More

    VIDEO| ಈ ರಾಜ್ಯದ ನಾಡಗೀತೆ ಕೇಳಿ… ಅಂಧ ಬಾಲಕನ ಸವಿದನಿಯಲ್ಲಿ

    ರಾಯ್ಪುರ: ‘ಜಯ ಭಾರತ ಜನನಿಯ ತನುಜಾತೆ, ಜಯ ಹೇ ಕರ್ನಾಟಕ ಮಾತೆ…’ ಎಂಬ ಗೀತೆ ಕೇಳಿದಂತೆಯೇ ಕನ್ನಡಪ್ರೇಮಿಗಳಲ್ಲಿ ರೋಮಾಂಚನವಾಗುವುದುಂಟು. ಕರ್ನಾಟಕದ ನಾಡಗೀತೆಯಾದ ಈ ಹಾಡಿನ ಮಾದರಿಯಲ್ಲಿ ದೇಶದ ಇತರ ರಾಜ್ಯಗಳಿಗೂ ರಾಜ್ಯಗೀತೆಗಳಿರುವುದು ಸರಿಯಷ್ಟೆ. ನವರಾಜ್ಯವಾದ ಛತ್ತೀಸಗಡದ ‘ರಾಜ್​ ಗೀತ್​’ಅನ್ನು ಕೇಳುವ ಅವಕಾಶ ಇದೀಗ ಜಗತ್ತಿನ ವಿವಿಧೆಡೆಯ ನೆಟ್ಟಿಗರಿಗೆ ಸಿಕ್ಕಿದೆ.

    ಛತ್ತೀಸಗಡದ ಸಿಎಂ ಭೂಪೇಶ್​ ಬಘೇಲ್​ ಅವರು ಬಾಲಕನೊಬ್ಬ ರಾಜ್ಯಗೀತೆಯನ್ನು ಹಾಡಿರುವ ವಿಡಿಯೋ ತುಣುಕನ್ನು ಇತ್ತೀಚೆಗೆ ತಮ್ಮ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ. ಇದರಲ್ಲಿ “ಅರ್ಪಾ ಪೈರೀ ಕೆ ಧಾರ್​, ಮಹಾನದೀ ಹೇ ಅಪಾರ್​…’ ಎಂಬ ಸುಮಧುರ ನಾದವುಳ್ಳ ಗೀತೆಯನ್ನು ಅಂಧ ಬಾಲಕನೊಬ್ಬ ಹಾಡಿರುವುದು ವಿಶೇಷ. “ಈ ಬಾಲಕನ ಹಾಡನ್ನು ಕೇಳುತ್ತಲೇ ಇರೋಣ ಎನ್ನಿಸುತ್ತಿದೆ” ಎಂದು ಬರೆದಿರುವ ಸಿಎಂ ಭೂಪೇಶ್​ ಬಘೇಲ್​ ಅವನಿಗೆ ಶುಭ ಹಾರೈಸಿದ್ದಾರೆ.

    “ಮೈಸೆಲ್ಫ್​ ಧರ್ಮೇಂದ್ರ ದಾಸ್​ ಮಹಂತ್​” ಎಂದು ಪರಿಚಯ ಮಾಡಿಕೊಂಡು ಸುಶ್ರಾವ್ಯವಾಗಿ ಹಾಡುವ ಈ ಬಾಲಕ, ರಾಜ್ಯದ ಜಂಜ್​ಗೀರ್-ಚಂಪಾ ಜಿಲ್ಲೆಯ ಅಂಧರ ಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದಾನೆ. ವೈರಲ್​ ಆಗಿ ಸಹಸ್ರಾರು ವೀಕ್ಷಣೆಗಳನ್ನು ಪಡೆದಿರುವ ಈ ವಿಡಿಯೋ ತುಣುಕು ನೆಟ್ಟಿಗರ ಮೆಚ್ಚುಗೆ ಗಳಿಸಿದೆ. (ಏಜೆನ್ಸೀಸ್)

    ಮನೇಲಿ ಬಾಡಿ ಸೂಟ್​ ಹಾಕ್ಕೊಂಡು ಓಡಾಡ್ತಿದ್ದೆ: ‘ಛೋರೀ’ ನಟಿ ನುಸ್ರತ್​

    ಬಿಟ್​ಕಾಯಿನ್​ಗೆ ಭಾರತದಲ್ಲಿ ಸಿಗುವುದೇ ಮಾನ್ಯತೆ? ವಿತ್ತ ಸಚಿವಾಲಯ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts