More

    VIDEO | ಭಾರತಕ್ಕೆ ಹಾರಿದ ರಫೇಲ್ ಫೈಟರ್ ಜೆಟ್​ಗಳು

    ಪ್ಯಾರಿಸ್/ನವದೆಹಲಿ : ಭಾರತೀಯ ವಾಯು ಪಡೆಯನ್ನು ಸೇರಲು ಮತ್ತೆ ಮೂರು ರಫೇಲ್ ಫೈಟರ್ ಜೆಟ್ ವಿಮಾನಗಳು ಇಂದು ಫ್ಯಾನ್ಸ್​ನಿಂದ ಹೊರಟು ಭಾರತ ತಲುಪುತ್ತಿವೆ. ಬಾರ್ಡಿಯಕ್ಸ್​ನ ಮೆರಿಗ್ನಾಕ್ ಏರ್​ಬೇಸ್​ನಲ್ಲಿ ಇಂದು ಬೆಳಿಗ್ಗೆ 7 ಗಂಟೆಗೆ ಹೊರಟಿರುವ ವಿಮಾನಗಳು ಸಂಜೆ 7 ಗಂಟೆಯ ವೇಳೆಗೆ ಗುಜರಾತಿನಲ್ಲಿ ಬಂದಿಳಿಯಲಿವೆ.

    ಇಂದು ಬೆಳಿಗ್ಗೆ ಫ್ರಾನ್ಸ್​​ನಿಂದ ಹೊರಟ ಸಮಯದ ವಿಡಿಯೋ ತುಣುಕನ್ನು ಪ್ಯಾರಿಸ್​ನ ಭಾರತದ ಎಂಬೆಸಿ ಟ್ವಿಟರ್​ನಲ್ಲಿ ಶೇರ್ ಮಾಡಿದೆ.

    ಯುಎಇ ಏರ್​ಫೋರ್ಸ್​ನ ಏರ್​ಬಸ್​ 330 ಗಲ್ಫ್​ ಆಫ್ ಒಮನ್ ಬಳಿ ಈ ಜೆಟ್​ಗಳಿಗೆ ಮಿಡ್​ಏರ್ ರಿಫ್ಯುಯಲ್ಲಿಂಗ್ ಒದಗಿಸಿವೆ. ಈ ರಫೇಲ್ ಫೈಟರ್ ಜೆಟ್​ಗಳು ಹರಿಯಾಣದ ಅಂಬಾಲಾದಲ್ಲಿರುವ ಗೋಲ್ಡನ್ ಆರ್ರೋಸ್ ಸ್ಕ್ವಾಡ್ರನ್​​ನ ಭಾಗವಾಗಲಿವೆ. ಇದರಿಂದಾಗಿ ಸ್ಕ್ವಾಡ್ರನ್​ ಒಟ್ಟು ಸಾಮರ್ಥ್ಯವು 14 ಜೆಟ್​ಗಳಿಗೆ ಏರಲಿದೆ. ಈ ಜೆಟ್​ಗಳ ಉತ್ಪಾದಕರಾದ ಡಸಾಲ್ಟ್ ಏವಿಯೇಷನ್ ಕಂಪೆನಿ, ಮುಂದಿನ ತಿಂಗಳಲ್ಲಿ ಇನ್ನೂ ಒಂಭತ್ತು ಜೆಟ್​​ಗಳನ್ನು ಭಾರತಕ್ಕೆ ರವಾನಿಸಲಿದೆ. (ಏಜೆನ್ಸೀಸ್)

    ನಾಳೆಯಿಂದ 45 ತುಂಬಿದ ಎಲ್ಲರಿಗೂ ಲಸಿಕೆ : ಸಮರ್ಪಕ ಕಾರ್ಯಾಚರಣೆಗೆ ಕೇಂದ್ರದ ಸೂಚನೆ

    ಲಾಕ್​ಡೌನ್​ನಲ್ಲಿ ಕೆಲಸ ಹೋಯಿತು ಎಂದು ಸಾವಿಗೆ ಶರಣಾದ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts