More

    VIDEO: ಮುಂದಿನ ತಿಂಗಳು ಬಿಡುಗಡೆಯಾಗಲಿದೆಯೆ ಮೈಕ್ರೋಸಾಫ್ಟ್ ಸರ್ಫೇಸ್ ಡುಯೋ?

    ಎರಡು ಪರದೆಯ ಮಡಿಚಬಲ್ಲ ಸ್ಮಾರ್ಟ್​ಫೋನ್​ ಸರ್ಫೇಸ್ ಡುಯೋವನ್ನು ಮುಂದಿನ ತಿಂಗಳೇ ಬಿಡುಗಡೆ ಮಾಡಲು ಮೈಕ್ರೋಸಾಫ್ಟ್ ಸಿದ್ಧತೆ ನಡೆಸಿದೆ. ಸ್ಯಾಮ್​ಸಂಗ್ ಗ್ಯಾಲೆಕ್ಸಿ ಫೋಲ್ಡ್ 2 ಫೋನ್​ಗೆ ಪ್ರತಿಸ್ಪರ್ಧಿ ಎಂದು ಇದನ್ನು ಪರಿಗಣಿಸಲಾಗಿದೆ. ಗ್ಯಾಲಕ್ಸಿ ಫೋಲ್ಡ್ 2 ಆಗಸ್ಟ್ 5ರಂದು ಮಾರುಕಟ್ಟೆಗೆ ಬರಲಿದೆ.

    ವಿಂಡೋಸ್​ ಸೆಂಟ್ರಲ್​ನ ಝಾಕ್​ ಬೋವ್ಡನ್​ ಪ್ರಕಾರ, ಮೈಕ್ರೋಸಾಫ್ಟ್ ಕಂಪನಿ ಸರ್ಫೇಸ್ ಡುಯೋ ಸ್ಮಾರ್ಟ್​ಫೋನನ್ನು ಮುಂದಿನ ತಿಂಗಳೇ ಬಿಡುಗಡೆ ಮಾಡುವ ಇರಾದೆಯಲ್ಲಿದೆ. ಈ ಹೊಸ ಫೋನ್​ ಸ್ಟೈಲಿಷ್ ಆಗಿದ್ದು, ಅಡ್ವಾನ್ಸ್ಡ್​ ಕೂಡ ಆಗಿದೆ. ಇದರಲ್ಲಿ ಇರುವ ಫೀಚರ್​ಗಳು ಬಳಕೆದಾರರಿಗೆ ಅತ್ಯುತ್ತಮ ಅನುಭವವನ್ನು ನೀಡಬಲ್ಲದು. ಒಮ್ಮೆ ಈ ಫೋನ್ ಬಿಡುಗಡೆಯಾದರೆ ಮುಂದಿನ ಎರಡು ತಿಂಗಳ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇದು ಲಭ್ಯವಾಗಿರಲಿದೆ. ಬಿಡುಗಡೆಯ ದಿನಾಂಕ ಇನ್ನೂ ನಿಗದಿಯಾಗಿಲ್ಲದ ಕಾರಣ ನಿರ್ದಿಷ್ಟವಾಗಿ ಏನೂ ಹೇಳಲಾಗದು.

    ಆದಾಗ್ಯೂ, ಸರ್ಫೇಸ್​ ಡುಯೋದ ಫೀಚರ್​ಗಳ ವಿವರ ಮತ್ತು ಪ್ರಾಡಕ್ಟ್​ ಟೀಸರ್ ಬಿಡುಗಡೆಯಾಗಿದೆ. ಮಧ್ಯಮ ವರ್ಗದ ದರದಲ್ಲಿ ಇದು ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್​ 855ಎಸ್​ಒಸಿ, 6ಜಿಬಿ ರಾಮ್​, 64 ಜಿಬಿ ಅಥವಾ 256 ಜಿಬಿ ಸ್ಟೋರೇಜ್​ ಸೌಲಭ್ಯವಿರಲಿದೆ. 11 ಮೆಗಾ ಪಿಕ್ಸಲ್​ ಕ್ಯಾಮೆರಾ ಸೆನ್ಸರ್​ ಫ್ರಂಟ್ ಮತ್ತು ಹಿಂಭಾಗದಲ್ಲಿ ಇರಲಿದೆ. 5.6 ಇಂಚು ಅಮೋಲ್ಡ್​ ಡಿಸ್​ಪ್ಲೇ ಇದ್ದು, ಸ್ಕ್ರೀನ್​ 4:3 ಅನುಪಾತ, 1800×1350 ಪಿಕ್ಸೆಲ್​ ರೆಸೊಲುಷನ್​ ಮತ್ತು 401 ಪಿಕ್ಸೆಲ್ ಡೆನ್ಸಿಟಿ ಹೊಂದಿರಲಿದೆ. ಆ್ಯಂಡ್ರಾಯ್ಡ್​ 10 ಒಎಸ್​ ಇದರಲ್ಲಿ ಇದ್ದು, ಮೈಕ್ರೋಸಾಫ್ಟ್ ಆ್ಯಪ್​ಗಳು ಇರಲಿವೆ. ಸರ್ಫೇಸ್ ಡುಯೋದಲ್ಲಿ 3460 mAh ಬ್ಯಾಟರಿ ಇದ್ದು, ಯುಎಸ್​ಬಿ-ಸಿ ಫಾಸ್ಟ್​ ಚಾರ್ಜಿಂಗ್ ಸೌಲಭ್ಯವಿದೆ. 5ಜಿ ಸಪೋರ್ಟ್ ಮಾಡಲ್ಲ. 4ಜಿ ಎಲ್​ಟಿಇ ಸ್ಪೀಡ್​ನಲ್ಲಿ ಕೆಲಸ ಮಾಡಲಿದೆ. (ಏಜೆನ್ಸೀಸ್)

    ಕೋವಿಡ್ ಕಂಟಕ: ಐದನೆಯ ಆರ್ಥಿಕ ಹಿಂಜರಿತ ಎದುರಿಸುತ್ತಿದೆ ಭಾರತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts