More

    video/ ‘ವಿಜಯವಾಣಿ’ ವರದಿ ಹಿಡಿದು ಸರ್ಕಾರಕ್ಕೆ ಚಾಟಿ ಬೀಸಿದ ಡಿಕೆಶಿ

    ಬೆಂಗಳೂರು: ಕರೊನಾ ನಿರ್ವಹಣೆ ನೆಪದಲ್ಲಿ ಸರ್ಕಾರ ಕೋಟ್ಯಂತರ ರೂ. ಅವ್ಯವಹಾರ ನಡೆಸಿದೆ ಎಂದು ಆರೋಪಿಸುತ್ತಲೇ ಇದ್ದ ವಿರೋಧ ಪಕ್ಷ, ಇಂದು(ಜು.18) ವಿಜಯವಾಣಿ ಮುಖಪುಟದಲ್ಲಿ ಪ್ರಕಟಗೊಂಡಿದ್ದ ‘ವೆಂಟಿಲೇಟರ್​ ಗೋಲ್ಮಾಲ್​’ ವರದಿಯನ್ನೇ ಸಾಕ್ಷೀಕರಿಸಿ ‘ಉತ್ತರ ಕೊಡಿ ಬಿಜೆಪಿ’ ಎಂದು ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದೆ.

    ಪಿಪಿಇ ಕಿಟ್​, ಸ್ಯಾನಿಟೈಸರ್​, ಥರ್ಮಲ್​ ಸ್ಕ್ರೀನಿಂಗ್​ ಉಪಕರಣ ಖರೀದಿ ಹಗರಣ ಬಯಲಾದ ಬೆನ್ನಲ್ಲೇ ವೆಂಟಿಲೇಟರ್​ ಖರೀದಿಯಲ್ಲೂ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. 15.86 ಕೋಟಿ ರೂ. ವೆಚ್ಚದಲ್ಲಿ 200 ವೆಂಟಿಲೇಟರ್​ ಖರೀದಿಸುವ ಸಂಬಂಧ ಆರೋಗ್ಯ ಇಲಾಖೆಯ ಅಧೀನದ ಕರ್ನಾಟಕ ಸ್ಟೇಟ್​ ಡ್ರಗ್ಸ್ ಲಾಜಿಸ್ಟಿಕ್​ ಆ್ಯಂಡ್​ ವೇರ್​ಹೌಸಿಂಗ್​ ಸೊಸೈಟಿ(ಕೆಡಿಎಲ್​ಡಬ್ಲ್ಯುಎಸ್​) ಆದೇಶ ಹೊರಡಿಸಿದೆ. ಇದರಲ್ಲಿ ಮಾರುಕಟ್ಟೆ ದರಕ್ಕಿಂತ 3 ಪಟ್ಟು ಅಂದರೆ ಪ್ರತಿ ವೆಂಟಿಲೇಟರ್​ಗೆ ಗರಿಷ್ಠ 18.20 ಲಕ್ಷ ರೂ. ಪಾವತಿಸಿ ಖರೀದಿಸಿರುವುದು ಬಹಿರಂಗವಾಗಿದೆ. ಈ ಗೋಲ್ಮಾಲ್​ಗೆ ಸಂಬಂಧಿಸಿದ ದಾಖಲೆ ಪತ್ರಗಳು ‘ವಿಜಯವಾಣಿ’ಗೆ ಲಭ್ಯವಾಗಿವೆ. ಈ ಬಗ್ಗೆ ವಿಸ್ತೃತ ವರದಿ ಇಂದು ಪ್ರಕಟವಾಗಿದೆ. ವರದಿಯ ಪ್ರತಿಯನ್ನು ಟ್ವೀಟ್​ ಮಾಡಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​ ‘ಉತ್ತರ ಕೊಡಿ ಬಿಜೆಪಿ’ ಎಂದು ಆಗ್ರಹಿಸಿದ್ದಾರೆ.

    ಇದನ್ನೂ ಓದಿರಿ ಸಿಎಂ ಯಡಿಯೂರಪ್ಪಗೆ ಕರೊನಾ ನೆಗೆಟಿವ್​

    ಕರೊನಾ ಉಪಕರಣ ಹಾಗೂ ಔಷಧ ಸಾಮಗ್ರಿಯಲ್ಲಿ ಅಕ್ರಮ ನಡೆದಿದೆ ಎಂದು ಪ್ರತಿಪಕ್ಷಗಳು ಆರೋಪಿಸಿ ಲೆಕ್ಕ ಕೇಳುತ್ತಿರುವಾಗಲೇ ಮಾರುಕಟ್ಟೆ ದರಕ್ಕಿಂತ ಎರಡ್ಮೂರು ಪಟ್ಟು ಹೆಚ್ಚು ಹಣ ಪಾವತಿಸಿ ವೆಂಟಿಲೇಟರ್​ ಖರೀದಿಸಿರುವ ಈ ಗೋಲ್ಮಾಲ್​ ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ. ತಮಿಳುನಾಡು ಸರ್ಕಾರ ಪ್ರತಿ ವೆಂಟಿಲೇಟರ್​ಗೆ 4.78 ಲಕ್ಷ ರೂ. ನಂತೆ 4.78 ಕೋಟಿ ರೂ. ವೆಚ್ಚದಲ್ಲಿ 100 ವೆಂಟಿಲೇಟರ್​ ಖರೀದಿಸಿದೆ. ಆದರೆ, ಕರ್ನಾಟಕದ ಅಧಿಕಾರಿಗಳು ಮಾತ್ರ ಮಾರುಕಟ್ಟೆ ದರದ ಬದಲು ಕಮಿಷನ್​ ಆಸೆಗಾಗಿ ಪ್ರತಿ ವೆಂಟಿಲೇಟರ್​ಗೆ ಗರಿಷ್ಠ 18.20 ಲಕ್ಷ ರೂ.ನಂತೆ 15.86 ಕೋಟಿ ರೂ. ವೆಚ್ಚದಲ್ಲಿ 200 ವೆಂಟಿಲೇಟರ್​ ಖರೀದಿಸಿದ್ದಾರೆ. ಹೆಚ್ಚುವರಿ ಮೊತ್ತದಿಂದಾಗಿ ಸರ್ಕಾರಕ್ಕೆ 6.30 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.

    ಈ ಬಗ್ಗೆ ಅಸಮಾಧಾನ ಹೊರಹಾಕಿರುವ ಡಿಕೆಶಿ, ಕರೊನಾ ಸಂಕಷ್ಟದ ಕಾಲದಲ್ಲೂ ವೆಂಟಿಲೇಟರ್ ಖರೀದಿ ಹೆಸರಲ್ಲಿ ನಡೆದಿರುವ ಹಗರಣ ಬಯಲಾಗಿದೆ. ನಿಮ್ಮ ಸರ್ಕಾರದಲ್ಲಿ ನಡೆದಿರುವ ಈ ಭ್ರಷ್ಟಾಚಾರದ ಬಗ್ಗೆ ನಮಗೆ ಉತ್ತರಿಸಿ ಎಂದು ರಾಜ್ಯ ಸರ್ಕಾರವನ್ನು ಆಗ್ರಸಿದ್ದಾರೆ.

    ಪಿಪಿಇ ಕಿಟ್​ನ ಗುಣಮಟ್ಟದ ಬಗ್ಗೆ ವಿಜಯವಾಣಿ ಕಳೆದ ಏಪ್ರಿಲ್​ನಲ್ಲೇ ಮುಖಪುಟದಲ್ಲಿ ವಿಶೇಷ ವರದಿ ಪ್ರಕಟಿಸಿ ಸರ್ಕಾರವನ್ನು ಎಚ್ಚರಿಸಿತ್ತು. ಅಲ್ಲದೆ, ಅಧಿಕಾರಿಗಳ ನಿರಂತರ ಕರ್ಮಕಾಂಡಗಳ ಬಗ್ಗೆ ವಿಸ್ತೃತ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.

    ವಿಜಯವಾಣಿ ಓದ್ರಿ, ಎಲ್ಲ ಡೀಟೇಲ್ ಇದೆ.. ವೆಂಟಿಲೇಟರ್ ಗೋಲ್ಮಾಲ್ ಬಗ್ಗೆ ಡಿಕೆಶಿ ಹೇಳಿದ್ದು ಹೀಗೆ…

    ವಿಜಯವಾಣಿ ಓದ್ರಿ, ಎಲ್ಲ ಡೀಟೇಲ್ ಇದೆ.. ವೆಂಟಿಲೇಟರ್ ಗೋಲ್ಮಾಲ್ ಬಗ್ಗೆ ಡಿಕೆಶಿ ಹೇಳಿದ್ದು ಹೀಗೆ…ಇಂದು 'ವಿಜಯವಾಣಿ' ಮುಖಪುಟದಲ್ಲಿ ಪ್ರಕಟಗೊಂಡ 'ವೆಂಟಿಲೇಟರ್​ ಗೋಲ್ಮಾಲ್​' ವರದಿಯನ್ನು ಹಿಡಿದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ರಾಜ್ಯ ಸರ್ಕಾರಕ್ಕೆ ಹೇಗೆ ಚಾಟಿ ಬೀಸಿದ್ದಾರೆ ನೋಡಿ. ಕೋವಿಡ್​ ನಿರ್ವಹಣೆ ಹೆಸರಲ್ಲಿ ಅಧಿಕಾರಿಗಳ ನಿರಂತರ ಕರ್ಮಕಾಂಡಗಳ ಬಗ್ಗೆ ವಿಜಯವಾಣಿ ಈಗಾಗಲೇ ಸರಣಿ ವರದಿ ಪ್ರಟಿಸಿದೆ. ಪಿಪಿಇ ಕಿಟ್​, ಸ್ಯಾನಿಟೈಸರ್​, ಥರ್ಮಲ್​ ಸ್ಕ್ರೀನಿಂಗ್​ ಉಪಕರಣ ಖರೀದಿ ಹಗರಣ ಬಯಲಾದ ಬೆನ್ನಲ್ಲೇ ವೆಂಟಿಲೇಟರ್​ ಖರೀದಿಯಲ್ಲೂ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ. https://bit.ly/32v6IG1#Ventilator #Scam #DKS #Vijayavani

    Posted by Vijayavani on Saturday, July 18, 2020

    video/ ‘ರಮ್’ ಕುಡಿದ್ರೆ ಕರೊನಾ ಬರಲ್ಲ; ಕೌನ್ಸಿಲರ್ ರವಿಚಂದ್ರ ಗಟ್ಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts