More

    ವೆಂಟಿಲೇಟರ್ ಖರೀದಿ ಅಕ್ರಮ: ಸದನದಲ್ಲಿ ಪ್ರತಿಧ್ವನಿಸಿದ ‘ವಿಜಯವಾಣಿ’ ವರದಿ

    ಬೆಂಗಳೂರು: ವೆಂಟಿಲೆಟರ್ ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಕುರಿತು ವಿಜಯವಾಣಿ ಪ್ರಕಟಿಸಿದ್ದ ವರದಿ ವಿಧಾನಸಭೆಯಲ್ಲಿ ಪ್ರತಿಧ್ವನಿಸಿತು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡುವ ಸಂದರ್ಭ ವಿಜಯವಾಣಿ ವರದಿಯನ್ನು ಪ್ರದರ್ಶಿಸಿದರು.

    ‘‘ಅಷ್ಟೇ ಅಲ್ಲದೆ, ಕೆಡಿಎಲ್​ಡಬ್ಲ್ಯುಎಸ್ (ಕರ್ನಾಟಕ ರಾಜ್ಯ ಡ್ರಗ್ಸ್​ ಲಾಜಿಸ್ಟಿಕ್​ ಆ್ಯಂಡ್​ ವೇರ್​ಹೌಸಿಂಗ್​ ಸೊಸೈಟಿ)​ ಖರೀದಿಸಿದ ವೆಂಟಿಲೆಟರ್‌ಗಳ ಖರೀದಿಯಲ್ಲೂ ಭ್ರಷ್ಟಾಚಾರವಾಗಿದೆ, ಮೂರು ಪಟ್ಟು ಹೆಚ್ಚಾದ ದರದಲ್ಲಿ ವೆಂಟಿಲೆಟರ್ ಖರೀದಿಸಲಾಗಿದೆ ಎಂಬುದಾಗಿ ವಿಜಯವಾಣಿ ವರದಿ ಮಾಡಿದೆ. ನೋಡಿ’’ ಎಂದು ವಿಷಯ ಪ್ರಸ್ತಾಪಿಸಿ ಐದಾರು ಬಾರಿ ವಿಜಯವಾಣಿ ವರದಿಯನ್ನು ಪ್ರದರ್ಶಿಸಿದರು. ಇದನ್ನೂ ಓದಿರಿ ಸದನದಲ್ಲಿ ತನ್ನದೇ ಸರ್ಕಾರದ ವಿರುದ್ಧ ಧರಣಿಗೆ ಕುಳಿತ ಬಿಜೆಪಿ ಎಂಎಲ್ಸಿ!

    ‘‘ದರ ವ್ಯತ್ಯಾಸವೆಂದರೆ ಶೇ. 5-10 ಆಗಬಹುದು. ರಾಜ್ಯ ಸರ್ಕಾರ ಖರೀದಿಸಿದ ವೆಂಟಿಲೆಟರ್‌ಗಳ ಬೆಲೆ ವಿಚಿತ್ರವಾಗಿದೆ. 18 ಲಕ್ಷ ರೂ., 13 ಲಕ್ಷ ರೂ., 12 ಲಕ್ಷ ರೂ., 10 ಲಕ್ಷ ರೂ. ಹೀಗೆ ವಿವಿಧ ಬೆಲೆಯಲ್ಲಿ ಖರೀದಿಸಿದ್ದಾರೆ. ಕೇಂದ್ರ ಸರ್ಕಾರ ಪ್ರಧಾನಿ ಕೇರ್ಸ್ ಫಂಡ್ ಮೂಲಕ ದೇಶಾದ್ಯಂತ 50 ಸಾವಿರ ವೆಂಟಿಲೇಟರ್‌ಗಳನ್ನು ಖರೀದಿಸಿದೆ. ಕರ್ನಾಟಕಕ್ಕೂ 2 ಸಾವಿರ ವೆಂಟಿಲೇಟರ್‌ಗಳನ್ನು ಕಳಿಸಿದೆ. ಅದರ ಬೆಲೆ ತಲಾ 4 ಲಕ್ಷ ರೂ. ಮಾತ್ರ. ಹಾಗಿದ್ದರೆ ರಾಜ್ಯ ಸರ್ಕಾರ ಖರೀದಿಸಿದ ವೆಂಟಿಲೇಟರ್ ಯಾವ ರೋಗಿಗೆ ಬಳಸಲು ಖರೀದಿಸಿದ್ದು’’ ಎಂದು ಪ್ರಶ್ನಿಸಿದರು.

    ‘‘ಐಸಿಯುನಲ್ಲಿ ಒಂದೇ ಸ್ಟ್ಯಾಂಡರ್ಡ್ ಇರಬೇಕಲ್ಲವೇ? ಹಾಗಿದ್ದರೆ, ಕೇಂದ್ರ ಸರ್ಕಾರ ಕಳಿಸಿದ ವೆಂಟಿಲೇಟರ್ ಕಳಪೆಯವೇ? ಅದನ್ನು ಬಳಸುವುದಿಲ್ಲವೇ ಸ್ಪಷ್ಟಪಡಿಸಿ. ನಾನೇನು ಸುಳ್ಳು ಹೇಳುತ್ತಿಲ್ಲ. ಆರೋಗ್ಯ ಇಲಾಖೆ ಅಧಿಕಾರಿ ನೀಡಿದ ದಾಖಲೆಯನ್ನೇ ಪ್ರಸ್ತಾಪಿಸುತ್ತಿದ್ದೇನೆ. ಇಷ್ಟೊಂದು ದುಬಾರಿಗೆ ಖರೀದಿಸಲಾಗಿದೆ ಎಂದರೆ ಅನುಮಾನ ಸಹಜ. ಸರ್ಕಾರದ ಹಣಕ್ಕೆ ಯಾರು ಜವಾಬ್ದಾರಿ?’’ ಎಂದು ಕೇಳಿದರು.

    ಅತಿಥಿ ಉಪನ್ಯಾಸಕರಿಗೆ ಗುಡ್​ ನ್ಯೂಸ್ ಕೊಟ್ಟ ಸಿಎಂ ಯಡಿಯೂರಪ್ಪ

    ವಿಧಾನಸಭೆಯ ಕ್ಯಾಂಟೀನ್​ನಲ್ಲಿ ಕಿತ್ತಾಡಿಕೊಂಡು ಹೊಡೆದಾಟಕ್ಕೆ ಮುಂದಾದ ಶಾಸಕ-ಸಚಿವ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts