More

    VIDEO|ಪಿಒಕೆಯಲ್ಲಿ ತೀವ್ರಗೊಂಡಿದೆ ಪಾಕ್​ ವಿರೋಧಿ ಪ್ರತಿಭಟನೆ

    ದಯಾಳ್​(ಪಿಒಕೆ): ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ವಿರೋಧಿ ಪ್ರತಿಭಟನೆ ತೀವ್ರಗೊಂಡಿದ್ದು, ಆ್ಯಕ್ಟಿವಿಸ್ಟ್ -ಪತ್ರಕರ್ತನೊಬ್ಬ ಪಾಕಿಸ್ತಾನದ ಧ್ವಜವನ್ನು ಕೆಳಗಿಸಿದ ವಿಡಿಯೋ ಈಗ ವೈರಲ್ ಆಗಿದೆ. ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದ ದಯಾಳ್ ನಗರದಲ್ಲಿ ನಿನ್ನೆ ಈ ಪ್ರತಿಭಟನೆ ನಡೆದಿತ್ತು.

    ವಿಡಿಯೋದಲ್ಲಿರುವ ದೃಶ್ಯದಲ್ಲಿ – ದಯಾಳ್ ನಗರದ ವಸತಿ ಪ್ರದೇಶದ ಗೇಟ್ ಒಂದರ ಮೇಲೇರಿ ಅಲ್ಲಿ ಹಾರಾಡುತ್ತಿದ್ದ ಪಾಕ್ ಧ್ವಜವನ್ನು ಪತ್ರಕರ್ತ ತನ್ವೀರ್ ಅಹಮದ್​ ಬಿಚ್ಚುತ್ತಿರುವುದು ಕಾಣಿಸುತ್ತದೆ. ಅದಾದ ಬಳಿಕ ಕೆಲವರು ಅವರನ್ನು ಎಳೆದೊಯ್ಯುತ್ತಿರುವುದೂ ಅದರಲ್ಲಿ ದಾಖಲಾಗಿದೆ.

    ಇದನ್ನೂ ಓದಿ: ಹಾವು-ಮುಂಗುಸಿಯಂತೆ ಸೆಣಸಾಡೋದು ಅಂದ್ರೆ ಹೀಗೇನಾ…

    ತನ್ವೀರ್ ಅಹಮದ್ ಕಳೆದ ಕೆಲವು ದಿನಗಳಿಂದ ನಿರಶನ ಸತ್ಯಾಗ್ರಹ ಮಾಡುತ್ತಿದ್ದು, ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಎಲ್ಲೆಲ್ಲಿ ಪಾಕಿಸ್ತಾನದ ಧ್ವಜ ಇದೆಯೋ ಅವೆಲ್ಲವನ್ನೂ ತೆರವುಗೊಳಿಸಬೇಕು ಎಂಬ ಆಗ್ರಹ ಅವರದ್ದು. ಆಗಸ್ಟ್ 20ರಂದು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದನ್ನು ಪ್ರಕಟಿಸಿದ್ದ ಅವರು, ಪಾಕಿಸ್ತಾನದ ರಹಸ್ಯ ಏಜೆನ್ಸಿ, ಕಾರ್ಯಸೂಚಿಯನ್ನು ಮೀರಿ ನಿಲ್ಲುವ ಶಕ್ತಿ ಪಿಒಕೆಯ ಆಡಳಿತಕ್ಕೆ ಇಲ್ಲ. 24 ಗಂಟೆಯೂ ಅವರ ಪಹರೆಯಲ್ಲಿಯೇ ಬದುಕುಸಾಗಿಸಬೇಕಾಗಿದೆ. ಇದರಿಂದ ಹೊರಬಂದು ತಟಸ್ಥ ಪ್ರದೇಶವಾಗಿರುವ ಪಿಒಕೆಯಲ್ಲಿರುವ ವಿದೇಶಿ ಸಂಕೇತಗಳು ಏನೇನಿವೆಯೋ ಅವೆಲ್ಲವನ್ನೂ 48 ಗಂಟೆಗಳ ಒಳಗೆ ತೆರವುಗೊಳಿಸಬೇಕು ಎಂದು ಆಗ್ರಹಿಸಿದ್ದರು.

    ಇದನ್ನೂ ಓದಿ: ನಮ್ಮನ್ನೂ ನಂಬಿ ಪ್ಲೀಸ್

    ಇದಾಗಿ ತನ್ವೀರ್ ನಿನ್ನೆ ಧ್ವಜ ತೆರವು ಕಾರ್ಯಾಚರಣೆಗೆ ಇಳಿದಿದ್ದರು. ಮೂಲಗಳ ಪ್ರಕಾರ, ಇದೇ ವೇಳೆ ಅವರ ಮೇಲೆ ಹಲ್ಲೆ ನಡೆಸಿರುವ ಪಾಕ್ ಪಡೆಗಳು, ಜೀವ ಬೆದರಿಕೆಯನ್ನೂ ಒಡ್ಡಿವೆ ಎಂದು ವರದಿಯಾಗಿದೆ. ಪಿಒಕೆಯ ನಿವಾಸಿಗಳನ್ನು ಹೆದರಿಸಿ, ಬೆದರಿಸಿ ಪಾಕ್​ ಆಡಳಿತವನ್ನು ಹೇರಲಾಗುತ್ತಿದೆ ಎಂಬ ಆರೋಪ ವ್ಯಾಪಕವಾಗಿದೆ. (ಏಜೆನ್ಸೀಸ್)

    ಲಿಫ್ಟ್​ ಕೊಡ್ತೇವೆ ಬಾ ಎಂದು ಮಹಿಳೆಯನ್ನು ಕರೆದೊಯ್ದು ಗ್ಯಾಂಗ್​ ರೇಪ್ ಮಾಡಿದ್ರು ದುರುಳರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts