More

    ಬಿಟ್​ಕಾಯಿನ್​ಗೆ ಭಾರತದಲ್ಲಿ ಸಿಗುವುದೇ ಮಾನ್ಯತೆ? ವಿತ್ತ ಸಚಿವಾಲಯ ಹೇಳಿದ್ದೇನು?

    ನವದೆಹಲಿ: ರಾಜ್ಯದಲ್ಲಿ ಭಾರೀ ಗದ್ದಲಕ್ಕೆ ಒಳಗಾಗಿದ್ದು, ಜಗತ್ತಿನಾದ್ಯಂತ ಅತ್ಯಂತ ಜನಪ್ರಿಯವಾಗಿರುವ ಕ್ರಿಪ್ಟೋಕರೆನ್ಸಿ ಬಿಟ್​​ಕಾಯಿನ್​ಗೆ ಭಾರತದಲ್ಲಿ ಮಾನ್ಯತೆ ಸಿಗುತ್ತದೆಯೇ ಎಂಬ ಪ್ರಶ್ನೆ ಇಂದು ಸಂಸತ್ತಿನಲ್ಲಿ ಎದುರಾಯಿತು. ಈ ಪ್ರಶ್ನೆಗೆ ಬಂದಿರುವ ಉತ್ತರವೆಂದರೆ, ಬಿಟ್​ಕಾಯಿನ್​ಗಳನ್ನು ಒಂದು ಕರೆನ್ಸಿಯಾಗಿ ಗುರುತಿಸುವ ಯಾವುದೇ ಪ್ರಸ್ತಾವನೆ ಹಣಕಾಸು ಸಚಿವಾಲಯದ ಮುಂದಿಲ್ಲ ಎಂಬುದು.

    ಪ್ರಸ್ತುತ ಸಂಸತ್​ ಅಧಿವೇಶನದಲ್ಲಿ ಖಾಸಗಿ ವರ್ಚುವಲ್​ ಕರೆನ್ಸಿಯನ್ನು ನಿಷೇಧಿಸುವ ಕಾನೂನನ್ನು ಕೇಂದ್ರ ಸರ್ಕಾರ ತರಲಿದೆ ಎಂಬ ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಕ್ರಿಪ್ಟೋಕರೆನ್ಸಿಗಳ ಭವಿಷ್ಯದ ಬಗ್ಗೆ ಅದಾಗಲೇ ಅನಿಶ್ಚಿತತೆ ಮೂಡಿದೆ. ಇದೀಗ ಸರ್ಕಾರದ ಈ ಹೇಳಿಕೆಯು ದೇಶದಲ್ಲಿ ಕ್ರಿಪ್ಟೊಕರೆನ್ಸಿ ವಹಿವಾಟು ನಡೆಸುತ್ತಿರುವ ಕಂಪೆನಿಗಳಿಗೆ ಮತ್ತಷ್ಟು ಆಘಾತ ನೀಡಿದೆ.

    ಇದನ್ನೂ ಓದಿ: ಮತ್ತೆ ಸ್ಫೋಟಿಸಿತು ಕರೊನಾ! ಮೊರಾರ್ಜಿ ವಸತಿ ಶಾಲೆಯಲ್ಲಿ 16 ವಿದ್ಯಾರ್ಥಿಗಳಿಗೆ ಸೋಂಕು

    ಚಳಿಗಾಲದ ಅಧಿವೇಶನದ ಮೊದಲ ದಿನದಂದು ಬಿಟ್​ಕಾಯಿನ್​ ಬಗೆಗಿನ ಪ್ರಶ್ನೆಗಳಿಗೆ ಹಣಕಾಸು ಸಚಿವಾಲಯ ಲಿಖಿತ ಉತ್ತರ ನೀಡಿದೆ. ಭಾರತದಲ್ಲಿ ಹೆಚ್ಚುತ್ತಿರುವ ಬಿಟ್​ಕಾಯಿನ್​ ವ್ಯವಹಾರಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆಯೇ ಎಂಬ ಪ್ರಶ್ನೆಗೆ ಅಂತಹ ವಹಿವಾಟುಗಳ ಡೇಟಾವನ್ನು ಸರ್ಕಾರ ಸಂಗ್ರಹಿಸುವುದಿಲ್ಲ ಎಂದು ಸಚಿವಾಲಯ ಹೇಳಿದೆ. ಬಿಟ್​ಕಾಯಿನ್​ಅನ್ನು ಕರೆನ್ಸಿಯಾಗಿ ಗುರುತಿಸುವ ಯಾವುದಾದರೂ ಪ್ರಸ್ತಾವನೆ ಇದೆಯೇ ಎಂಬ ಪ್ರಶ್ನೆಗೆ ಸಚಿವಾಲಯ ಇಲ್ಲ ಎಂದು ಉತ್ತರಿಸಿದೆ ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)

    ವಿವಾದಿತ ಕೃಷಿ ಕಾಯ್ದೆಗಳು ರದ್ದು; ಗದ್ದಲದ ನಡುವೆ ಮಸೂದೆ ಅಂಗೀಕರಿಸಿದ ಸರ್ಕಾರ

    30 ರೂಪಾಂತರಗಳನ್ನು ಹೊಂದಿರುವ ಒಮಿಕ್ರಾನ್​! ಲಸಿಕೆಯನ್ನೂ ಬೈಪಾಸ್​ ಮಾಡುವುದೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts