More

    VIDEO| ನೀರಿನ ಮೇಲೆ ಈಜುವ ಸಮುದ್ರ ಹಾವು ನೋಡಿ!

    ಸಿಡ್ನಿ: ವಿಷಕಾರಿಯಾದ ಸಮುದ್ರ ಹಾವು(ಸೀ ಸ್ನೇಕ್​) ತಮ್ಮೆಡೆಗೆ ಹರಿದುಕೊಂಡು ಬಂದು ಪ್ಯಾಡಲ್​ ಬೋಟಿನ ಮೇಲೆ ತಲೆ ಇಡುವ ರೋಮಾಂಚಕ ದೃಶ್ಯವೊಂದನ್ನು ಯೂಟ್ಯೂಬರ್​ ಬ್ರಾಡೀ ಮಾಸ್​​ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.  ಎರಡು ದಿನಗಳ ಹಿಂದೆ ಅವರು ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ ಈ ವಿಡಿಯೋಗೆ ಒಂದು ಮಿಲಿಯನ್​ಗೂ ಹೆಚ್ಚು ವ್ಯೂಗಳು ಲಭಿಸಿವೆ.

    ಆಸ್ಟ್ರೇಲಿಯಾದ ಯೂಟ್ಯೂಬರ್​ ಆದ ಮಾಸ್​, ಸಾಮಾನ್ಯವಾಗಿ ಮನುಷ್ಯರಿಂದ ದೂರವಿರುವ ಸಮುದ್ರ ಹಾವು, ನೀರಿನ ಮೇಲೆ ಈಜುತ್ತಾ ತಮ್ಮ ಬೋಟಿನ ಕಡೆಗೆ ಬರುವುದನ್ನು ಚಿತ್ರೀಕರಿಸಿದ್ದಾರೆ. ವರ್ಷದ ಈ ಋತುವಿನಲ್ಲಿ ಅವು ಸಂಗಾತಿಯನ್ನು ಅರಸುತ್ತಿರುವುದರಿಂದ ದಾಳಿ ಮಾಡುವ ಸ್ವಭಾವ ಹೊಂದಿರುತ್ತವೆ. ಆದ್ದರಿಂದ ಕಚ್ಚುವ ಭಯವಿರುತ್ತದೆ ಎಂದು ವಿವರಿಸಿದ್ದಾರೆ.

     

    View this post on Instagram

     

    A post shared by YBS (@brodiemoss)

    ಬ್ರಾಡಿ ಮಾಸ್​ ಅವರ ಈ ಪೋಸ್ಟ್​ಗೆ ಈವರೆಗೆ 80 ಸಾವಿರಕ್ಕೂ ಹೆಚ್ಚು ಲೈಕ್​ಗಳು ಲಭಿಸಿವೆ. ಅವರ ಈ ವಿಡಿಯೋವನ್ನು ನೆಟ್ಟಿಗರು ಇತರ ಸಾಮಾಜಿಕ ಮಾಧ್ಯಮಗಳಲ್ಲೂ ಹಂಚಿಕೊಳ್ಳುತ್ತಿದ್ದಾರೆ. ಈ ವಿಡಿಯೋವನ್ನು ಮಾಲ್ಸ್​ ಎಂಬುವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಅದಕ್ಕೆ ಅದಾಗಲೇ 5 ಮಿಲಿಯನ್ ವ್ಯೂಗಳು ಲಭಿಸಿವೆ. ಹಾವು ಈಜುವುದನ್ನು ನೋಡಿಯೇ ಇರಲಿಲ್ಲ ಎಂದು ಹಲವರು ಹುಬ್ಬೇರಿಸಿದ್ದರೆ, ಈ ರೀತಿ ಹಾವಿನ ವಿಡಿಯೋ ಮಾಡುವುದು ಸಾವಿನೊಡನೆ ಸರಸವಾಡಿದಂತೆ ಎಂದು ಕೆಲವರು ಎಚ್ಚರಿಸಿದ್ದಾರೆ. (ಏಜೆನ್ಸೀಸ್)

    ಕಾಜಿರಂಗ ಉದ್ಯಾನ: ಪ್ರವಾಹಕ್ಕೆ ಸಿಲುಕಿದ್ದ ಪುಟ್ಟ ಘೇಂಡಾಮೃಗದ ರಕ್ಷಣೆ

    ಮಹಿಳೆಯರೇ, ಸ್ತನ ಕ್ಯಾನ್ಸರ್​ ಬಗ್ಗೆ ಎಚ್ಚರ ವಹಿಸಿ! ರೋಗಲಕ್ಷಣ, ತಪಾಸಣೆ, ಚಿಕಿತ್ಸೆ… ವಿವರಗಳು ಇಲ್ಲಿವೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts