ಭಿಕ್ಷುಕ ನಾಳೆ ರಾಜನಾಗಬಹುದು … ಹಾಗಂತ ‘ದುನಿಯಾ’ ವಿಜಯ್ ಹೇಳಿದ್ದೇಕೆ?

blank

ನಟ-ನಿರ್ದೇಶಕ ವೆಂಕಟ್ ಅವರಿಗೆ ಶ್ರೀರಂಗಪಟ್ಟಣದಲ್ಲಿ ಕೆಲವರು ಹೊಡೆದಿದ್ದಕ್ಕೆ ವ್ಯಾಪಕವಾಗಿ ಟೀಕೆಗಳು ವ್ಯಕ್ತವಾಗಿವೆ. ವೆಂಕಟ್ ಅವರ ಮೇಲೆ ಕೈ ಮಾಡಿದ ಹುಡುಗರನ್ನು ಹಿರಿಯ ನಟ ಜಗ್ಗೇಶ್ ಪ್ರಶ್ನಿಸಿದ್ದರು. ನಿಮ್ಮ ಮನೆಯಲ್ಲಿ ಒಬ್ಬ ಅಣ್ಣನೋ ತಮ್ಮನೋ ತಂದೆಯೋ ವೆಂಕಟ್ ರೀತಿ ಮಾನಸಿಕರೋಗಿ ಇದ್ದು, ಯಾರಾದರೂ ಅವನ ಮೇಲೆ ಕೈ ಮಾಡಿದರೆ ನಿಮಗೆ ನೋವಾಗುತ್ತದೋ, ಇಲ್ಲವೋ ಎಂದು ಪ್ರಶ್ನಿಸಿದ್ದರು.

ಇದನ್ನೂ ಓದಿ: ಚಿರು ಯಾವತ್ತೂ ಚಿರಂಜೀವಿನೇ!; ಹರಿಪ್ರಿಯಾ ಬರೆದರು ಸುದೀರ್ಘ ಪತ್ರ …

ಈಗ ‘ದುನಿಯಾ’ ವಿಜಯ್ ಸಹ, ವೆಂಕಟ್ ಅವರ ಸಹಾಯಕ್ಕೆ ಬಂದಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ವ್ಯಕ್ತಿಗೆ ದಯವಿಟ್ಟು ಯಾರೂ ಹಲ್ಲೆ ಮಾಡಬೇಡಿ ಎಂದು ಕಳಕಳಿಯಿಂದ ವಿನಂತಿಸಿಕೊಂಡಿದ್ದಾರೆ.

ಈ ಕುರಿತು ಫೇಸ್‌ಬುಕ್‌ನಲ್ಲಿ ಅವರು ಸುದೀರ್ಘವಾಗಿ ಅವರು ಬರೆದುಕೊಂಡಿದ್ದಾರೆ. ವೆಂಕಟ್ ಮೇಲೆ ಹಲ್ಲೆ ಮಾಡಿದವರಿಗೆ, ಹಾಗೆಲ್ಲಾ ಮಾಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ. ‘ಬದುಕು ಯಾರ ಕೈಯಲ್ಲಿಯೂ ಇಲ್ಲ. ಇಂದು ಒಬ್ಬ ರಾಜ ಭಿಕ್ಷೆ ಬೇಡಬಹುದು. ಅದೇ ಭಿಕ್ಷಕ ನಾಲೆ ರಾಜನಾಗಬಹುದು. ನಾವು ಅವರ ಪರಿಸ್ಥಿತಿಯನ್ನು ವ್ಯಂಗ್ಯ ಮಾಡುವುದು ಮಾನವೀಯತೆಯಲ್ಲ. ಹಾಗಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ವ್ಯಕ್ತಿಗೆ ದಯವಿಟ್ಟು ಯಾರೂ ಹಲ್ಲೆ ಮಾಡಬೇಡಿ’ ಎಂದು ಕಳಕಳಿಯಿಂದ ವಿನಂತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಆ ಪಾತ್ರ ನಾನೇ ಮಾಡಬೇಕೆಂದಿದ್ದರಂತೆ ಚಿರು!

ವೆಂಕಟ್‌ಗೆ ಹೊಡೆಯುವವರಷ್ಟೇ ಅಲ್ಲ, ಮಾಧ್ಯಮಗಳಿಗೂ ಅವರು ವಿನಂತಿ ಮಾಡಿದ್ದಾರೆ. ‘ರಾಜ್ಯದ ಜನತೆಯು ವೆಂಕಟ್ ಅವರನ್ನು ಗುರುತಿಸುವುದಕ್ಕಿಂತ ಹೆಚ್ಚು, ಮಾಧ್ಯಮಗಳಲ್ಲಿನ ಚರ್ಚೆಗಳ ಮೂಲಕ ಗುರುತಿಸುತ್ತಿದ್ದಾರೆ. ವೆಂಕಟ್ ಅವರಿಗೆ ಚಿಕಿತ್ಸೆಯ ಅಗತ್ಯ ಇದೆಯೇ ಹೊರತು, ಚರ್ಚೆ, ಮಾತುಕಥೆ, ಹೊಡೆದಾಟಗಳಲ್ಲ. ಆತನ ಸಂಬಂಧಿಕರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಜವಾಬ್ದಾರಿಯಿಂದ ಜಾರಿಕೊಳ್ಳದ ಹಾಗೆ ಕಾಳಜಿ ವಹಿಸಿ’ ಎಂದು ಮನವಿ ಮಾಡಿಕೊಂಡಿದ್ದಾರೆ.

PHOTO| ಇವರ್ಯಾರು?; ರಾಕುಲ್ ಅವತಾರ ಕಂಡು ದಿಗ್ಭ್ರಾಂತರಾದ ಏರ್​ಪೋರ್ಟ್​ ಮಂದಿ!

Share This Article

ಮನೆಯಲ್ಲಿ ಚಪ್ಪಲಿ ಧರಿಸುವುದು ಒಳ್ಳೆಯದೇ? Slippers Inside Home

Slippers Inside Home:ಕೆಲವರು ಬರಿಗಾಲಿನಲ್ಲಿ ನಡೆಯುವ ಬದಲು ಮನೆಯೊಳಗೆ ಸ್ಯಾಂಡಲ್ ಧರಿಸುತ್ತಾರೆ. ದಿನವಿಡೀ ಸ್ಯಾಂಡಲ್ ಮತ್ತು…

ನೀವು ಸಿಹಿ ತಿಂದು ನಂತರ ನೀರು ಕುಡಿಯುತ್ತೀರಾ? ಇದನ್ನು ಮೊದಲು ತಿಳಿದುಕೊಳ್ಳಿ..Sweets and Drinking Water

ಬೆಂಗಳೂರು: (Sweets and Drinking Water) ರಸಗುಲ್ಲಾ, ಗುಲಾಬ್ ಜಾಮೂನ್, ಜಲೇಬಿ, ಸಂದೇಶ್, ಮೈಸೂರು ಪಾಕ್...…

ಬೇಯಿಸಿದ ಆಲೂಗಡ್ಡೆಯನ್ನು ಹೆಚ್ಚು ಕಾಲ ಬಳಸಲು ಫ್ರಿಡ್ಜ್‌ನಲ್ಲಿ ಇಡಬಹುದೇ; ತಜ್ಞರು ಹೇಳುವುದೇನು? | Health Tips

ಬೇಯಿಸಿದ ಆಲೂಗಡ್ಡೆಯನ್ನು ಫ್ರಿಡ್ಜ್‌ನಲ್ಲಿ ಇಡುವುದು ಅನೇಕ ಜನರಿಗೆ ಸಾಮಾನ್ಯ ಅಭ್ಯಾಸವಾಗಿದೆ. ಆದರೆ ಅವುಗಳನ್ನು ಸಂಗ್ರಹಿಸಲು ಇದು…