More

    ಛತ್ರಪತಿ ಶಿವಾಜಿಯಾಗಿ ಅಕ್ಷಯ್​ ಕುಮಾರ್​ ಹೀಗೆ ಕಾಣ್ತಾರೆ ನೋಡಿ …

    ಮುಂಬೈ: ‘ವೀರ್​ ದೌದಲೆ ಸಾಥ್​’ ಎಂಬ ಹೊಸ ಮರಾಠಿ ಚಿತ್ರದಲ್ಲಿ ಅಕ್ಷಯ್​ ಕುಮಾರ್​, ಛತ್ರಪತಿ ಶಿವಜಿ ಮಹರಾಜರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ಸುದ್ದಿಯೇನಲ್ಲ. ಈಗ ಆ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಂಬೈನಲ್ಲಿ ಪ್ರಾರಂಭವಾಗಿದ್ದು, ಅಕ್ಷಯ್​ ಕುಮಾರ್​ ಅವರ ಫಸ್ಟ್​ ಲುಕ್​ ಬಿಡುಗಡೆಯಾಗಿದೆ.

    ಇದನ್ನೂ ಓದಿ: ತುಳುನಾಡ ದೈವ ‘ಕೊರಗಜ್ಜ’ ಕುರಿತಾದ ಚಿತ್ರದಲ್ಲಿ ಕಬೀರ್ ಬೇಡಿ …

    ಛತ್ರಪತಿ ಶಿವಾಜಿಯಾಗಿ ಅಕ್ಷಯ್​ ಕುಮಾರ್​ ಹೀಗೆ ಕಾಣ್ತಾರೆ ನೋಡಿ …ಒಂದು ತಿಂಗಳ ಹಿಂದೆ ಮುಂಬೈನಲ್ಲಿ ‘ವೀರ್​ ದೌದಲೆ ಸಾಥ್​’ ಚಿತ್ರದ ಮುಹೂರ್ತವಾಗಿತ್ತು. ಈ ಸಮಾರಂಭದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್​ ಶಿಂಧೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಅಧ್ಯಕ್ಷ ರಾಜ್​ ಥಾಕರೆ ಸಹ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಚಿತ್ರತಂಡಕ್ಕೆ ಶುಭ ಕೋರಿದ್ದರು. ಮಹೇಶ್​ ಮಂಜ್ರೇಕರ್​ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್​ ಕುಮಾರ್​ ಅವರು ಶಿವಾಜಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಲಾಗಿದೆ.

    ಆ ನಂತರ ಈ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ, ಅದರಲ್ಲೂ ಅಕ್ಷಯ್​ ಅವರ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಯಿತು. ಶಿವಾಜಿ ಮಹಾರಾಜರ ಪಾತ್ರದಲ್ಲಿ ಅಕ್ಷಯ್​ ಕುಮಾರ್​ ಹೇಗೆ ಕಾಣಿಸಬಹುದು ಎಂಬ ಚರ್ಚೆ ಇಂಟರ್​ನೆಟ್​ನಲ್ಲಿ ಶುರುವಾಗಿತ್ತು. ಈಗ ಆ ಎಲ್ಲ ಕುತೂಹಲಗಳಿಗೆ ತೆರೆ ಬಿದ್ದಿದೆ. ಮಂಗಳವಾರ ಅಕ್ಷಯ್​ ಕುಮಾರ್​ ಖುದ್ದು ತಮ್ಮ ಇನ್​ಸ್ಟಾಗ್ರಾಂನಲ್ಲಿ ಚಿತ್ರದ ಮೊದಲ ಲುಕ್​ ಹಂಚಿಕೊಂಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಅವರು, ‘ಇಂದು ಮರಾಠಿ ಚಿತ್ರ ‘ವೀರ್​ ದೌದಲೆ ಸಾಥ್​’ನ ಚಿತ್ರೀಕರಣ ಪ್ರಾರಂಭವಾಗಿದೆ. ಶಿವಾಜಿ ಮಹಾರಾಜರ ಪಾತ್ರವನ್ನು ಮಾಡುವುದಕ್ಕೆ ನಾನು ಪುಣ್ಯ ಮಾಡಿದ್ದೆ. ನಿಮ್ಮೆಲ್ಲರ ಆಶೀರ್ವಾದ ಇರಲಿ’ ಎಂದು ಹೇಳಿದ್ದಾರೆ.

    ‘ವೀರ್​ ದೌದಲೆ ಸಾಥ್​’ ಚಿತ್ರವು ಬರೀ ಮರಾಠಿಗಷ್ಟೇ ಸೀಮಿತವಾಗಿರುವುದಿಲ್ಲ. ಹಿಂದಿ, ತಮಿಳು ಮತ್ತು ತೆಲುಗಿಗೂ ಡಬ್​ ಆಗಿ ಬಿಡುಗಡೆ ಆಗಲಿದೆ. ವಸೀಮ್​ ಖುರೇಷಿ ಈ ಚಿತ್ರವನ್ನು ನಿರ್ಮಿಸುತ್ತಿದ್ದು, 2023ರ ದೀಪಾವಳಿಗೆ ಚಿತ್ರ ಬಿಡುಗಡೆಯಾಗಲಿದೆ.

    ಇದನ್ನೂ ಓದಿ: ‘ಮೇಡ್ ಇನ್ ಬೆಂಗಳೂರು’ ಚಿತ್ರತಂಡದಿಂದ ಶುರುವಾಯ್ತು ಲವ್​ ಲೆಟರ್ ಅಭಿಯಾನ …

    ಇದಲ್ಲದೆ ಅಕ್ಷಯ್​ ಕುಮಾರ್​ ‘ಸೆಲ್ಫಿ’, ‘ಓ ಮೈ ಗಾಡ್​ 2’, ‘ಕ್ಯಾಪ್ಸೂಲ್​ ಗಿಲ್​’, ‘ಸೂರರೈ ಪೊಟ್ರು’ ಚಿತ್ರದ ರೀಮೇಕ್​ … ಮುಂತಾದ ಚಿತ್ರಗಳಲ್ಲಿ ಅಕ್ಷಯ್​ ನಟಿಸಿದ್ದು, ಆ ಚಿತ್ರಗಳು ಇನ್ನಷ್ಟೇ ಬಿಡುಡೆಯಾಗಬೇಕಿದೆ.

    ಖತರ್​ನಾಕ್​ ‘ರಾಕ್ಷಸರ’ನ್ನು ಬೇಟೆ ಆಡಲು ಹೊರಟ ಸಾಯಿಕುಮಾರ್​ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts