More

    VIDEO| ಭಾರತೀಯ ರೈಲ್ವೆಯ ‘ಆತ್ಮ’ ನಾಗಪುರದಲ್ಲಿ ಕೆಲಸ ಶುರುಮಾಡಿದೆ..

    ನಾಗಪುರ: ಭಾರತೀಯ ರೈಲ್ವೆಯ ಸೆಂಟ್ರಲ್ ಝೋನ್​ ಇದೇ ಮೊದಲ ಬಾರಿಗೆ ಹೊಸ ಆಟೋಮ್ಯಾಟೆಡ್​ ಟಿಕೆಟ್ ಚೆಕ್ಕಿಂಗ್ ಆ್ಯಂಡ್ ಮ್ಯಾನೇಜಿಂಗ್ ಆಕ್ಸೆಸ್​ (ಆತ್ಮ) ಯಂತ್ರವನ್ನು ನಾಗಪುರ ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸಿದೆ. ಕೋವಿಡ್ 19 ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಈ ಯಂತ್ರವನ್ನು ಸ್ಥಾಪಿಸಲಾಗಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಈ ಸಂಬಂಧದ ವಿಡಿಯೋವನ್ನು ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಅವರ ಕಚೇರಿ ಟ್ವೀಟ್ ಮಾಡಿದೆ ಕೂಡ.

    ಪ್ರಯಾಣಿಕರ ಟಿಕೆಟ್ ಪರಿಶೀಲನೆ, ಅವರ ಶರೀರದ ಉಷ್ಣತೆ ಪರಿಶೀಲನೆ, ಫೇಸ್​ ಮಾಸ್ಕ್ ಚೆಕ್ಕಿಂಗ್​ ಮುಂತಾದವೆಲ್ಲವನ್ನೂ ಈ ಯಂತ್ರ ಮಾಡುತ್ತಿದೆ. ಇದನ್ನು ಸ್ಥಾಪಿಸಿರುವ ಕಾರಣ ಸುರಕ್ಷತೆ ಹೆಚ್ಚಿದ್ದು, ಉದ್ಯೋಗಿಗಳ ಸಂಖ್ಯೆ ಕಡಿಮೆ ಇದ್ದರೂ ಪ್ರಯಾಣಿಕರನ್ನು ನಿರ್ವಹಿಸಬಹುದಾಗಿದೆ. ರೈಲು ಹತ್ತುವ ಮೊದಲು ಅನುಸರಿಸಬೇಕಾದ ಮಾರ್ಗಸೂಚಿಯನ್ನು ಪಾಲಿಸುವ ನಿಟ್ಟಿನಲ್ಲಿ ಇದು ಸಹಕಾರಿಯಾಗಿದೆ.

    ಈ ಯಂತ್ರ ಇರುವಲ್ಲಿ ಮಾನವ ಸ್ಪರ್ಶ ಕಡಿಮೆ ಇರುತ್ತದೆ. ಇದು ಟಿಕೆಟ್ ಪರಿಶೀಲನೆ, ಗುರುತಿನ ಚೀಟಿ ಸ್ಕ್ಯಾನ್ ಮಾಡಿ ಪಿಎನ್​ಆರ್ ನಂಬರ್ ತಿಳಿಸುವುದಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸುವ ಕೆಲಸವನ್ನೂ ಮಾಡುತ್ತದೆ. ಈ ಯಂತ್ರದಲ್ಲಿ ಸಂವಹನಕ್ಕಾಗಿ ಉಭಯ ಸಂವಹನದ ಮೈಕ್ ಅಳವಡಿಸಲಾಗಿದೆ. ಇದನ್ನು ನಿರ್ವಹಿಸುವುದಕ್ಕಾಗಿ ಕ್ಯಾಬಿನ್​ನಲ್ಲಿ ಒಬ್ಬ ಉದ್ಯೋಗಿ ಇರಬೇಕಾಗುತ್ತದೆ. ಸರದಿಯಂತೆ ಪ್ರಯಾಣಿಕರ ಪರಿಶೀಲನೆ ಟಿಕೆಟ್ ವಿತರಣೆ ಮಾಡಬಹುದಾಗಿದೆ.

    ಇದನ್ನೂ ಓದಿ: ಕೋವಿಡ್ ಕಂಟಕ: ಐದನೆಯ ಆರ್ಥಿಕ ಹಿಂಜರಿತ ಎದುರಿಸುತ್ತಿದೆ ಭಾರತ

    ಇತ್ತೀಚೆಗಷ್ಟೇ ಭಾರತೀಯ ರೈಲ್ವೆ ಪಟನಾ ಜಂಕ್ಷನ್​ನಲ್ಲಿ ಸ್ವಯಂ ಚಾಲಿತವಾಗಿ ಫೇಸ್ ಮಾಸ್ಕ್ ಮತ್ತು ಹ್ಯಾಂಡ್ ಸ್ಯಾನಿಟೈಸರ್ ಒದಗಿಸುವ ಯಂತ್ರವನ್ನು ಸ್ಥಾಪಿಸಿತ್ತು. ಸ್ಯಾನಿಟೈಸರ್ ತರುವುದನ್ನು ಮತ್ತು ಫೇಸ್​ ಮಾಸ್ಕ್​ ಹಾಕುವುದನ್ನು ಮರೆತು ಬಂದವರಿಗೆ ಇದರಿಂದ ಅನುಕೂಲವಾಗಿದೆ. (ಏಜೆನ್ಸೀಸ್)

    VIDEO: ಮುಂದಿನ ತಿಂಗಳು ಬಿಡುಗಡೆಯಾಗಲಿದೆಯೆ ಮೈಕ್ರೋಸಾಫ್ಟ್ ಸರ್ಫೇಸ್ ಡುಯೋ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts