ಮುಂಬೈ: ನಟ ವಿಕ್ಕಿ ಕೌಶಲ್ ಅವರು ಇತ್ತೀಚೆಗೆ ಬಾಲಿವುಡ್ನ ಹಾಟ್ ನಟಿ ಕತ್ರಿನಾ ಕೈಫ್ ಅವರನ್ನು ಡಿ.9 ರಂದು ಮದುವೆಯಾಗಿದ್ದರು. ಸದ್ಯ ನಟ ಮಧ್ಯಪ್ರದೇಶದಲ್ಲಿ ತಮ್ಮ ಮುಂಬರುವ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಹಾಗಾಗಿ, ಚಿತ್ರದ ಶೂಟಿಂಗ್ ನಿಮಿತ್ತ ಇಂದೋರ್‌ನಲ್ಲಿರುವ ನಟ, ಹಲವು ಪ್ರಮುಖ ಬೀದಿಗಳಲ್ಲಿ ಬೈಕ್ ಓಡಿಸುತ್ತಿರುವ ತುಂಬಾ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಗಮನಾರ್ಹ ಎಂದರೆ ವಿಕ್ಕಿ ಜೊತೆ ನಟಿ ಸಾರಾ ಅಲಿ ಖಾನ್ ಕಾಣಿಸಿಕೊಂಡಿರುವುದು. ಹೌದು, ಸಾರಾ ಅಲಿ ಖಾನ್ ವಿಕ್ಕಿಯನ್ನು ತಬ್ಬಿಕೊಂಡು ಪಿಲಿಯನ್ ರೈಡ್ ಮಾಡುತ್ತಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ.
ಇನ್ಸ್ಟಾಗ್ರಾಂನಲ್ಲಿ ಹಲವರು ಹಂಚಿಕೊಂಡ ಪೋಸ್ಟ್‌ನಲ್ಲಿ, ನಟಿ ಸಾರಾ ಅಲಿ ಖಾನ್ ಹೂವಿನ ಮುದ್ರಣ ಇರುವ ಹಳದಿ ಸೀರೆಯನ್ನು ಧರಿಸಿದ್ದರು. ವಿಕ್ಕಿ ಕೌಶಲ್ ಜೀನ್ಸ್ ಮತ್ತು ಮೆರೂನ್ ಹಾಫ್ ಜಾಕೆಟ್ ಜೊತೆಗೆ ಟೀ ಶರ್ಟ್ ಧರಿಸಿದ್ದರು. ಈಗ ನಟ ಮತ್ತು ನಟಿಯ ಈ ಬೈಕ್ ರೈಡ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ‘ದಿ ಇಮ್ಮಾರ್ಟಲ್ ಅಶ್ವತ್ಥಾಮ‘ ಚಿತ್ರಕ್ಕಾಗಿ ನಟ ಮತ್ತು ನಟಿ ಒಟ್ಟಿಗೆ ಶೂಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದೇ ಮೊದಲ ಬಾರಿ ಸಾರಾ ಮತ್ತು ವಿಕ್ಕಿ ಒಟ್ಟಿಗೆ ನಟಿಸುತ್ತಿರುವುದು. ಈ ಬೈಕ್ ರೈಡ್ ಕೂಡ ಈ ಸಿನಿಮಾದ ದೃಶ್ಯಗಳ ಶೂಟಿಂಗ್ನ ಅಂಗವಾಗಿದೆ. ಇದೇ ಸಮಯದಲ್ಲಿ ಸಾರ್ವಜನಿಕರು ಒಂದಿಷ್ಟು ವಿಡಿಯೋಗಳು ಮತ್ತು ಫೋಟೋಗಳು ತೆಗೆದಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಖ್ಯಾತ ನಟಿಯ ಜೊತೆ ಕುಣಿದು ಕುಪ್ಪಳಿಸಿದ ಸಲ್ಮಾನ್ ಖಾನ್! ಧೂಳೆಬ್ಬಿಸಿದ ವಿಡಿಯೋ…
Contents
ಮುಂಬೈ: ನಟ ವಿಕ್ಕಿ ಕೌಶಲ್ ಅವರು ಇತ್ತೀಚೆಗೆ ಬಾಲಿವುಡ್ನ ಹಾಟ್ ನಟಿ ಕತ್ರಿನಾ ಕೈಫ್ ಅವರನ್ನು ಡಿ.9 ರಂದು ಮದುವೆಯಾಗಿದ್ದರು. ಸದ್ಯ ನಟ ಮಧ್ಯಪ್ರದೇಶದಲ್ಲಿ ತಮ್ಮ ಮುಂಬರುವ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಹಾಗಾಗಿ, ಚಿತ್ರದ ಶೂಟಿಂಗ್ ನಿಮಿತ್ತ ಇಂದೋರ್‌ನಲ್ಲಿರುವ ನಟ, ಹಲವು ಪ್ರಮುಖ ಬೀದಿಗಳಲ್ಲಿ ಬೈಕ್ ಓಡಿಸುತ್ತಿರುವ ತುಂಬಾ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಗಮನಾರ್ಹ ಎಂದರೆ ವಿಕ್ಕಿ ಜೊತೆ ನಟಿ ಸಾರಾ ಅಲಿ ಖಾನ್ ಕಾಣಿಸಿಕೊಂಡಿರುವುದು. ಹೌದು, ಸಾರಾ ಅಲಿ ಖಾನ್ ವಿಕ್ಕಿಯನ್ನು ತಬ್ಬಿಕೊಂಡು ಪಿಲಿಯನ್ ರೈಡ್ ಮಾಡುತ್ತಿರುವುದು ವಿಡಿಯೋಗಳಲ್ಲಿ ಕಂಡುಬಂದಿದೆ. ಇನ್ಸ್ಟಾಗ್ರಾಂನಲ್ಲಿ ಹಲವರು ಹಂಚಿಕೊಂಡ ಪೋಸ್ಟ್‌ನಲ್ಲಿ, ನಟಿ ಸಾರಾ ಅಲಿ ಖಾನ್ ಹೂವಿನ ಮುದ್ರಣ ಇರುವ ಹಳದಿ ಸೀರೆಯನ್ನು ಧರಿಸಿದ್ದರು. ವಿಕ್ಕಿ ಕೌಶಲ್ ಜೀನ್ಸ್ ಮತ್ತು ಮೆರೂನ್ ಹಾಫ್ ಜಾಕೆಟ್ ಜೊತೆಗೆ ಟೀ ಶರ್ಟ್ ಧರಿಸಿದ್ದರು. ಈಗ ನಟ ಮತ್ತು ನಟಿಯ ಈ ಬೈಕ್ ರೈಡ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ‘ದಿ ಇಮ್ಮಾರ್ಟಲ್ ಅಶ್ವತ್ಥಾಮ‘ ಚಿತ್ರಕ್ಕಾಗಿ ನಟ ಮತ್ತು ನಟಿ ಒಟ್ಟಿಗೆ ಶೂಟ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದೇ ಮೊದಲ ಬಾರಿ ಸಾರಾ ಮತ್ತು ವಿಕ್ಕಿ ಒಟ್ಟಿಗೆ ನಟಿಸುತ್ತಿರುವುದು. ಈ ಬೈಕ್ ರೈಡ್ ಕೂಡ ಈ ಸಿನಿಮಾದ ದೃಶ್ಯಗಳ ಶೂಟಿಂಗ್ನ ಅಂಗವಾಗಿದೆ. ಇದೇ ಸಮಯದಲ್ಲಿ ಸಾರ್ವಜನಿಕರು ಒಂದಿಷ್ಟು ವಿಡಿಯೋಗಳು ಮತ್ತು ಫೋಟೋಗಳು ತೆಗೆದಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.
ಯುವಕರ ಅಸಭ್ಯ ವರ್ತನೆ: ಸ್ಥಳದಲ್ಲಿ ಅಟ್ಟಾಡಿಸಿ ವಾರ್ನಿಂಗ್ ಕೊಟ್ಟ ಸ್ಟಾರ್ ಗಾಯಕಿ ಮಂಗಲಿ!
100 ಜನ್ರಿಗೆ 10 ಲಕ್ಷ ರೂ. ಹಂಚುತ್ತಾರೆ ವಿಜಯ್: ನೀವೂ ಹಣ ಪಡೆಯಬಹುದು… ಹೇಗೆ?