More

    ನೂರಾರು ಮನೆಗಳನ್ನು ಹೊತ್ತೊಯ್ದ ಸುಂಟರಗಾಳಿ: ಭೀಕರ ವಿಡಿಯೋ ವೈರಲ್​

    ನ್ಯೂಯಾರ್ಕ್​: ನಾವು ಸಾಮಾನ್ಯ ಸುಂಟರಗಾಳಿಯನ್ನು ನೋಡಿದ್ದೇವೆ. ಅದರೆ ಅಮೆರಿಕದಲ್ಲಿ ಕನ್ಸಾಸ್​ ನಗರದಲ್ಲಿ ಸೃಷ್ಟಿಯಾದ ಸುಂಟರಗಾಳಿ ಹಿಂದೆಂದೂ ಕಂಡಿಲ್ಲ. ಇದರ ಭೀಕರತೆಗೆ ನಗರವೊಂದು ಬಹುತೇಕ ನಾಶವಾಗಿದೆ. ನೂರಾರು ಮನೆಗಳನ್ನು ಹೊತ್ತೊಯ್ದು ಛಿದ್ರ ಛಿದ್ರಗೊಳಿಸುವಷ್ಟು ಪ್ರಬಲ ಸುಂಟರಗಾಳಿ ಇದಾಗಿದ್ದು, ಇದು ಊಹಿಸಿಕೊಳ್ಳಲೂ ಕಷ್ಟವಾಗಬಹುದು. ಆದರೂ ನಿಜ.

    ಡ್ರೋನ್​ ಮೂಲಕ ಸೆರೆ ಹಿಡಿಯಲಾದ ಸುಂಟರಗಾಳಿ ರೌದ್ರಾವತಾರಕ್ಕೆ ಮನೆಗಳೇ ಧ್ವಂಸಗೊಂಡಿರುವುದಲ್ಲದೇ ತನ್ನ ಜಾಗವನ್ನೇ ಬದಲಿಸಿವೆ. ಹಲವು ಮನೆಗಳು ಕಿಲೋ ಮೀಟರ್ ಗಟ್ಟಲೆ ದೂರದಲ್ಲಿ ಬಿದ್ದಿವೆ. ಘಟನೆಯಲ್ಲಿ ನೂರಾರು ಜನರು ಗಾಯಗೊಂಡಿದ್ದಾರೆ.

    ಸಣ್ಣ ಪ್ರಮಾಣದಲ್ಲಿ ಸೃಷ್ಟಿಯಾದ ಈ ಸುಂಟರಗಾಳಿ ನೋಡ ನೋಡುತ್ತಿದ್ದಂತೆ ವೇಗ ಪಡೆದುಕೊಂಡು ಮನೆಗಳನ್ನೇ ಹೊತ್ತೊಯ್ಯುತ್ತಿರುವ ವಿಡಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​ ಆಗುತ್ತಿದ್ದು, ಈವರೆಗೆ 2.8 ಮಿಲಿಯನ್​ ಜನರು ವೀಕ್ಷಿಸಿದ್ದಾರೆ.

    ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿ ನೋಡಿಕೊಂಡಿದ್ದೇಕೆ: ಸಚಿವ ಅಶ್ವಥ್​ ನಾರಾಯಣಗೆ ಡಿ.ಕೆ. ಶಿವಕುಮಾರ್ ಹೀಗಂದಿದ್ದು ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts