More

    ‘ರಾಣಿ ಹೊನ್ನಮ್ಮ’ ನಂತರ ರಾಜ್ ಕುಮಾರ್-ಲೀಲಾವತಿ ಜೋಡಿ ಬಹಳ ಜನಪ್ರಿಯ; ಅಣ್ಣಾವ್ರಿಗೆ ಬೆಸ್ಟ್ ಆನ್​ಸ್ಕ್ರೀನ್ ಜೋಡಿಯಾಗಿದ್ರು ಲೀಲಮ್ಮ

    ಬೆಂಗಳೂರು: ಎಲ್ಲರ ನೆಚ್ಚಿನ ನಟಿಯಾಗಿದ್ದ ಲೀಲಾವತಿ ಅವರು ಚಿಕ್ಕಂದಿನಲ್ಲೇ ಕಲೆಯ ಮೇಲೆ‌ ಆಸಕ್ತಿ ಬೆಳೆಸಿಕೊಂಡಿದ್ದರು. ಮೈಸೂರಿನಲ್ಲಿ ವೃತ್ತಿ ರಂಗಭೂಮಿಯ ಮೂಲಕ ನಟನಾ ಲೋಕಕ್ಕೆ ಪ್ರವೇಶಿಸಿದ ಲೀಲಾವತಿ ಅವರು, 1949 ರಲ್ಲಿ ನಾಗಕನ್ನಿಕಾ ಎಂಬ ಸಿನಿಮಾದಲ್ಲಿ ಪುಟ್ಟ ಪಾತ್ರ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ನಂತರ ಮಾಂಗಲ್ಯ ಯೋಗ ಎಂಬ ಸಿನಿಮಾ ಮೂಲಕ ನಾಯಕಿಯಾಗಿ ಪರಿಚಯವಾದರು. 

    ನೂರಾರು ಸಿನಿಮಾಗಳನ್ನ ಹಲವು ಭಾಷೆಯಲ್ಲಿ ಮಾಡಿದ್ದಾರೆ ಲೀಲಾವತಿಯವರು. ಕನ್ನಡದಲ್ಲಿ ಡಾ. ರಾಜ್​​​​​ಕುಮಾ‌ರ್, ಕಲ್ಯಾಣ್​​​​​ಕುಮಾರ್, ಉದಯಕುಮಾರ್ ಜೊತೆ ನಟಿಸಿದ್ದಾರೆ. ಅಂಬರೀಶ್, ಪ್ರಭಾಕರ್, ವಿಷ್ಣುವರ್ಧನ್, ಅನಂತನಾಗ್, ಶಂಕರ್ ನಾಗ್ ಸೇರಿದಂತೆ ಕನ್ನಡದ ಬಹುತೇಕ ನಟರ ಚಿತ್ರಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಆದರೆ ಡಾ.ರಾಜ್ ಹಾಗೂ ಲೀಲಾವತಿ ಜೋಡಿ ಇಡೀ ಭಾರತೀಯ ಚಿತ್ರರಂಗದಲ್ಲೇ ಮೋಡಿ ಮಾಡಿತ್ತು.

    ಡಾ. ರಾಜ್ ಕುಮಾರ್ ಅವರೊಂದಿಗೆ ಲೀಲಾವತಿ ಅವರು ನಟಿಸಿದ ಮೊದಲ ಚಿತ್ರ ‘ರಣಧೀರ ಕಂಠೀರವ’. ‘ರಾಣಿ ಹೊನ್ನಮ್ಮ’ ಸಿನಿಮಾ ಯಶಸ್ವಿಯಾದ ನಂತರ ರಾಜ್ ಕುಮಾರ್ ಮತ್ತು ಲೀಲಾವತಿ ಅವರ ಜೋಡಿ ಜನಪ್ರಿಯವಾಯಿತು. 

    ಆ ನಂತರ ಸಂತ ತುಕಾರಾಂ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ, ಮನ ಮೆಚ್ಚಿದ ಮಡದಿ ಹಲವು ಚಿತ್ರಗಳಲ್ಲೂ ನಾಯಾಕಿಯಾದರು. ಈ ಜನಪ್ರಿಯ ಜೋಡಿ 36 ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇನ್ನು ಕೆಲವು ಚಿತ್ರಗಳಲ್ಲಿ ನಾಯಕ ನಟರಿಗಿಂತ ಹೆಚ್ಚಿನ ಸಂಭಾವನೆ ಪಡೆಯುವ ನಾಯಕಿಯಾಗಿ ಗುರುತಿಸಿಕೊಂಡಿದ್ದರು.

    70ರ ದಶಕದ ಬಳಿಕ ಪೋಷಕ ಪಾತ್ರಗಳಲ್ಲಿ ನಟಿಸಿದ ಲೀಲಾವತಿಯವರು ನಾಯಕಿಯಾಗಿ, ಅಮ್ಮನಾಗಿ, ಅಜ್ಜಿಯಾಗಿ ನಾನಾಬಗೆಯ ಪೋಷಕಪಾತ್ರಗಳಲ್ಲಿ ನಟಿಸಿದರು. ಅವುಗಳಲ್ಲಿ ‘ಗೆಜ್ಜೆ ಪೂಜೆ’, ‘ಸಿಪಾಯಿ ರಾಮು’, ‘ನಾಗರಹಾವು’, ‘ಭಕ್ತ ಕುಂಬಾರ’ ಮುಂತಾದ ಚಿತ್ರಗಳು ಸೂಪರ್​​​ಹಿಟ್​​​ ಆಗಿವೆ.

    ಡಾ.ರಾಜ್‌ಕುಮಾರ್ & ಲೀಲಾವತಿ ಸಿನಿಮಾಗಳು
    1963ರಲ್ಲಿ ವೀರ ಕೇಸರಿ, 1974ರಲ್ಲಿ ಭಕ್ತ ಕುಂಬಾರ, 1976ರಲ್ಲಿ ನಾ ನಿನ್ನ ಮರೆಯಲಾರೆ 1985ರಲ್ಲಿ ಜ್ವಾಲಾಮುಖಿ 1959ರಲ್ಲಿ ಅಬ್ಬಾ ಆ ಹುಡುಗಿ, 1960ರಲ್ಲಿ ರಣಧೀರ ಕಂಠೀರವ, 1962ರಲ್ಲಿ ಕರುಣೆಯೇ ಕುಟುಂಬದ ಕಣ್ಣು, 1963ರಲ್ಲಿ ಕಲಿತರು ಹೆಣ್ಣೆ, 1963ರಲ್ಲಿ ನಂದಾ ದೀಪಾ, 1963ರಲ್ಲಿ ಸಂತ ತುಕರಾಂ, 1963ರಲ್ಲಿ ವಾಲ್ಮಿಕಿ, 1965ರಲ್ಲಿ ಮಹಾಸತಿ ಅನುಸೂಯ, 1972ರಲ್ಲಿ ಸಿಪಾಯಿ ರಾಮು, 1984ರಲ್ಲಿ ಶ್ರಾವಣ ಬಂತು, 1973ರಲ್ಲಿ ಮೂರುವರೆ ವಜ್ರಗಳು, 1959ರಲ್ಲಿ ಜಗಜ್ಯೋತಿ ಬಸವೇಶ್ವರ, 1960ರಲ್ಲಿ ರಾಣಿ ಹೊನ್ನಮ್ಮ, 1961ರಲ್ಲಿ ಕೈವಾರ ಮಹಾತ್ಮೆ, 1961ರಲ್ಲಿ ಕಿತ್ತೂರು ಚೆನ್ನಮ್ಮ, 1962ರಲ್ಲಿ ಗಾಳಿ ಗೋಪುರ, 1963ರಲ್ಲಿ ಮನ ಮೆಚ್ಚಿದ ಮಡದಿ, 1965ರಲ್ಲಿ ಚಂದ್ರಹಾಸ, 1965ರಲ್ಲಿ ಮದುವೆ ಮಾಡಿ ನೋಡು, 1966ರಲ್ಲಿ ಮೋಹಿನಿ ಭಸ್ಮಾಸುರ, 1960ರಲ್ಲಿ ದಶಾವತಾರ, 1962ರಲ್ಲಿ ಭೂಧಾನ, 1959ರಲ್ಲಿ ಧರ್ಮ ವಿಜಯ, 1961ರಲ್ಲಿ ಕಣ್ತೇರೆದು ನೋಡು, 1962ರಲ್ಲಿ ವಿಧಿ ವಿಲಾಸ, 1963ರಲ್ಲಿ ಜೀವನ ತರಂಗ, 1963ರಲ್ಲಿ ಕನ್ಯಾ ರತ್ನ, 1963ರಲ್ಲಿ ಕುಲವಧು, 1963ರಲ್ಲಿ ಮಲ್ಲಿ ಮದುವೆ, 1964ರಲ್ಲಿ ಶಿವರಾತ್ರಿ ಮಹಾತ್ಮೆ, 1964ರಲ್ಲಿ ತುಂಬಿದ ಕೊಡ, 1965ರಲ್ಲಿ ಇದೇ ಮಹಾಸುದಿನ, 1965ರಲ್ಲಿ ನಾಗಾಪೂಜಾ, 1965ರಲ್ಲಿ ವಾತ್ಸಲ್ಯ 1966ರಲ್ಲಿ ಪ್ರೇಮಮಯಿ, 1966ರಲ್ಲಿ ತೂಗುದೀಪ, 1967ರಲ್ಲಿ ಗಂಗೇ ಗೌರಿ, 1968ರಲ್ಲಿ ಭಾಗ್ಯ ದೇವತೆ, 1969ರಲ್ಲಿ ಉಯ್ಯಾಲೆ, 1973ರಲ್ಲಿ ದೂರದ ಬೆಟ್ಟ, 1980ರಲ್ಲಿ ವಸಂತ ಗೀತಾ, 1983ರಲ್ಲಿ ಎರಡು ನಕ್ಷತ್ರಗಳು. 

    ಲೀಲಮ್ಮನವರ ಫೋಟೋ ಮುಂದೆ ಕಣ್ಣೀರಿಡುತ್ತಾ ಮಲಗಿದ ಬ್ಲ್ಯಾಕಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts