More

    ವೇಮಗಲ್-ಕುರಗಲ್ ಇನ್ಮುಂದೆ ಪಟ್ಟಣ ಪಂಚಾಯಿತಿ, ಸಚಿವ ಸಂಪುಟದಲ್ಲಿ ಅನುಮೋದನೆ

    ಕೋಲಾರ: ಜಿಲ್ಲೆಯ ಅತಿದೊಡ್ಡ ಹೋಬಳಿಯಾದ ವೇಮಗಲ್ ಹಾಗೂ ಈ ವ್ಯಾಪ್ತಿಯ ಕುರುಗಲ್ ಅನ್ನು ಸೇರಿಸಿ ಪಟ್ಟಣ ಪಂಚಾಯಿತಿಯಾಗಿಸಲು ರಾಜ್ಯ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿರುವುದಕ್ಕೆ ಜನರಿಂದ ಹರ್ಷ ವ್ಯಕ್ತವಾಗಿದೆ.

    ಹಿರಿಯ ರಾಜಕೀಯ ಮುತ್ಸದ್ಧಿಗಳಾದ ದಿವಂಗತ ಜಿ.ಎನ್.ಗೌಡ, ಸಿ.ಬೈರೇಗೌಡ, ಗೋವಿಂದಗೌಡ ಹಾಗೂ ವೇಮಗಲ್ ಕ್ಷೇತ್ರದ ಕೊನೆಯ ಶಾಸಕ ಸಿ.ಕೃಷ್ಣಬೈರೇಗೌಡ ಪ್ರತಿನಿಧಿಸಿದ್ದ ವೇಮಗಲ್, ಕ್ಷೇತ್ರ ವಿಗಂಡನೆ ಬಳಿಕ ಕೋಲಾರ ಕ್ಷೇತ್ರಕ್ಕೆ ಸೇರ್ಪಡೆಯಾದ ದಿನದಿಂದಲೂ ಎಲ್ಲ ಪಕ್ಷಗಳ ಮುಖಂಡರು, ಸಾರ್ವಜನಿಕರು ವೇಮಗಲ್ ಅನ್ನು ತಾಲೂಕು ಕೇಂದ್ರವನ್ನಾಗಿ ೋಷಣೆ ವಾಡಲು ಹೋರಾಟ ನಡೆಸಿದ್ದರು. ಇದೀಗ ಈ ಭಾಗದ ಜನರ ಕನಸು ಈಡೇರಿದ್ದು, ಸಂಪುಟದ ನಿರ್ಣಯ ಶ್ರೀ ಕಾರ್ಯರೂಪಕ್ಕೆ ಬರಲಿ ಎಂದು ಆಶಿಸಿದ್ದಾರೆ.

    ಹೊಸ ಪಪಂ ವ್ಯಾಪ್ತಿಗೆ ಸುವಾರು 20 ಸಾವಿರ ಜನ ಒಳಪಡಲಿದ್ದಾರೆ. ವೇಮಗಲ್, ಕುರಗಲ್ ಗ್ರಾಪಂಗಳು ಮತ್ತು ಚೌಡದೇನಹಳ್ಳಿ ಗ್ರಾಪಂನ ಕಲ್ವ, ಚಿಕ್ಕವಲ್ಲಬ್ಬಿ, ಮಂಜಲಿ, ಶೆಟ್ಟಿಹಳ್ಳಿ ಗ್ರಾಪಂನ ಪುರಹಳ್ಳಿಗಳನ್ನು ಒಟ್ಟುಗೂಡಿಸಿ ವೇಮಗಲ್ ಕೈಗಾರಿಕಾ ಪ್ರದೇಶವನ್ನೂ ಒಳಗೊಂಡಂತೆ ಪಪಂ ರಚನೆಗೆ ಸೂಚಿಸಲಾಗಿದೆ.

    ಸರ್ಕಾರದ ನಿರ್ಧಾರದಿಂದ ಬೆಂಗಳೂರಿನ ಮೇಲೆ ಒತ್ತಡ ಕಡಿಮೆ ಆಗುವುದಲ್ಲದೆ, ರಾಜಧಾನಿ ಹೊರವಲಯದ ಚಿಕ್ಕ ಹಳ್ಳಿಗಳ ಅಭಿವೃದ್ಧಿಗೆ ಸಹಾಯವಾಗಲಿ ಎಂಬುದು ಜನರ ಅಭಿಪ್ರಾಯವಾಗಿದೆ. ಈಗಾಗಲೇ ವೇಮಗಲ್ ಹಾಗೂ ಕುರುಗಲ್ ಸಾಕಷ್ಟು ಅಭಿವೃದ್ಧಿಯಾಗಿದ್ದು, ಇನ್ನು ಮುಂದೆ ಹೆಚ್ಚಿನ ಅನುದಾನ ಪಡೆದು ಮೂಲಸೌಕರ್ಯ ಕಲ್ಪಿಸುವುದಕ್ಕೆ ಅನುಕೂಲವಾಗಲಿದೆ.

    ಜನರ ಆಶಯಕ್ಕೆ ತಕ್ಕಂತೆ ಪಪಂ ವಾಡಲು ವಿಧಾನ ಪರಿಷತ್ ವಾಜಿ ಸಭಾಪತಿ ವಿ.ಆರ್.ಸುದರ್ಶನ್ ಜನವರಿಯಲ್ಲೇ ಒತ್ತಡ ತಂದು ಅದಕ್ಕೆ ಪೂರಕ ದಾಖಲೆಗಳನ್ನು ಸರ್ಕಾರಕ್ಕೆ ನೀಡಿದ ಫಲದಿಂದಾಗಿ ಸರ್ಕಾರ ಎಲ್ಲ ಮೂಲೆಗಳಿಂದ ಅವಲೋಕಿಸಿ ಅನುಮೋದನೆ ನೀಡಿದೆ.

    20 ಸಾವಿರ ದಾಟಿದ ಜನಸಂಖ್ಯೆ: 2011ರ ಜನಗಣತಿ ಪ್ರಕಾರ ವೇಮಗಲ್, ಕುರುಗಲ್ ಹಾಗೂ ಇದರ ವ್ಯಾಪ್ತಿಯ ಹಳ್ಳಿಗಳ ಜನಸಂಖ್ಯೆ 16,186 ಇದ್ದು, ಪ್ರಸ್ತುತ 20 ಸಾವಿರ ದಾಟಿರಬಹುದೆಂದು ಅಂದಾಜು ವಾಡಲಾಗಿದೆ. ವೇಮಗಲ್‌ನಲ್ಲಿ ಈಗಾಗಲೇ ಸರ್ಕಾರದ ವಿವಿಧ ಇಲಾಖೆಗಳು ಸಕ್ರಿಯವಾಗಿವೆ. ಸಾರಿಗೆ ವ್ಯವಸ್ಥೆ ಉತ್ತಮವಾಗಿದೆ, ಕಾನೂನು ಸುವ್ಯವಸ್ಥೆಗೆ ಠಾಣೆ ಸಜ್ಜಾಗಿದೆ. ರೈತರಿಗೆ ಬೇಕಾದ ಸೌಕರ್ಯಗಳು ಸಿಗುತ್ತಿವೆ, ಕೈಗಾರಿಕೆಗಳು ಅಭಿವೃದ್ಧಿಗೊಳ್ಳುತ್ತಿರುವುದರಿಂದ ಹೊಸ ಪಪಂ ರಚನೆ ಲಾಭದಾಯಕ ಎಂಬುದು ಜನರ ಅಭಿಪ್ರಾಯವಾಗಿದೆ.

     

    ಜನರ ಅಭಿಲಾಷೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತವರ ಸಚಿವರು ಸ್ಪಂದಿಸಿ ಪಪಂ ಆಗಿಸಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿರುವುದು ಹರ್ಷ ಉಂಟು ವಾಡಿದೆ. ಇದರಿಂದ ಅಭಿವೃದ್ಧಿಯ ವೇಗ ಹೆಚ್ಚಲಿದೆ. ಜನರಿಗೆ ಮೂಲ ಸೌಕರ್ಯ ಕಲ್ಪಿಸಲು ಅನುವಾಗಲಿದೆ. ಸರ್ಕಾರಕ್ಕೆ ಜನತೆ ಪರವಾಗಿ ಅಭಿನಂದನೆ.
    ವಿ.ಆರ್.ಸುದರ್ಶನ್, ವಿಧಾನ ಪರಿಷತ್ ವಾಜಿ ಸಭಾಪತಿ

    ವಿಧಾನ ಪರಿಷತ್ ವಾಜಿ ಸಭಾಪತಿ ವಿ.ಆರ್.ಸುದರ್ಶನ್ ಅವರ ಪ್ರಯತ್ನ, ವರ್ತೂರ್ ಪ್ರಕಾಶ್ ಅವರು ಶಾಸಕರಾಗಿದ್ದಾಗ ಮಂಜೂರಾಗಿದ್ದ ಅನುದಾನದಿಂದ ಜಾರಿಗೆ ತಂದಿರುವ ಅಭಿವೃದ್ಧಿ ಕಾಮಗಾರಿಗಳಿಂದಾಗಿ ವೇಮಗಲ್-ಕುರುಗಲ್ ಪಪಂ ಆಗಿ ಮೇಲ್ದರ್ಜೆಗೆ ಏರಿದೆ. ಸರ್ಕಾರದ ನಿರ್ಧಾರ ಸ್ವಾಗತಿಸುವೆ.
    ಎನ್.ವೆಂಕಟೇಶ್, ಅಧ್ಯಕ್ಷರು, ಜಿಪಂ,ಕೋಲಾರ

    ಸವಾಜ ಸುಧಾರಕ, ದಾನಿ ದಿ.ರಾಮಶೆಟ್ಟಿ ಅವರು ನಿರ್ಮಿಸಿದ ವೇಮಗಲ್, ತಾಲೂಕು ಕೇಂದ್ರವಾಗಬೇಕೆಂದು ಅನೇಕ ಹೋರಾಟ ನಡೆದಿತ್ತು. ಹಾಲಿ ಸರ್ಕಾರ ಜನರ ಭಾವನೆಗೆ ಸ್ಪಂದಿಸಿ ಪಪಂ ವಾಡಲು ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿರುವುದರಿಂದ ಸಂತೋಷವಾಗಿದೆ.
    ಗೌಡರ ಚಿಕ್ಕಮುನಿಯಪ್ಪ, ಮುಖಂಡ, ವೇಮಗಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts