More

    VIDEO | “ವೆಲ್​ಕಮ್​ ಟು ದ ಕ್ಲಬ್, ಅಮೆರಿಕ…!”

    ನವದೆಹಲಿ: ಮಹಿಳೆಯರಿಗೆ ಸಮಾನ ಸ್ಥಾನ ನೀಡುವ ಬಗ್ಗೆ ಮಾತನಾಡುವಾಗ ಪಾಶ್ಚಾತ್ಯ ದೇಶಗಳ ಮತ್ತು ಅಮೆರಿಕದ ಸಾಮಾಜಿಕ ಪರಿಸ್ಥಿತಿಯನ್ನು ಉದಾಹರಿಸುವವರು ಹಲವರಿದ್ದಾರೆ. ಆದರೆ, ಮಹಿಳೆಯರು ಉನ್ನತ ಸ್ಥಾನಗಳನ್ನು ಗಳಿಸಿರುವುದು ಭಾರತಕ್ಕೆ ಹೊಸದೇನಲ್ಲ… ನಮ್ಮಿಂದ ಅವರು ಕಲಿಯಬೇಕು ಎಂಬ ಮಾರ್ಮಿಕ ಮಾತನ್ನು ನಟಿ ಪ್ರಿಯಾಂಕಾ ಚೋಪ್ರಾ ಆಡಿದ್ದಾರೆ.

    ಸ್ಟೀಫನ್ ಕಾಲ್ಬರ್ಟ್​ರ ಲೇಟ್​ ನೈಟ್​ ಶೋನಲ್ಲಿ ಇತ್ತೀಚೆಗೆ ಬಾಲಿವುಡ್-ಹಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ‘ದಿ ವೈಟ್ ಟೈಗರ್’ ಚಿತ್ರದ ಪ್ರಮೋಷನ್​ಗಾಗಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕಮಲಾ ಹ್ಯಾರಿಸ್​ ಅಮೆರಿಕಾದ ಉಪಾಧ್ಯಕ್ಷೆಯಾಗಿದ್ದರ ಬಗ್ಗೆ ಸ್ಟೀಫನ್ ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರಿಯಾಂಕಾ ಕೊಟ್ಟ ಚಾಕಚಕ್ಯತೆಯ ಉತ್ತರ ಭಾರತೀಯರಿಗೆ ಹೆಮ್ಮೆ ತರುವಂಥದ್ದಾಗಿದೆ.

    “ಸೌತ್ ಏಷಿಯನ್ ಮಹಿಳೆಯಾಗಿ ನಿಮಗೆ ಕಮಲಾ ಹ್ಯಾರಿಸ್​ ಅವರು ಮೊದಲ ಮಹಿಳೆ, ಮೊದಲ ಸೌತ್ ಏಷಿಯನ್ ಮತ್ತು ಮೊದಲ ಆಫ್ರಿಕನ್ ಅಮೇರಿಕನ್ ಉಪಾಧ್ಯಕ್ಷೆಯಾಗುವುದನ್ನು ನೋಡಲು ಹೇಗನ್ನಿಸಿತು” ಎಂದು ಸ್ಟೀಫನ್ ಕೇಳಿದರು. ಅದಕ್ಕೆ ಪ್ರಿಯಾಂಕಾ, “ಒಂದೆರಡು ವಿಷಯಗಳನ್ನು ಹೇಳುತ್ತೇನೆ…. ನನ್ನ ಹಲವಾರು ಬಂಧುಮಿತ್ರರಿಗೆ ಇದು ಒಂದು ಭಾವನಾತ್ಮಕ ಕ್ಷಣವಾಗಿತ್ತು. ಆದರೆ ಹಲವಾರು ಮಹಿಳೆಯರನ್ನು ಆಡಳಿತದಲ್ಲಿ, ಅಧ್ಯಕ್ಷರಾಗಿ ಆಗಲಿ ಪ್ರಧಾನಮಂತ್ರಿಯಾಗಿ ಆಗಲಿ, ನೋಡಿರುವ ಭಾರತದಿಂದ ಬರುವ ನನಗೆ ಏನನ್ನಿಸುತ್ತದೆ ಎಂದರೆ…. ವೆಲ್ಕಮ್​ ಟು ದ ಕ್ಲಬ್,​ ಅಮೇರಿಕಾಸ್ ! (ಬನ್ನಿ ನಮ್ಮೊಡನೆ ಸೇರಿಕೊಳ್ಳಿ ಎನ್ನುತ್ತೇನೆ)” ಎಂದರು. ಇಂಥ ಸಾಧನೆಗೆ ಇದು “ಹೈ ಟೈಮ್” ಆಗಿತ್ತು ಎಂದು ಮುಂದುವರಿಸಿದ ಪ್ರಿಯಾಂಕಾ, “ಈ ರೀತಿ ಹಲವಾರು ನಡೆಯಬೇಕು. ಆಡಳಿತ ಅಂದರೆ ಹೀಗೇ ಇರಬೇಕು… ಸಮಾಜದಲ್ಲಿರುವ ವೈವಿಧ್ಯತೆಗೆ ಕನ್ನಡಿ ಹಿಡಿದ ಹಾಗೆ ನಾಯಕತ್ವ ಇರಬೇಕು” ಎಂದರು.

    ಈ ಸಂದರ್ಶನದ ವೀಡಿಯೋ ತುಣುಕನ್ನು ನಟಿ ತಾರಾ ಶರ್ಮ ಪ್ರಶಂಸೆಯೊಂದಿಗೆ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಇದನ್ನು ವೀಕ್ಷಿಸಿದ ನೆಟ್ಟಿಗರು ಪ್ರಿಯಾಂಕಾ ಉತ್ತರದ ಬಗ್ಗೆ ಮೆಚ್ಚುಗೆಯ ಮಳೆ ಸುರಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಈಗಿನ ಸರಕಾರದವರೆಗೆ ಭಾರತದಲ್ಲಿ ರಾಜಕೀಯದ ಮುಂಚೂಣಿಯಲ್ಲಿರುವ ಮಹಿಳೆಯರಿಗೇನು ಕೊರತೆಯಿಲ್ಲ. ಆದರೆ ಅಮೆರಿಕ ಈಗ ತನ್ನ ಮೊದಲನೇ ಮಹಿಳಾ ಉಪಾಧ್ಯಕ್ಷೆಯನ್ನು ಪಡೆಯುವ ಸಂಭ್ರಮ ಆಚರಿಸುತ್ತಿದೆ ಎಂಬುದು ಸರಿಯಷ್ಟೆ! (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts