More

    ಕಾಶ್ಮೀರದ ಜನರಿಗೆ ನಾನೇ ಬ್ರಾಂಡ್ ಅಂಬಾಸಿಡರ್! ಆರ್​ಎಸ್​ಎಸ್ ಮತ್ತು ಮೋದಿ ವಿರುದ್ಧ ಗುಡುಗಿದ ಇಮ್ರಾನ್ ಖಾನ್

    ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಾಗೆಯೇ ತಾನು ಕಾಶ್ಮೀರಿಗಳ ಬ್ರಾಂಡ್ ಅಂಬಾಸಿಡರ್ ಎಂದು ಹೇಳಿಕೊಂಡಿದ್ದಾರೆ.

    ಪಿಒಕೆಯ ಬಾಗ್ ಪ್ರದೇಶದಲ್ಲಿ ನಡೆದ ಮೊದಲ ಚುನಾವಣಾ ಸಂಬಂಧಿತ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, “ಬಿಜೆಪಿ ಮತ್ತು ಆರ್‌ಎಸ್‌ಎಸ್ ಸಿದ್ಧಾಂತವು ಭಾರತಕ್ಕೆ ದೊಡ್ಡ ಅಪಾಯವನ್ನುಂಟುಮಾಡಿದೆ. ಏಕೆಂದರೆ ಆ ಸಿದ್ಧಾಂತವು ಮುಸ್ಲಿಮರನ್ನು ಮಾತ್ರ ಗುರಿಯಾಗಿಸಲಿಲ್ಲ. ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ಸಾಮಾನ್ಯ ಪ್ರಜೆಗಳೆಂದು ಪರಿಗಣಿಸದ ಪರಿಶಿಷ್ಟ ಜಾತಿಗಳನ್ನು ಗುರಿಯಾಗಿಸಿಕೊಂಡಿದೆ” ಎಂದು ಹೇಳಿದ್ದಾರೆ.

    2019ರ ಆಗಸ್ಟ್ 5ರ ನಂತರ ಕಾಶ್ಮೀರದಲ್ಲಿ ದೌರ್ಜನ್ಯಗಳು ತೀವ್ರಗೊಂಡಿದೆ ಎಂದು ಹೇಳುವ ಮೂಲಕ 370 ನೇ ವಿಧಿಯನ್ನು ರದ್ದುಗೊಳಿಸುವ ಪ್ರಧಾನಿ ಮೋದಿ ಸರ್ಕಾರದ ನಿರ್ಧಾರವನ್ನು ಅವರು ಟೀಕಿಸಿದರು. ಪಾಕಿಸ್ತಾನವು ಕಾಶ್ಮೀರಿಗಳೊಂದಿಗೆ ಮತ್ತು ಅವರ ಪರವಾಗಿ ಬ್ರಾಂಡ್ ಅಂಬಾಸಿಡರ್ ಆಗಿ ಹಾಗೂ ವಕೀಲನಾಗಿ ನಾನು ವಿಶ್ವದಲ್ಲಿ ಎಲ್ಲ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಹೋರಾಡುತ್ತೇನೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)

    ಬ್ರಾಹ್ಮಣರಿಗಾಗಿ ಅಭಿಯಾನ ಆರಂಭಿಸಲಿದೆ ಬಿಎಸ್​ಪಿ! ಬಿಜೆಪಿಗೆ ಬೇಡ, ನಮಗೇ ಮತ ನೀಡಿ ಎಂದ ಮಾಯಾವತಿ!

    ಕರೊನಾ ಗೆದ್ದ ಚೀನಾದಲ್ಲಿ ಮಂಕಿ ಬಿ ವೈರಸ್ ಪತ್ತೆ! ಶೇ. 70ಕ್ಕೂ ಹೆಚ್ಚಿದೆ ಈ ಸೋಂಕಿನ ಮರಣ ಪ್ರಮಾಣ!

    ಬೆವರು ಬರಬಾರದೆಂದು ಆಪರೇಷನ್ ಮಾಡಿಸಿಕೊಂಡ ಮಾಡೆಲ್! 23 ವರ್ಷಕ್ಕೇ ಅಂತ್ಯವಾಯಿತು ಬದುಕು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts