More

    ಕೇರಳದಲ್ಲಿ ಭೀಕರ ಮಳೆಗೆ ಜನ ತತ್ತರ: ಭಾಗಶಃ ಮುಳುಗಿದ ಬಸ್​ನಿಂದ ಹೊರಬರಲು ಪ್ರಯಾಣಿಕರ ಪರದಾಟ

    ತಿರುವನಂತಪುರ: ದೇವರ ನಾಡು ಕೇರಳದ ವಿವಿಧ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಐದು ಜಿಲ್ಲೆಗಳಿಗೆ ರೆಡ್​ ಅಲರ್ಟ್​ ಮತ್ತು ಏಳು ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​ ಘೋಷಣೆ ಮಾಡಲಾಗಿದೆ. ಜಲಾವೃತಗೊಂಡ ರಸ್ತೆಯಲ್ಲಿ ಬಸ್​ ಒಂದು ಭಾಗಶಃ ಮುಳುಗಡೆಯಾಗಿದ್ದು, ಪ್ರಯಾಣಿಕರು ಬಸ್​ನಿಂದ ಹೊರಗಡೆ ಬರಲು ಒದ್ದಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಇನ್ನೊಂದು ವೈರಲ್​ ವಿಡಿಯೋದಲ್ಲಿ ಕೊಟ್ಟಾಯಂ ಗ್ರಾಮೀಣ ಭಾಗದಲ್ಲಿ ಸುರಿದ ಭಾರೀ ಮಳೆಗೆ ಇಡೀ ಏರಿಯಾ ನದಿಯಂತಾಗಿದ್ದು, ಕೊಚ್ಚಿ ಹೋಗುತ್ತಿರುವ ಕಾರನ್ನು ತಡೆಯುವ ಪ್ರಯತ್ನವನ್ನು ಜನರು ಮಾಡುತ್ತಿರುವುದನ್ನು ಕಾಣಬಹುದು. ಅಂದಹಾಗೆ ರೆಡ್​ ಅಲರ್ಟ್​ ಘೋಷಣೆ ಆಗಿರುವ 5 ಜಿಲ್ಲೆಗಳಲ್ಲಿ ಕೊಟ್ಟಾಯಂ ಕೂಡ ಒಂದು. ಕೇರಳದಲ್ಲಿ ಈ ರೀತಿಯ ಘಟನೆ ಭಾರೀ ಮಳೆಯಿಂದಾಗಿ ಸಾಮಾನ್ಯವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

    ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಹಾಗೂ ತ್ರಿಶೂರ್​ ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಇದೆ. ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಪಲಕ್ಕಾಡ್​, ಮಲಪ್ಪುರಂ, ಕೋಯಿಕ್ಕೋಡ್​ ಮತ್ತು ವಯನಾಡಿನಲ್ಲಿ ಆರೆಂಜ್​ ಘೋಷಣೆ ಆಗಿದೆ. ಭಾರೀ ಮಳೆ ಹಿನ್ನೆಲೆಯಲ್ಲಿ ಕೇರಳ ಮುಖ್ಯಮಂತ್ರಿ ಕಚೇರಿ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ನದಿ ಪಾತ್ರದ ಜನರು ಬಹಳ ಎಚ್ಚರಿಕೆಯಿಂದಿರುವಂತೆ ಜನರಲ್ಲಿ ಕೇರಳ ಸರ್ಕಾರ ಮನವಿ ಮಾಡಿದೆ.

    ಕೇರಳ ಕರವಾಳಿಯ ಆಗ್ನೇಯ ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಭಾರೀ ಮಳೆಯಾಗುತ್ತಿದೆ. ಅಕ್ಟೋಬರ್​ 17, 18 ಮತ್ತು 19ರವರೆಗೆ ಕೇರಳದಲ್ಲಿ ಭೀಕರ ಮಳೆ ಆಗಲಿದೆ. ಈ ಸಮಯದಲ್ಲಿ ಚಂಡಮಾರುತ ಗಂಟೆಗೆ 60 ಕಿ.ಮೀ. ವೇಗದಲ್ಲಿ ಕೇರಳ ಕರಾವಳಿ ಪ್ರದೇಶದಲ್ಲಿ ಬೀಸಲಿದ್ದು, ಯಾರೊಬ್ಬರು ಸಮುದ್ರಕ್ಕೆ ಇಳಿಯದಂತೆ ಸರ್ಕಾರ ಮನವಿ ಮಾಡಿದೆ. (ಏಜೆನ್ಸೀಸ್​)

    ಭಾರತ ಕ್ರಿಕೆಟ್​ ತಂಡದ ಹೆಡ್​ ಕೋಚ್​ ಆಗಲಿದ್ದಾರೆ, ರಾಹುಲ್​ ದ್ರಾವಿಡ್​

    ಬಡಿಗೆ ಹಿಡಿದು ಬಡಿದಾಡಿಕೊಂಡ ಭಕ್ತರು! ಆಂಧ್ರ ಗಡಿಯ ಜಾತ್ರೆಯಲ್ಲಿ 80 ಜನರಿಗೆ ಗಾಯ

    ತಲೈವಿ ದತ್ತು ಮಗ ಸುಧಾಕರನ್​ಗೆ​ ಜೈಲಿಂದ ಬಿಡುಗಡೆ ಭಾಗ್ಯ

    ಹೆರಿಗೆ ಆದಾಗ ಹೆಣ್ಣು ಮಗು, ಕೊನೆಗೆ ಕೊಟ್ಟದ್ದು ಗಂಡು ಮಗು! ಆಸ್ಪತ್ರೆ ಎಡವಟ್ಟಿಗೆ ಪಾಲಕರು ಆಕ್ರೋಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts