More

    ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ರಾಸ್ ಟೇಲರ್ ವಿದಾಯ, 2022ರಲ್ಲಿ ಕೊನೇ ಆಟ

    ವೆಲ್ಲಿಂಗ್ಟನ್: ನ್ಯೂಜಿಲೆಂಡ್ ತಂಡದ ಹಿರಿಯ ಬ್ಯಾಟರ್ ಹಾಗೂ ಮಾಜಿ ನಾಯಕ ರಾಸ್ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಪ್ರಕಟಿಸಿದ್ದಾರೆ. ಮುಂಬರುವ ತವರು ಕ್ರಿಕೆಟ್ ಋತುವಿನ ಬಳಿಕ ನಿವೃತ್ತಿ ಹೊಂದುತ್ತಿರುವುದಾಗಿ 37 ವರ್ಷದ ಟೇಲರ್ ಹೇಳಿದ್ದಾರೆ.

    ಕಿವೀಸ್ ತಂಡ ಜನವರಿಯಲ್ಲಿ ಪ್ರವಾಸಿ ಬಾಂಗ್ಲಾದೇಶ ವಿರುದ್ಧ 2 ಟೆಸ್ಟ್ ಮತ್ತು ಫೆಬ್ರವರಿ-ಏಪ್ರಿಲ್‌ನಲ್ಲಿ ಆಸ್ಟ್ರೇಲಿಯಾ-ನೆದರ್ಲೆಂಡ್ಸ್ ವಿರುದ್ಧ 6 ಏಕದಿನ ಪಂದ್ಯಗಳನ್ನು ಆಡಲಿದೆ. ಬಾಂಗ್ಲಾ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಅವರು ಕಿವೀಸ್ ಪರ ಗರಿಷ್ಠ 112 ಟೆಸ್ಟ್ ಆಡಿದ ಡೇನಿಯಲ್ ವೆಟ್ಟೋರಿ ದಾಖಲೆ ಸರಿಗಟ್ಟಲಿದ್ದಾರೆ. ಅದುವೇ ಅವರ ಕೊನೇ ಟೆಸ್ಟ್ ಪಂದ್ಯವಾಗಲಿದೆ. ಏಪ್ರಿಲ್ 4ರಂದು ನೆದರ್ಲೆಂಡ್ಸ್ ವಿರುದ್ಧ ತಮ್ಮ ತವರೂರು ಹ್ಯಾಮಿಲ್ಟನ್‌ನಲ್ಲಿ ಅವರು ಕೊನೇ ಏಕದಿನ ಪಂದ್ಯವಾಡಲಿದ್ದಾರೆ.

    ‘ನನ್ನ ಪಯಣ ಅಮೋಘವಾಗಿತ್ತು. ಇಷ್ಟು ದೀರ್ಘಕಾಲದವರೆಗೆ ದೇಶದ ಪರ ಆಡಿರುವುದು ನನ್ನ ಅದೃಷ್ಟ. ಕೆಲ ಶ್ರೇಷ್ಠ ಕ್ರಿಕೆಟಿಗರ ಜತೆ ವತ್ತು ವಿರುದ್ಧ ಆಡಿರುವುದು ನನ್ನ ಭಾಗ್ಯ. ಹಲವು ಸ್ಮರಣೀಯ ಕ್ಷಣ ಮತ್ತು ಮಿತ್ರರನ್ನು ಪಡೆದಿದ್ದೇನೆ. ಆದರೆ ಎಲ್ಲ ಒಳ್ಳೆಯ ಸಂಗತಿಗಳಿಗೂ ಅಂತ್ಯವಿದೆ. ನನಗೆ ಇದುವೇ ಸರಿಯಾದ ಸಮಯವೆನಿಸಿತು’ ಎಂದು ಟೇಲರ್ ಹೇಳಿದ್ದಾರೆ.

    ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್‌ನ ಗರಿಷ್ಠ ರನ್‌ಸ್ಕೋರರ್ ಎಂಬ ಹೆಗ್ಗಳಿಕೆಯೊಂದಿಗೆ ಟೇಲರ್ ನಿವೃತ್ತರಾಗುತ್ತಿದ್ದಾರೆ. ಇದುವರೆಗೆ ಆಡಿರುವ 109 ಟೆಸ್ಟ್‌ಗಳಲ್ಲಿ 19 ಶತಕಗಳ ಸಹಿತ 7,584 ರನ್ ಗಳಿಸಿದ್ದರೆ, 233 ಏಕದಿನ ಪಂದ್ಯಗಳಲ್ಲಿ 21 ಶತಕಗಳ ಸಹಿತ 8,581 ರನ್ ಬಾರಿಸಿದ್ದಾರೆ. 102 ಟಿ20 ಪಂದ್ಯಗಳಲ್ಲಿ 1,909 ರನ್ ಗಳಿಸಿದ್ದಾರೆ. ಚೊಚ್ಚಲ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಜಯಿಸಿದ ಕಿವೀಸ್ ತಂಡದ ಭಾಗವಾಗಿದ್ದರು. 2015 ಮತ್ತು 2019ರ ಏಕದಿನ ವಿಶ್ವಕಪ್ ರನ್ನರ್‌ಅಪ್ ಆದ ತಂಡಗಳಲ್ಲೂ ಇದ್ದರು. ಕಿವೀಸ್ ಪರ ಎಲ್ಲ ಮಾದರಿಯಲ್ಲಿ 100ಕ್ಕೂ ಅಧಿಕ ಪಂದ್ಯವಾಡಿದ ಮೊದಲ ಆಟಗಾರರೂ ಆಗಿದ್ದಾರೆ.

    2006ರಲ್ಲಿ ವಿಂಡೀಸ್ ವಿರುದ್ಧ ಏಕದಿನ ಪಂದ್ಯವಾಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿಟ್ಟಿದ್ದ ಟೇಲರ್, 2007ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪದಾರ್ಪಣೆ ಮಾಡಿದ್ದರು. ಆಸೀಸ್ ವಿರುದ್ಧ ಪರ್ತ್ ಟೆಸ್ಟ್‌ನಲ್ಲಿ 290 ರನ್ ಗಳಿಸಿರುವುದು ಅವರ ಗರಿಷ್ಠ ಗಳಿಕೆಯಾಗಿದೆ.

    ಟೇಲರ್ 14 ಟೆಸ್ಟ್ (4 ಜಯ, 8 ಸೋಲು, 2 ಡ್ರಾ), 20 ಏಕದಿನ (6 ಜಯ, 12 ಸೋಲು, 2 ರದ್ದು) ಮತ್ತು 13 ಟಿ20 (6 ಜಯ, 4 ಸೋಲು, 2 ಟೈ, 1 ರದ್ದು) ಪಂದ್ಯಗಳಲ್ಲಿ ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಿದ್ದಾರೆ.

    ಅಪ್ಪನ ಹಾದಿಯಲ್ಲಿ ಮಗ! ಮುಂಬೈ ರಣಜಿ ತಂಡಕ್ಕೆ ತೆಂಡುಲ್ಕರ್ ಪುತ್ರ ಅರ್ಜುನ್

    2003ರ ವಿಶ್ವಕಪ್ ತಂಡದ ಸದಸ್ಯ, ಮಾಜಿ ಕ್ರಿಕೆಟಿಗ ದಿನೇಶ್ ಮೊಂಗಿಯಾ ಬಿಜೆಪಿಗೆ ಸೇರ್ಪಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts