More

    ಪಂದ್ಯದ ನಡುವೆ ಮೈದಾನದಲ್ಲಿ ಹೆದರಿ ಓಡಿದ ಹಿಟ್​ಮ್ಯಾನ್​ ರೋಹಿತ್​ ಶರ್ಮ! ವಿಡಿಯೋ ವೈರಲ್​

    ಮುಂಬೈ: ನಮ್ಮ ದೇಶದಲ್ಲಿ ಕ್ರಿಕೆಟಿಗರಿಗೆ ಇರುವ ಫ್ಯಾನ್ ಫಾಲೋಯಿಂಗ್ ಕ್ರೇಜ್​ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರರ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಲು ಬಯಸುವುದು ಸಹಜ. ಅಲ್ಲದೆ, ಸೆಲ್ಫಿ ಮತ್ತು ಆಟೋಗ್ರಾಫ್‌ ಪಡೆಯಲು ಇಚ್ಛಿಸುತ್ತಾರೆ. ಆದರೆ, ಅದು ಅಷ್ಟು ಸುಲಭವಲ್ಲ. ಕೆಲವರಿಗೆ ಅವರ ಅದೃಷ್ಟದಿಂದಾಗಿ ಅವಕಾಶ ಸಿಗುತ್ತದೆ. ಆದರೆ, ಕೆಲವರು ಅವಕಾಶ ಸಿಗದಿದ್ದಾಗ ತಮ್ಮ ನೆಚ್ಚಿನ ಆಟಗಾರರನ್ನು ಭೇಟಿಯಾಗಲು ಕೆಲವೊಮ್ಮೆ ಹುಚ್ಚು ಸಾಹಸ ಮಾಡುತ್ತಾರೆ.

    ಪಂದ್ಯ ನಡೆಯುವಾಗ ಮೈದಾನಕ್ಕೆ ನುಗ್ಗಿ ನೆಚ್ಚಿನ ಆಟಗಾರರ ಬಳಿ ಓಡಿ, ಪಾದ ಮುಟ್ಟಿ ನಮಸ್ಕಾರ ಮಾಡಿ, ಅಪ್ಪಿಕೊಳ್ಳುತ್ತಾರೆ ಮತ್ತು ಕೆಲವೊಮ್ಮೆ ಸೆಲ್ಫಿಯನ್ನು ತೆಗೆದುಕೊಳ್ಳುತ್ತಾರೆ. ಆದರೆ ಕೆಲವೊಮ್ಮೆ ಅಭಿಮಾನಿಗಳ ಇಂತಹ ಚೇಷ್ಟೆಗಳಿಂದ ಆಟಗಾರರು ಹೆದರುತ್ತಾರೆ. ಇತ್ತೀಚೆಗಷ್ಟೇ ಮುಂಬೈ ಇಂಡಿಯನ್ಸ್ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ಅಭಿಮಾನಿಯ ವರ್ತನೆಯಿಂದ ಈ ರೀತಿ ಭಯಗೊಂಡರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

    ಪ್ರಸ್ತುತ ಪೀಳಿಗೆಯ ಕ್ರಿಕೆಟ್‌ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಆಟಗಾರರಲ್ಲಿ ರೋಹಿತ್ ಶರ್ಮ ಕೂಡ ಒಬ್ಬರು. ಭಾರತ ತಂಡದ ಸ್ಟಾರ್​ ಬ್ಯಾಟ್ಸ್​ಮನ್ ಹಾಗೂ ನಾಯಕನಾಗಿ ಮಿಂಚಿದ ರೀತಿಗೆ ಎಲ್ಲರೂ ಬೆರಗಾಗಿದ್ದಾರೆ. ಐಪಿಎಲ್​ನಲ್ಲಿ ಮುಂಬೈ ತಂಡದ ನಾಯಕರಾಗಿದ್ದಾಗ ರೋಹಿತ್ 5 ಟ್ರೋಫಿಗಳನ್ನು ಜಯಿಸಿದ್ದಾರೆ. ಮೂಲಕ ಮುಂಬೈ ಇಂಡಿಯನ್ಸ್​ ಎಂದರೆ ರೋಹಿತ್ ಮತ್ತು ರೋಹಿತ್ ಎಂದರೆ ಮುಂಬೈ ಇಂಡಿಯನ್ಸ್​ ಎನ್ನುವಂತಾಗಿದೆ. ಅದಕ್ಕಾಗಿಯೇ ಮುಂಬೈ ಅಭಿಮಾನಿಗಳು ಹಿಟ್‌ಮ್ಯಾನ್‌ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮತ್ತು ಅವರ ಆಟೋಗ್ರಾಫ್ ಪಡೆಯಲು ಮುಗಿಬೀಳುತ್ತಾರೆ.

    ನೇರವಾಗಿ ಭೇಟಿಯಾಗುವ ಅವಕಾಶ ಸಿಗುವುದಿಲ್ಲ ಎಂದುಕೊಂಡ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ರೋಹಿತ್​ರನ್ನು ಭಯ ಬೀಳಿಸಿದ ಘಟನೆ ನಡೆದಿದೆ. ನಿನ್ನೆ (ಏಪ್ರಿಲ್​ 1) ರಾಜಸ್ಥಾನ ಮತ್ತು ಮುಂಬೈ ನಡುವಿನ ಪಂದ್ಯದ ವೇಳೆ, ಅಭಿಮಾನಿಯೊಬ್ಬರು ವಾಂಖೆಡೆ ಮೈದಾನಕ್ಕೆ ನುಗ್ಗಿದರು. ಆ ವೇಳೆ ರೋಹಿತ್ ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಹಿಂದಿನಿಂದ ಓಡಿ ಬಂದ ಅಭಿಮಾನಿಯನ್ನು ನೋಡಿದ ರೋಹಿತ್​ ಒಂದು ಕ್ಷಣ ಆಘಾತಕ್ಕೊಳಗಾಗಿ ಓಡಿದರು. ಬಳಿಕ ಅಭಿಮಾನಿ ಎಂದು ಗೊತ್ತಾದ ಕೂಡಲೇ ಆತನನ್ನು ತಬ್ಬಿಕೊಂಡು ಸಂತೈಸಿಸಿ ಕಳುಹಿಸಿಕೊಟ್ಟರು.

    ಇದೇ ಸಂದರ್ಭದಲ್ಲಿ ಪಕ್ಕದಲ್ಲೇ ಇದ್ದ ಇಶಾನ್ ಕಿಶನ್ ಕೂಡ ಅಭಿಮಾನಿಗೆ ಹಸ್ತಲಾಘವ ಮಾಡಿ, ಅಪ್ಪಿಕೊಂಡರು. ಆದರೆ, ಅಭಿಮಾನಿ ಮೈದಾನಕ್ಕೆ ನುಗ್ಗಿದ್ದನ್ನು ಗಮನಿಸಿದ ಭದ್ರತಾ ಸಿಬ್ಬಂದಿ, ಅತನನ್ನು ಹಿಡಿದು ಹೊರಗೆ ಕರೆದೊಯ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ. ಇದನ್ನು ನೋಡಿದ ನೆಟ್ಟಿಗರು ನಿಮ್ಮ ಅಭಿಮಾನ ಚೆನ್ನಾಗಿದೆ ಆದರೆ, ಆಟಗಾರರಿಗೆ ಈ ರೀತಿ ತೊಂದರೆ ನೀಡಿ ಹೆದರಿಸುವುದು ಸರಿಯಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಯ ಈ ನಡವಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ. (ಏಜೆನ್ಸೀಸ್)

    20 ಕೋಟಿ ರೂ. ಬಹುಮಾನಕ್ಕೆ 200 ಕೋಟಿ ಖರ್ಚು! ತಂಡದ ಮಾಲೀಕರು IPLನಲ್ಲಿ ಹೇಗೆ ಆದಾಯ ಗಳಿಸ್ತಾರೆ?

    ಟೀ ಜತೆ ಬಿಸ್ಕತ್ತು ಸೇವಿಸ್ತೀರಾ? ಹೌದು ಎಂದಾದ್ರೆ ನಿಮಗೆ ಗೊತ್ತಿಲ್ಲದೆ ಈ ರೋಗ ಬರಬಹುದು ಎಚ್ಚರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts