More

    14 ವರ್ಷಗಳ ನಂತರ ಜತೆಯಾಗಿ ನಟಿಸುತ್ತಿದ್ದಾರೆ ವಿಜಯ್​-ತ್ರಿಷಾ!

    ಚೆನ್ನೈ: ಕಾಲಿವುಡ್​ನ ಅತ್ಯಂತ ಜನಪ್ರಿಯ ಜೋಡಿಗಳಲ್ಲಿ ವಿಜಯ್​ ಮತ್ತು ತ್ರಿಷಾ ಜೋಡಿ ಸಹ ಒಂದು. ಒಂದು ಕಾಲದಲ್ಲಿ ಒಂದಿಷ್ಟು ಚಿತ್ರಗಳಲ್ಲಿ ನಟಿಸಿದ್ದ ಈ ಜೋಡಿ, ಆ ನಂತರ ಕಾರಣಾಂತರಗಳಿಂದ ನಟಿಸಿರಲಿಲ್ಲ. ಈಗ ಬರೋಬ್ಬರಿ 14 ವರ್ಷಗಳ ನಂತರ ವಿಜಯ್​ ಮತ್ತು ತ್ರಿಷಾ ಈಗ ಲೋಕೇಶ್​ ಕನಕರಾಜ್​ ನಿರ್ದೇಶನದ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರಂತೆ.

    ಇದನ್ನೂ ಓದಿ: ತುಳುನಾಡ ದೈವ ‘ಕೊರಗಜ್ಜ’ ಕುರಿತಾದ ಚಿತ್ರದಲ್ಲಿ ಕಬೀರ್ ಬೇಡಿ …

    ಕಳೆದ ವರ್ಷ ಬಿಡುಗಡೆಯಾದ ‘ಮಾಸ್ಟರ್​’ ಚಿತ್ರದ ನಂತರ ವಿಜಯ್​ ಅಭಿನಯದಲ್ಲಿ ಲೋಕೇಶ್​ ಇನ್ನೊಂದು ಚಿತ್ರವನ್ನು ನಿರ್ದೇಶಿಸುತ್ತಾರೆ ಎಂಬ ಸುದ್ದಿ ಇತ್ತು. ಆದರೆ, ವಿಜಯ್​ ಅದಕ್ಕೂ ಮೊದಲು ‘ವಾರಿಸು’ ಎಂಬ ಚಿತ್ರದಲ್ಲಿ ನಟಿಸಿದರು. ಈಗ ಆ ಚಿತ್ರ ಮುಗಿದು ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಮಧ್ಯೆ, ಲೋಕೇಶ್​ ನಿರ್ದೇಶನದಲ್ಲಿ ವಿಜಯ್​ ಅಭಿನಯದ ಚಿತ್ರವು ಸದ್ದಿಲ್ಲದೆ ಸೋಮವಾರ ಚೆನ್ನೈನಲ್ಲಿ ಸೆಟ್ಟೇರಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಇದು ವಿಜಯ್​ ಅಭಿನಯದ 67ನೇ ಚಿತ್ರವಾಗಿರುವುದರಿಂದ, ಚಿತ್ರಕ್ಕೆ ‘ದಳಪತಿ 67’ ಎಂಬ ಹೆಸರಿಡಲಾಗಿದೆ.

    ಈ ಚಿತ್ರಕ್ಕೆ ವಿಜಯ್​ಗೆ ನಾಯಕಿಯಾಗಿ ತ್ರಿಷಾ ಬರಬಹುದು ಎಂಬ ಸುದ್ದಿ ಇತ್ತು. ಆ ಸುದ್ದಿ ನಿಜವಾಗಿದ್ದು, ಚಿತ್ರದ ಮುಹೂರ್ತದಲ್ಲಿ ತ್ರಿಷಾ ಭಾಗವಹಿಸಿದ್ದರು ಎಂದು ಹೇಳಲಾಗುತ್ತಿದೆ. ಈ ಜೋಡಿ ಕೊನೆಯದಾಗಿ ನಟಿಸಿದ ಚಿತ್ರ ‘ಕುರುವಿ’ 2008ರಲ್ಲಿ ಬಿಡುಗಡೆಯಾಗಿತ್ತು. ಅದಕ್ಕೂ ಮುನ್ನ ಅವರಿಬ್ಬರೂ ‘ತಿರುಪಾಚ್ಚಿ’, ‘ಗಿಲ್ಲಿ’ ಮತ್ತು ‘ಆದಿ’ ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದರು. ಈಗ 14 ವರ್ಷಗಳ ನಂತರ ಇಬ್ಬರೂ ಜತೆಯಾಗಿ ಬಣ್ಣ ಹಚ್ಚಿದ್ದಾರೆ.

    ಇದನ್ನೂ ಓದಿ: ‘ಮೇಡ್ ಇನ್ ಬೆಂಗಳೂರು’ ಚಿತ್ರತಂಡದಿಂದ ಶುರುವಾಯ್ತು ಲವ್​ ಲೆಟರ್ ಅಭಿಯಾನ …

    ‘ದಳಪತಿ 67’ ಚಿತ್ರವನ್ನು ಸೆವೆನ್​ ಸ್ಕ್ರೀನ್​ ಸ್ಟುಡಿಯೋಸ್​ ನಿರ್ಮಿಸುತ್ತಿದ್ದು, ಮುಂದಿನ ವರ್ಷದ ಕೊನೆಗೆ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

    ಛತ್ರಪತಿ ಶಿವಾಜಿಯಾಗಿ ಅಕ್ಷಯ್​ ಕುಮಾರ್​ ಹೀಗೆ ಕಾಣ್ತಾರೆ ನೋಡಿ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts