿಲ್ಲ ಎಂದು ವಿಜಯ್ ದೇವರಕೊಂಡ ಕಳೆದ ವರ್ಷವೇ ಹೇಳಿಕೊಂಡಿದ್ದರು.
ಇದನ್ನೂ ಓದಿ: ಶೀಘ್ರದಲ್ಲಿ ತಾಪ್ಸೀ ಪನ್ನು ಕಲ್ಯಾಣ! ಮದುವೆ ಗಂಡು ಯಾರು?
ಇನ್ನು ರಶ್ಮಿಕಾಗೆ ಅಭಿಮಾನಿಯೊಬ್ಬರು, ನೀವ್ಯಾಕೆ ವಿಜಯ್ ದೇವರಕೊಂಡ ಜತೆಗೆ ಡೇಟಿಂಗ್ ಮಾಡಬಾರದು ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದಾಗ, ‘ನಮ್ಮಿಬ್ಬರಿಗೂ ಸಾಕಷ್ಟು ಕೆಲಸಗಳಿವೆ. ಕೆಲಸ ಮಾಡುವ ಮೂಲಕ ಪ್ರೀತಿ, ಗೌರವ ತೋರಿಸಲು ಇಬ್ಬರಿಗೂ ಇಷ್ಟ. ಇನ್ನು ಅವರನ್ನು ನಾನು ಸಾಕಷ್ಟು ಇರಿಟೇಟ್ ಮಾಡಿದ್ದೇನೆ. ಹಾಗಾಗಿ ವಿಜಯ್ ನನ್ನ ಜತೆ ಇನ್ನೆರೆಡು ವರ್ಷಗಳ ಕಾಲ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ’ ಎಂದು ಅಭಿಮಾನಿಯೊಬ್ಬರಿಗೆ ರಶ್ಮಿಕಾ ಉತ್ತರಿಸಿದ್ದರು.
ಲಂಡನ್ನಿಂದ ತಾಯ್ನಾಡಿಗೆ ಮರಳಿದ ಸೌಂದರ್ಯ! 14 ದಿನಗಳ ಕಾಲ ಕ್ವಾರಂಟೈನ್