More

    VIDEO | ಊರಿನೊಳಗೆ ಪ್ರತ್ಯಕ್ಷವಾದ ಕಾಡಾನೆ; ಜಮೀನು ರಸ್ತೆಗಳಲ್ಲಿ ಸಂಚಾರ

    ಚಿಕ್ಕಮಗಳೂರು : ಚಿಕ್ಕಮಗಳೂರಿನ ಹೊರವಲಯದಲ್ಲಿ ಇಂದು ಬೆಳ್ಳಂಬೆಳಿಗ್ಗೆ ಜನರಿಗೆ ವಿಶೇಷ ಅತಿಥಿಯ ದರ್ಶನವಾಯ್ತು. ಕಾಡಿನಿಂದ ಊರಿನೆಡೆಗೆ ಅಡ್ಡಾಡುತ್ತಾ ಬಂದ ಒಂಟಿ ಸಲಗವೊಂದು ರೋಮಾಂಚನ ಮೂಡಿಸಿದ್ದಲ್ಲದೆ, ಸ್ಥಳೀಯರಲ್ಲಿ ಭೀತಿ ಹುಟ್ಟಿಸಿತು.

    ಚಿಕ್ಕಮಗಳೂರು ನಗರದ ಎಬಿಸಿ ಕಾಫಿ ಕ್ಯೂರಿಂಗ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯನ್ನ ದಾಟಿ ಹೋದ ಕಾಡಾನೆಯು ವಾಹನಗಳ ಓಡಾಟದ ನಡುವೆಯೂ ರಾಜಾರೋಷವಾಗಿ ನಲ್ಲೂರು ಗ್ರಾಮವನ್ನು ಪ್ರವೇಶಿಸಿತು. ಹೊರವಲಯದಲ್ಲಿರುವ ಈ ಗ್ರಾಮದ ಸಮೀಪದ ಜಮೀನು ರಸ್ತೆಗಳಲ್ಲಿ ಓಡಾಟ ನಡೆಸಿ, ಸ್ಥಳೀಯರಲ್ಲಿ ಭೀತಿ ಉಂಟುಮಾಡಿತು.

    ಇದನ್ನೂ ಓದಿ: ಕಾಲು ಜಾರಿ ನಾಲೆಗೆ ಬಿದ್ದವ ಶವವಾಗಿ ಪತ್ತೆ

    ಜಮೀನಿನಲ್ಲಿ ಓಡಾಡಿ ಗ್ರಾಮದ ಸಮೀಪದ ಗುಡ್ಡದ ಹತ್ತಿರ ತೆರಳಿದ ಕಾಡಾನೆಯ ಸುದ್ದಿ ತಿಳಿದು, ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿದರು. ಸಧ್ಯಕ್ಕೆ ಅಡಿಕೆ ತೋಟದಲ್ಲಿ ಬೀಡು ಬಿಟ್ಟಿರುವ ಈ ಒಂಟಿ ಸಲಗದ ನಡೆ ಗಮನಿಸುತ್ತಾ, ಅರಣ್ಯ ಇಲಾಖೆಯ ಸಿಬ್ಬಂದಿ ಕೂಡ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ ಎನ್ನಲಾಗಿದೆ.

    VIDEO | ಭಾರೀ ಜಡಿಮಳೆ, ಊರಿನೊಳಗೆ ನೀರಿನ ಹೊಳೆ!

    ಬೇಬಿ ವಮಿಕಾ ಜೊತೆ ವಿರುಷ್ಕಾ ದಂಪತಿಯ ಪಿಕ್​ನಿಕ್!

    ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಹೈಕೋರ್ಟ್​ ಗ್ರೀನ್ ಸಿಗ್ನಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts