More

    ಡ್ರೋನ್ ಬಳಸಿ ಉತ್ಪಾದನಾ ವೆಚ್ಚ ತಗ್ಗಿಸಿ -ಬೇಸಾಯ ತಜ್ಞ ಮಲ್ಲಿಕಾರ್ಜುನ್ ಸಲಹೆ – ಡ್ರೋನ್ ಪ್ರಾತ್ಯಕ್ಷಿಕೆ ಕಾರ್ಯಕ್ರಮ

    ದಾವಣಗೆರೆ: ಡ್ರೋನ್ ಬಳಕೆಯಿಂದ ಕೃಷಿ ಉತ್ಪಾದನಾ ವೆಚ್ಚ ತಗ್ಗಲಿದೆ. ರೈತರು ಇದರ ಲಾಭ ಪಡೆಯಬೇಕು ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ತಜ್ಞ ಬಿ.ಒ.ಮಲ್ಲಿಕಾರ್ಜುನ್ ಸಲಹೆ ನೀಡಿದರು.
    ಚನ್ನಗಿರಿ ತಾಲೂಕು ಭೀಮನೇರಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡ್ರೋನ್ ಮೂಲಕ ಕಡಲೆ ಬೆಳೆಗೆ ಔಷಧ ಸಿಂಪಡಣೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    10-15 ನಿಮಿಷಗಳಲ್ಲಿ ಒಂದು ಎಕರೆ ಪ್ರದೇಶವನ್ನು ಡ್ರೋನ್ ಮೂಲಕ ಸಿಂಪಡಣೆ ಮಾಡಲಾಗುವುದು. ಇದರಿಂದ ಸಮಯ ಮತ್ತು ನೀರಿನ ಉಳಿತಾಯದ ಜತೆಗೆ ಕೂಲಿಯಾಳುಗಳ ಸಮಸ್ಯೆಗೆ ಪರಿಹಾರವಾಗಲಿದೆ ಎಂದು ತಿಳಿಸಿದರು.
    ವಿಸ್ತರಣಾ ನಿರ್ದೇಶಕ ಡಾ.ಗುರುಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೃಷಿಯಲ್ಲಿ ಡ್ರೋನ್ ಬಳಕೆ ಬಗ್ಗೆ ರೈತರು ಮಾಹಿತಿ ಪಡೆದುಕೊಳ್ಳಬೇಕು ಎಂದರು.
    ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಟಿ.ಎನ್.ದೇವರಾಜ್ ಮಾತನಾಡಿ, ರೈತರು ಡ್ರೋನ್ ಬಳಕೆ ಹಾಗೂ ಹೊಸ ತಂತ್ರಜ್ಞಾನದ ಬಗ್ಗೆ ಅರಿವು ಹೊಂದಬೇಕು ಎಂದು ಹೇಳಿದರು.
    ಉಡುಪಿ ಕೃಷಿ ವಿಜ್ಞಾನ ಕೇಂದ್ರದ ಡಾ.ನವೀನ್ ಮಾತನಾಡಿ, ಕಡಲೆ ಬೆಳೆಗೆ ಬೇವಿನ ಕೀಟನಾಶಕ ಸಿಂಪಡಣೆ ಮಾಡುವುದು ಸೂಕ್ತ. ಇದಕ್ಕೂ ಮೊದಲು ತಜ್ಞರನ್ನು ವಿಚಾರಿಸಬೇಕು ಎಂದು ತಿಳಿಸಿದರು.
    ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಹಾಗೂ ಕತ್ತಲಗೆರೆ ಕೃಷಿ ಸಂಶೋಧನಾ ಕೇಂದ್ರ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಉಡುಪಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಧನಂಜಯ್, ಡಾ. ಬಿರಾದಾರ್, ಗ್ರಾಪಂ ಅಧ್ಯಕ್ಷ ವಿಕ್ರಮ್ ಪಾಟೀಲ್ ರಾಮತೀರ್ಥ, ರೈತರ ಉತ್ಪಾದಕ ಅಧ್ಯಕ್ಷ ಬಿ.ಸಿ.ರುದ್ರೇಶ, ಕೃಷಿಕರಾದ ಪರಮೇಶ್ವರಪ್ಪ, ವಿಶ್ವನಾಥ, ಸಂಜೀವ ರೆಡ್ಡಿ, ಪ್ರವೀಣ್, ಮಂಜುನಾಥ, ರಘು, ಕ್ಷೇತ್ರ ವಿಕ್ಷಕ ಹಾಲೇಶ್ ಇದ್ದರು
    —-

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts