More

    ಮಳೆ ನೀರು ಕೊಯ್ಲಿನಿಂದ ಜಲ ಸಂಕಷ್ಟ ದೂರ

    ಚಿಕ್ಕಮಗಳೂರು: ಮಳೆಗಾಲದಲ್ಲಿ ಮನೆ ಮೇಲ್ಚಾವಣಿ ಮೇಲೆ ಬಿದ್ದ ನೀರು ಚರಂಡಿಗಳ ಮೂಲಕ ವ್ಯರ್ಥವಾಗಿ ಹರಿದು ಹೋಗುತ್ತಿದ್ದು, ಅದನ್ನು ಮಳೆ ನೀರು ಕೊಯ್ಲು ತಂತ್ರಜ್ಞಾನದ ಮೂಲಕ ಮನೆ ತೊಟ್ಟಿಗಳಲ್ಲಿ ಸಂಗ್ರಹಿಸಿ ಅದನ್ನೇ ಬಳಕೆ ಮಾಡುವುದರಿಂದ ನೀರಿನ ಸಮಸ್ಯೆ ತಪ್ಪಿಸಬಹುದು ಎಂದು ರೈನಿ ಸಂಸ್ಥೆ ನಿರ್ದೇಶಕ ಮೈಕಲ್ ಸದಾನಂದ ಬ್ಯಾಫ್ಟಿಸ್ಟ್ ತಿಳಿಸಿದರು.
    ನಗರದ ಹೊರವಲಯದ ಹಾದಿಹಳ್ಳಿ ಗ್ರಾಮದ ಸಂಸ್ಥೆ ಆವರಣದಲ್ಲಿ ಮಳೆ ನೀರು ಕೊಯ್ಲಿನ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದ ಅವರು, ವೈಜ್ಞಾನಿಕವಾಗಿ ಮಳೆ ನೀರು ಕೊಯ್ಲು ಮಾಡುವುದರಿಂದ ಅಂತರ್ಜಲದ ಪ್ರಮಾಣ ಹೆಚ್ಚಿಸಲು ಸಾಧ್ಯವಿದೆ ಎಂದರು.
    ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾದಾಕ್ಷಣ ಎಲ್ಲರೂ ಬೇರೊಂದು ಕೊಳವೆಬಾವಿ ಕೊರೆಯಿಸಲು ಮುಂದಾಗುತ್ತಾರೆ. ಆದರೆ ಅದೇ ಕೊಳವೆ ಬಾವಿಗಳಿಗೆ ರಿಚಾರ್ಜ್ ಮಾಡಲು ಯಾರು ಕ್ರಮ ಕೈಗೊಳ್ಳುತ್ತಿಲ್ಲ. ಕೊಳವೆ ಬಾವಿಗಳಲ್ಲಿ ನೀರು ಕಡಿಮೆಯಾಗಿದೆ ಎಂದರೆ ಅಲ್ಲಿ ಅಂತರ್ಜಲ ಬತ್ತಿದೆ ಎಂದರ್ಥ. ಹೀಗಿರುವಾಗ ನಾವು ಹೊಸ ಕೊಳವೆ ಬಾವಿ ಪೂರೈಸಿದರೆ ನೀರು ಸಿಗುವುದಿಲ್ಲ. ಬದಲಿಗೆ ಇರುವ ಕೊಳವೆ ಬಾವಿಗಳಿಗೆ ವೈಜ್ಞಾನಿಕವಾಗಿ ಜಲಮರುಪೂರಣ ಮಾಡುವುದರಿಂದ ನಮಗೆ ಸಾಕಾಗುವಷ್ಟು ನೀರು ಪಡೆಯಬಹುದು ಎಂದರು.
    ಅಂತರ್ಜಲ ವೃದ್ಧಿಗಾಗಿ ಇಂಗು ಗುಂಡಿಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ ಇಂಗು ಗುಂಡಿಗಳಿಂದ ಶೇ. 25ರಷ್ಟು ಮಾತ್ರ ಅಂತರ್ಜಲ ವೃದ್ಧಿಯಾಗಲಿದೆ. ಅದೇ ಈ ವೈರ್ ಇಂಜೆಕ್ಷನ್ ವೆಲ್ ತಂತ್ರಜ್ಞಾನ ಅಳವಡಿಸಿಕೊಂಡಲ್ಲಿ ಶೇ.75 ರಷ್ಟು ಅಂತರ್ಜಲದ ಪ್ರಮಾಣ ಹೆಚ್ಚಿಸಲು ಸಾಧ್ಯವಾಗುತ್ತದೆ. ಈ ತಂತ್ರಜ್ಞಾನವನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳುವ ಮೂಲಕ ಅಂತರ್ಜಲ ಹೆಚ್ಚಿಸಬಹುದು ಎಂದು ಮಾಹಿತಿ ನೀಡಿದರು.
    ಮಳೆ ನೀರು ಕೊಯ್ಲಿನ ಮೂಲಕ ಅಂತರ್ಜಲದ ಪ್ರಮಾಣ ಹೆಚ್ಚಿಸುವ ಸಂಬಂಧ ಚಿಕ್ಕಮಗಳೂರಿನ ಹಾದಿಹಳ್ಳಿ ಗ್ರಾಮದಲ್ಲಿ ವಿಶ್ವದ ಮೊದಲ ಮಳೆ ನೀರು ಕೊಯ್ಲು ಸಂಶೋಧನಾ ಹಾಗೂ ನಾವಿನ್ಯತ ಕೇಂದ್ರ ಆರಂಭಿಸಲಾಗಿದೆ. ಇಲ್ಲಿ ಅಂತರ್ಜಲ ವೃದ್ಧಿಗೆ ಸಂಬಂಧಪಟ್ಟಂತೆ ಜನರಿಗೆ ಅರಿವು ಮೂಡಿಸಲಾಗುತ್ತಿದೆ. ಜತೆಗೆ ಅವರಿಗೆ ಬೇಕಾದ ಮಳೆ ನೀರು ಕೊಯ್ಲು ಸಾಧನಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಹೇಳಿದರು.
    ರೈನಿ ಸಂಸ್ಥೆ ನಿರ್ದೇಶಕರಾದ ವಿಜಯರಾಜ್ ಶಿಶೋಧಯ, ಮನೋಜ್ ಸ್ಯಾಮ್ಯುವೆಲ್ ಬ್ಯಾಫ್ಟಿಸ್ಟ್, ವರುಣ್ ರೊನಾಲ್ಡೋ ಬ್ಯಾಫ್ಟಿಸ್ಟ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts