More

    VIDEO| ಲೆಹಂಗಾ ಬದಲಿಗೆ ಜೀನ್ಸ್​​ ತೊಟ್ಟ ಮದುವೆ ಹೆಣ್ಣು! ವೈರಲ್​ ಆಗ್ತಿದೆ ಈ ವಿಡಿಯೋ

    ಬೆಂಗಳೂರು: ಮದುವೆ ಎಂದಾಕ್ಷಣ ವಧುವರರು ಪಾರಂಪರಿಕ ಪೋಷಾಕುಗಳನ್ನು ತೊಟ್ಟ ಚಿತ್ರಣ ಕಣ್ಮುಂದೆ ಬರುತ್ತದೆ. ಉತ್ತರ ಭಾರತದ ಕಡೆ ವಧುವು ಭಾರೀ ಒಡವೆಗಳನ್ನು ತೊಟ್ಟು, ಕೆಂಪು ಬಣ್ಣದ ಎಂಬ್ರಾಯ್ಡರಿ ಲೆಹೆಂಗಾ ಚೋಲಿಯಲ್ಲಿ ಝಗಮಗಿಸಬೇಕು. ಆದರೆ, ಇಲ್ಲೊಬ್ಬಳು ವಧು, ಲೆಹೆಂಗಾ ಬದಲಿಗೆ ಕಟ್​ಗಳನ್ನು ಹೊಂದಿದ ಜೀನ್ಸ್​ ಪ್ಯಾಂಟು ತೊಟ್ಟು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದಾಳೆ.

    ವಿಟ್ಟಿ ವೆಡ್ಡಿಂಗ್​ ಎಂಬ ಸಂಸ್ಥೆಯ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಮುದ್ರಾ ಎಂಬ ವಧುವಿನ ಮದುವೆ ಸಂದರ್ಭದ ದೃಶ್ಯವೊಂದನ್ನು ಪೋಸ್ಟ್​ ಮಾಡಿದ್ದಾರೆ. ಸಾತ್​ ಫೇರೆಗೆ ಕರೆದುಕೊಂಡು ಹೋಗಲು ಕಾದಿರುವ ತನ್ನ ಮಿತ್ರರೊಂದಿಗೆ ಒಡನಾಡುತ್ತಾ, ಭಾರೀ ಡಿಸೈನಿನ ಚೋಲಿ, ದುಪಟ್ಟಾ, ಒಡವೆಗಳು ಎಲ್ಲವನ್ನೂ ಧರಿಸಿರುವ ಮುದ್ರಾ, ಲೆಹೆಂಗಾ ಬದಲಿಗೆ ಮಾತ್ರ ಜೀನ್ಸ್​ ಪ್ಯಾಂಟ್​, ಅದರಲ್ಲೂ ಹರಿದ ಡಿಸೈನಿನ ಜೀನ್ಸ್​ ಪ್ಯಾಂಟನ್ನು ತೊಟ್ಟಿದ್ದಾಳೆ. ತಮಾಷೆಯಾಗಿ, “ನನಗೆ ಲೆಹೆಂಗಾ ಹಾಕಿಕೊಳ್ಳಲು ಇಷ್ಟವಿಲ್ಲ. ಹೀಗೆ ಹೋಗುತ್ತೇನೆ” ಎಂದಿದ್ದಾಳೆ.

    ವಧುವಿನ ಮಿತ್ರರಲ್ಲೊಬ್ಬ ನಡೀ ಹಾಗಾದ್ರೆ ಅಂತ ಕೆಳಅಂತಸ್ತಿನಲ್ಲಿರುವ ಮಂಟಪಕ್ಕೆ ಕರೆದೊಯ್ಯಲು ಮುಂದಾಗುವಂತೆ ನಟಿಸಿದರೆ, ಎಲ್ಲರೂ ನಗುತ್ತಿರುವುದು ಈ ವಿಡಿಯೋದಲ್ಲಿ ಕಂಡುಬಂದಿದೆ. ಈ ಫ್ಯೂಶನ್​ ಸ್ಟೈಲ್​ಫ್ಯಾಷನ್​​ ತೋರಿಸುತ್ತಿರುವ ವಧುವನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಈ ವಿಡಿಯೋ ತುಣುಕು ಮೂರೇ ದಿನಗಳಲ್ಲಿ ಸುಮಾರು 50 ಸಾವಿರ ವೀಕ್ಷಣೆಗಳನ್ನು ಪಡೆದಿದೆ. (ಏಜೆನ್ಸೀಸ್)

    ‘ಮೊಬೈಲ್​ ರೂಮಲ್ಲೇ ಬಿಟ್ಟು ಬನ್ನಿ’ – ಅತಿಥಿಗಳಿಗೆ ವಿಕಿ-ಕತ್ರೀನಾ ಓಲೆ! ಅಭಿಮಾನಿಗಳಿಗೆ ಒಟಿಟಿಯಲ್ಲಿ ಮದುವೆ ದೃಶ್ಯಾವಳಿ?

    ZOOM​ ಕಾಲಲ್ಲೇ 900 ಜನರನ್ನ ಕೆಲಸದಿಂದ ತೆಗೆದ CEO! ವಿಡಿಯೋ ವೈರಲ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts